ಗ್ಯಾರಂಟಿ ಯೋಜನೆಗಳು ನಾಟಕ ಕಂಪನಿಗಳ ಅನುದಾನ ಕಸಿದುಕೊಂಡಿವೆ.ನಾಟಕಗಳನ್ನು ಮಹಿಳೆಯರು ತಲೆ ಎತ್ತಿ ನೋಡುವಂತ್ತಿರಬೇಕೇ ಹೊರತು ತಲೆ ತಗ್ಗಿಸುವಂತಿರಬಾರದು – ಜೇವರ್ಗಿ ರಾಜಣ್ಣ

ಕೊಟ್ಟೂರು: ಸಿನಿಮಾ,ದಾರವಾಹಿಗಳ ಭಾರಟೆಯಲ್ಲಿ ವೃತ್ತಿ ರಂಗಭೂಮಿ ಮಾಲೀಕರು ಉತ್ತಮ ಗುಣಮಟ್ಟದ ನಾಟಕ ನೀಡಿದಾಗ ಮಾತ್ರ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘ ಜೇವರ್ಗಿ ಮಾಲೀಕರು ಹಾಗೂ ನಾಟಕ ಅಕಾಡೆಮಿ ಸದಸ್ಯರಾಜ ಜೀವರ್ಗಿ ರಾಜಣ್ಣ ಹೇಳಿದರು.
ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ
ಶ್ರೀ ಗುರು ಪುಟ್ಟರಾಜ ನಾಟ್ಯ ಸಂಘ ಗದಗ ಹಾಗೂ ಶ್ರೀ ಕುಮಾರ ವಿಜಯ ನಾಟಕ ಸಂಘ ಚಿತ್ತರಗಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ನಾಟಕ ಕಂಪನಿಗಳ ಅನುದಾನ ಕಸಿದುಕೊಂಡಿವೆ. ನಾಟಕಗಳನ್ನು ಮಹಿಳೆಯರು ತಲೆ ಎತ್ತಿ ನೋಡುವಂತ್ತಿರಬೇಕೇ ಹೊರತು ತಲೆ ತಗ್ಗಿಸುವಂತಿರಬಾರದು ಎಂದರು.

ದ್ವಂದ್ವ ಸಂಭಾಷಣೆ ರಹಿತ ಹಾಸ್ಯ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನಾಟಕಗಳನ್ನು ಜನರು ನೀಡುವ ವೀಕ್ಷಿಸಿ ಪ್ರೋತ್ಸಾಹಿಸುತ್ತಾರೆ ಎಂದುರು. ರಾಜ್ಯದಲ್ಲಿ ಎಪ್ಪತ್ತರಿಂದ ಎಂಬತ್ತು ವೃತ್ತಿ ನಾಟಕ ಕಂಪನಿಗಳಿದ್ದವು. ಈಗ ಬೆರಳೆಣಿಕೆ
ಯಷ್ಟು ಕುಸಿದಿವೆ ಎಂಬ ಅತಂಕ ವ್ಯಕ್ತಪಡಿಸಿದರು.
ಯುವ ಕಲಾವಿದರು ವೃತ್ತಿ ರಂಗಭೂಮಿಗೆ ಹೆಚ್ಚಾಗಿ ಬರಬೇಕು.ದುಷಚಟಗಳಿಗೆ ಬಲಿಯಾಗದೇ ದುಂದು ವೆಚ್ಚಕ್ಕೆ ಕಡಿವಾಣ ಹಾಕಿಬೇಕು. ತಮ್ಮ ಕಲೆಯನ್ನು ಶ್ರದ್ದೆಯಿಂದ ಪ್ರದರ್ಶನ ನೀಡಿದರೆ. ಸರ್ಕಾರಿ ನೌಕರಿಗಿಂತ ಹೆಚ್ಚಿನ ಸಂಭಾವಾನೆ ಪಡೆಯುತ್ತಾನೆ ಎಂದರು.

