ಕ್ರೀಡೆ

IPL 2025 | SRH vs RR: ಕಿಶನ್ ಶತಕಕ್ಕೆ ಒಲಿದ ಜಯ; ರಾಜಸ್ಥಾನಕ್ಕೆ ಸೋಲು

ಹೈದರಾಬಾದ್: ತವರಿನ ಅಂಗಳದಲ್ಲಿ ಐಪಿಎಲ್ ಅಭಿಯಾನ ಅರಂಭಿಸಿದ ಸನ್‌ ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್‌ಗೆ ಸೋಲಿನ ರುಚಿ ತೋರಿಸಿತು.

ಟಾಸ್ ಗೆದ್ದ ರಾಜಸ್ಥಾನ ನಾಯಕ ರಿಯಾನ್ ಪರಾಗ್ ಫೀಲ್ಡಿಂಗ್ ಆಯ್ದುಕೊಂಡರು. ಸನ್‌ ರೈಸರ್ಸ್ ಮೊದಲು ಬ್ಯಾಟ್‌ ಮಾಡಿತು.

ಇಶಾನ್ ಕಿಶನ್ ಸ್ಫೋಟಕ ಶತಕ, ಟ್ರಾವಿಸ್ ಗೆಡ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 286 ರನ್‌ಗಳ ಬೃಹತ್ ದಾಖಲೆಯ ರನ್ ಕಲೆ ಹಾಕಿತು. ಇದು ಐಪಿಎಲ್‌ನಲ್ಲಿ ದಾಖಲಾದ ಎರಡನೇ ಅತಿ ದೊಡ್ಡ ಸ್ಕೋರ್. ಈ ಹಿಂದೆ ಹೈದರಾಬಾದ್ ತಂಡವು ಆರ್‌ಸಿಬಿ ವಿರುದ್ಧ 3 ವಿಕೆಟ್‌ಗೆ 287 ರನ್ ಗಳಿಸಿತ್ತು.

ರಾಯಲ್ಸ್ ಪರ ತುಷಾರ್ ದೇಶಪಾಂಡೆ 3, ಮಹೇಶ ತೀಕ್ಷಣ 2 ಹಾಗೂ ಸಂದೀಪ್ ಶರ್ಮಾ 1 ವಿಕೆಟ್ ಕಿತ್ತರು.

ಗುರಿ ಬೆನ್ನತ್ತಿದ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 242 ರನ್‌ ಗಳಿಸಿತು. 44 ರನ್‌ಗಳ ಸೋಲು ಕಂಡಿತು.

ಸಂಜು 66, ದ್ರುವ್‌ 70 ರನ್‌ಗಳಿಸಿ ಗಮನ ಸೆಳೆದರು. ಸನ್‌ ರೈಸರ್ಸ್ ಪರ ಹರ್ಷಲ್‌ ಹಾಗೂ ಸಂಜೀತ್‌ ತಲಾ 2 ವಿಕೆಟ್‌ ಪಡೆದರು.

ವರದಿ: ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button