ಧರ್ಮ ವಿರೋಧಿಗಳಿಂದಲೇ ಧರ್ಮದ ಹೊಳಪು ಹೆಚ್ಚಲಿದೆ : ಶ್ರೀ ಉಜ್ಜಿನಿ ಜಗದ್ಗುರು

ಕೊಟ್ಟೂರು: ನಾವೇಲ್ಲಾರು ಭಾರತೀಯರು ಎನ್ನುವಂತ ಭಾವ ಮೂಡಲಿ, ಇಂದಿನ ಮಕ್ಕಳಿಗೆ ಗುರಕುಲ ಶಿಕ್ಷಣ ಅವಶ್ಯಕತೆಯಿದೆ ಅಂತಹ ಶಿಕ್ಷಣ ಸಿಗಬೇಕಾದರೆ ಅದು ಮಠಗಳಿಂದ ಮಾತ್ರ ಸಾಧ್ಯ ಎಂದು ಉಜ್ಜಿನಿ ಜಗದ್ಗುರು ಶಿವಾಚಾರ್ಯ ಶ್ರೀಗಳು ಹೇಳಿದರು.
ಪಟ್ಟಣದ ಡೊಣೂರು ಚಾನುಕೋಟಿ ಮಠದ ಆವರಣದಲ್ಲಿ ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಡಾ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳವರ ಷಷ್ಠಿ ಸಂಭ್ರಮ ಗುರುವಾರ ಇಷ್ಟ ಲಿಂಗ ಪೂಜೆ ಮತ್ತು ಧರ್ಮಸಭೆ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಠಗಳಲ್ಲಿ ಮಕ್ಕಳು ಓದುವ ಸಂಖ್ಯೆ ಹೆಚ್ಚಬೇಕು, ಇಂದಿನ ಶಿಕ್ಷಣ ಕೇವಲ ಅಂಕಪಟ್ಟಿಗೆ ಸೀಮಿತ
ವಾಗಿದೆ. ನೈತಿಕ, ಆಧ್ಯಾತ್ಮಿಕ,ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಅವಶ್ಯಕವಿದೆ ಎಂದರು.
ಸಿದ್ದಾಂತ ಶಿಖಾಮಣಿಯಲ್ಲಿ ವೀರಶೈವ ಪರಂಪರೆ
ಯ ಮಹತ್ವ ತಿಳಿಸಿದ್ದಾರೆ. ಪಂಚಪೀಠಗಳ ಮಹತ್ವ ಹಾಗೂ ಅವುಗಳ ಮೂಲಸ್ಥಾನದ ಬಗ್ಗೆ ತಿಳಿಸಿ ವಿಶ್ವದಲ್ಲೇ ವೀರಶೈವ ಧರ್ಮ ವಿಶ್ವಮಾನ್ಯವಾಗಿದೆ. ಸ್ವ ಧರ್ಮಿಯರಿಂದಲೇ ಧರ್ಮಕ್ಕೆ ಅಪಚಾರ ನಡೆಯುತ್ತಿದೆ ಆದರೆ ಅಂತವರಿಂದ ಮತ್ತೊಷ್ಟು ಧರ್ಮದ ಹೊಳಪು ಹೆಚ್ಚುತ್ತದೆ. ಮನಸ್ಸಿನಂತೆ ಮಹಾದೇವ, ನಮ್ಮ ಮನಸ್ಸು ಯಾವ ವಿಷಯದ ಬಗ್ಗೆ ಚಿಂತಿಸುತ್ತದೆ ಎಂಬ ಅರಿವು ನಮಗಿರಬೇಕು ಎಂದು ಆಶೀರ್ವಾಚನ ನೀಡಿದರು.