ವೃತ್ತಿ ನಾಟಕ ಕಂಪನಿಗಳ ಪ್ರದರ್ಶನದಲ್ಲಿ ಪ್ರೇಕ್ಷಕರು ತುಂಬಿದ್ದರೆ, ದಿನವೂ ರಂಗಭೂಮಿ ದಿನಾಚರಣೆ
ಯಾಗಲಿದೆ. ಸರ್ಕಾರ ವಿವಿಧ ಉತ್ಸವಗಳಿಗೆ ಖರ್ಚು ಮಾಡುವ ಹಣದ ಅರ್ಧ ಭಾಗವನ್ನು ಕಂಪನಿ ನಾಟಕಗಳಿಗೆ ನೀಡಿದರೆ, ನಾಟಕ ಕಲೆ ಜೀವಂತವಾಗಿ ಉಳಿಯುತ್ತವೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕು ಎಂದು ಚಿಂದೋಡಿ ಶ್ರೀಕಂಠೇಶ್
ಕೆ ಬಿ ಅರ್ ನಾಟಕ ಕಂಪನಿ ಮಾಲೀಕರು
ಅಧ್ಯಕ್ಷತೆವಹಿಸಿ ಮಾತನಾಡಿದರು.
ಡಾ.ರಾಜಕುಮಾರ್ ಸೇರಿದಂತೆ ಪ್ರಸಿದ್ದ ಸಿನಿಮಾ ನಟರು ಅಭಿನಯಿಸಿದ ಹೆಗ್ಗಳಿಕೆ ನಮ್ಮ ಕೆ.ಬಿ.ಆರ್. ಕಂಪನಿಗಿದೆ. ಈ ಕಂಪನಿ ಆರಂಭಿಸಿ 98 ವರ್ಷವಾಗಿದೆ. ಇಡೀ ವಿಶ್ವದಲ್ಲಿ ಸತತ ನೂರು ವರ್ಷ ನಾಟಕ ಪ್ರದರ್ಶನ ನೀಡಿದ ಕಂಪನಿ ನಮ್ಮದು ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಕೊಟ್ಟೂರಿ ನಲ್ಲೇ ಈ ಕಂಪನಿ ಹುಟ್ಟಿದ್ದು ಮತ್ತೊಂದು ವಿಶೇಷ ಎಂದು ಚಿಂದೋಡಿ ಶ್ರೀಕಂಠೇಶ ತಿಳಿಸಿದರು.
ಹಿರಿಯ ಕಲಾವಿದರಾದ ಡಿ.ಕೊಟ್ರೇಶ, ಕೋಗಳಿ ಶಂಕ್ರಯ್ಯ ಅವರನ್ನು ಸನ್ಮಾನಿಸಲಾಯಿತು. ವಿಜಯನಗರ ಜಿಲ್ಲೆ ನಾಟಕ ಅಕಾಡೆಮಿ ಸಂಚಾಲಕ ಮತ್ತಿಹಳ್ಳಿ ಪ್ರಕಾಶ ಪ್ರಸ್ತಾವಿಕವಾಗಿ ಮಾತನಾಡಿದರು.
ಎಪಿಎಂಸಿ ಉಪಾಧ್ಯಕ್ಷ ಎಂ.ಶಿವಣ್ಣ, ಮರಿಸ್ವಾಮಿ, ಕಲಾವಿದರಾದ ಸುಧಾಕರ ಪಟೇಲ್, ಪಾಪು ಕಲ್ಲೂರು, ಮಂಜುನಾಥ ಜಾಲಿಹಾಳ್,ಶಿವನ ಗುತ್ತಿ,
ಪ್ರಕಾಶ್ ಅಂಗಡಿ, ನಿರ್ಮಲ ಶಿವನಗುತ್ತಿ ಇತರರಿದ್ದರು.ದೇವರ ಮನೆ ಸುರೇಶ್ ನಿರೂಪಿಸಿದರು.ತುಂಗಭದ್ರಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಕೂಗಳಿ ಶಂಕರಯ್ಯ ಸುಗಮ ಸಂಗಿತ,
ದಾಯನಂದ ಬಿಳಿಗಿ ನಾಟಕದ ಕೆಲವು ಸನ್ನಿವೇಶ ಪ್ರದರ್ಶನ ನೀಡಿದರು.