ದೇಶ

ರಾಜ್ಯಗಳಿಗೆ ಕೇಂದ್ರದಿಂದ 95000 ಕೋಟಿ ರೂ. ಬಿಡುಗಡೆ..

ನವದೆಹಲಿ, ನ .23- ಕೇಂದ್ರ ಸರ್ಕಾರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣದ ಕಂತನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಎಲ್ಲ ರಾಜ್ಯಗಳಿಗೆ ಒಟ್ಟು 95,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ಕರ್ನಾಟಕ ರಾಜ್ಯಕ್ಕೆ 3,467.62 ಕೋಟಿ ರೂ. ದೊರೆತಿದೆ. ಅದರಲ್ಲೂ ಉತ್ತರ ಪ್ರದೇಶಕ್ಕೆ 17056.66 ಕೋಟಿ ರೂ ಬಿಡುಗಡೆ ಮಾಡುವ ಮೂಲಕ ಸಿಂಹಪಾಲು ನೀಡಿದೆ.
ಕೇಂದ್ರ ಹಣಕಾಸು ಇಲಾಖೆಯಿಂದ ಎರಡು ಕಂತಿನ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಿರುವ ಕಾರಣ ದೊಡ್ಡ ಪ್ರಮಾಣದಲ್ಲಿ ಹಣ ಬಿಡುಗಡೆಯಾಗಿದೆ.
ಕಳೆದ ವಾರ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್​ ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ರಾಜ್ಯಗಳಿಗೆ ತೆರಿಗೆ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ ಇಂದು ಹಣ ಬಿಡುಗಡೆ ಮಾಡಿದ್ದಾರೆ.
ಉತ್ತರಾಖಂಡ್​​ಗೆ 1063.02 ಕೋಟಿ ರೂ., ಮಧ್ಯಪ್ರದೇಶಕ್ಕೆ 7463.92 ಕೋಟಿ ರೂ. ಛತ್ತೀಸ್​ಘಡಕ್ಕೆ 3239.54 ಕೋಟಿ ರೂ. ಮಹಾರಾಷ್ಟ್ರಕ್ಕೆ 6006.30 ಕೋಟಿ, ಗುಜರಾತ್​ಗೆ 3306.94 ಕೋಟಿ ರೂ. ಹಾಗೂ ಗೋವಾಗೆ 367.02 ಕೋಟಿ ರೂ. ಸಿಕ್ಕಿದೆ. ಉಳಿದಂತೆ ಪಂಜಾಬ್​ಗೆ 1718.16 ಕೋಟಿ ರೂ., ಹರಿಯಾಣ 1039.24 ಕೋಟಿ ರೂ., ರಾಜಸ್ಥಾನಕ್ಕೆ 5729.64 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 789.16 ಕೋಟಿ ರೂ., ಆಂಧ್ರಪ್ರದೇಶಕ್ಕೆ 3847.96 ಕೋಟಿ ರೂ., ತೆಲಂಗಾಣ 1998.62 ಕೋಟಿ ರೂ., ತಮಿಳುನಾಡಿಗೆ 3878.38 ಕೋಟಿ ರೂ., ಕರ್ನಾಟಕಕ್ಕೆ 3467.62 ಕೋಟಿ ರೂ ಹಾಗೂ ಕೇರಳಕ್ಕೆ 1830.38 ಕೋಟಿ ರೂ. ದೊರೆತಿದೆ.

Related Articles

Leave a Reply

Your email address will not be published. Required fields are marked *

Back to top button