14 ದಿನಗಳ ಕಾರ್ಯಕ್ರಮ ಎಂದರೆ ಅದು ಬಹಳ ಮಹತ್ವ ಹಾಗೂ ಅರ್ಥಪೂರ್ಣ ಕಾರ್ಯಕ್ರಮ. ಇಷ್ಟೊಂದು ದೊಡ್ಡ ಕಾರ್ಯಕ್ರಮದಲ್ಲಿ ಎಲ್ಲಾ ಕ್ಷೇತ್ರಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನಮ್ಮ ಸಹಕಾರಿ ಕ್ಷೇತ್ರ ಕೂಡ ಇಂದು ಅತ್ಯಂತ ಪ್ರಬಲವಾಗಿ ಗುರುತಿಸಿಕೊಂಡಿದೆ. ಸಹಕಾರಿ ಕ್ಷೇತ್ರದ ಸಾಧಕರನ್ನು ಗುರುತಿಸಿ ಶ್ರೀಗಳ ಆರ್ಶೀವಾದ ನೀಡಿದ್ದರೆ ತುಂಬಾ ಚನ್ನಾಗಿತ್ತು. ಮುಂದಿನ ದಿನಗಳಲ್ಲಾದರು ಸಹಕಾರಿ ಸಾಧಕರನ್ನು ಗುರುತಿಸುವಂತಾಗಲಿ ಎಂದು ಕೆ ತಿಪ್ಪೇಸ್ವಾಮಿ ಬಿಡಿಸಿಸಿ ಬಳ್ಳಾರಿ ವಿಜಯನಗರ ಜಿಲ್ಲಾ ಅಧ್ಯಕ್ಷರು ಹೇಳಿದರು.
ಡಾ.ವಿಜಯಲಕ್ಷ್ಮಿ ಬಿಳೆಕುಂದ್ರಿ ಅರೋಗ್ಯ ಕುರಿತು ಜಾಗ್ರತೆ ಮುಡಿಸಿದರು.
ಡಾ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು,
ದಾರುಕೇಶ್ ಬಿಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷರು, ಮಹಾಬಲೇಶ್ವರ ವಿಶ್ರಾಂತ ಪ್ರಧ್ಯಾಪಕ, ದೇವರ ಮನಿ ಕರಿಯಪ್ಪ, ಶೈಲಾಜ ರಾಜೀವ್ವೈ ಮೈದೂರು, ವಿಧ್ಯಾಶ್ರೀ ಮೇಘರಾಜ್ ಪ ಪಂ ಸದಸ್ಯರು,ರಂಪುರ ವಿವೇಕಾನಂದ ವರ್ತಕರು,ಅಜ್ಜನ ಗೌಡ, ಈಶ್ವರಯ್ಯ ಪಿ ಎಂ,
ಇತರರು ಪ್ರಾಶಾಂತ ಸಾಗರ ಶ್ರೀಗಳು, ಬೆಣ್ಣೆ ಹಳ್ಳಿ ಶ್ರೀ ಗಳು ಸೇರಿದಂತೆ ಇತರೆ ಶ್ರೀಗಳು ವೇದಿಕೆಯಲ್ಲಿದ್ದರು.
ಈ ವೇಳೆ 60 ಸ್ರೀ ಶಕ್ತಿ ಗುಂಪು ಮಹಿಳೆಯರಿಗೆ ಸನ್ಮಾನಿಸಲಾಯಿತು.
ಜೇವನ ದರ್ಶನ್ ಹಿರಿಯ ಪ್ರಾಥಮಿಕ ಶಾಲೆ, ಚನುಕೋಟಿ ಮಠದ ವಿಧ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದರು.
ಶ್ರೀ ಮತಿ ರೂಪ ಮಾಮನಿ ಶಿಕ್ಷಕಿ ಸ್ವಾಗತಿಸಿದರು.
ವೀಣಾ ವಿವೇಕಾನಂದ ಗೌಡ ಪ. ಪಂ ಸದಸ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಾ ಶಿವಕುಮಾರ್ ಶಿಕ್ಷಕಿ ನಿರೂಪಿಸಿದರು.
ಇದಕ್ಕೂ ಮುನ್ನ ಪಟ್ಟಣದ
ಯುನಿಕ್ ಚಾರಿಟಬಲ್ ಟ್ರಸ್ಟ್ ಕೊಟ್ಟೂರು ಇವರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಜರುಗಿತು. 350 ಕ್ಕೂ ಹೆಚ್ಚು ಜನರು ತಪಾಸಣೆ ಪಡೆದರು 10 ಜನರನ್ನ ಉನ್ನತ ಚಿಕಿತ್ಸೆಗಾಗಿ ಸಪ್ತಗಿರಿ ಮಲ್ಟಿಸ್ಪೇಷಲಿಟಿ ಆಸ್ಪತ್ರೆ ಬೆಂಗಳೂರು ಬರುವಂತೆ ವೈದ್ಯರು ಸಲಹೆ ನೀಡಿದ್ದಾರೆ.
