ಇತ್ತೀಚಿನ ಸುದ್ದಿ
BIG NEWS: ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಫ್ಯಾಕ್ಟರಿ

ಬೆಳಗಾವಿ: ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ.
ಸಕ್ಕರೆ ಕಾರ್ಖಾನೆ ಬಾಯ್ಲರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸಮಯದಲಿ ಮುಗುಲೆತ್ತರಕ್ಕೆ ಬೆಂಕಿಯ ನ್=ಕೆನ್ನಾಅಲಿಗೆ ಹೊತ್ತಿ ಉರಿದಿದೆ.
ಘಟನೆಯಲ್ಲಿ 24 ಟನ್ ಬಾಯ್ಲರ್ ಸುಟ್ಟು ಭಸ್ಮವಾಗಿದೆ.ಘಟನಾ ಸ್ಥಳಕ್ಕೆ 9 ಅಗ್ನಿಶಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದದಲ್ಲಿ ನಿರತವಾಗಿವೆ. ಅದೃಷ್ತವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 5 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.