ಇತ್ತೀಚಿನ ಸುದ್ದಿ

ಮಾ.24 ರಂದು ಸರಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ನಿವೃತ್ತ ಯೋಧರಿಗೆ ರೈತರಿಗೆ ಸನ್ಮಾನ ಕಾರ್ಯಕ್ರಮ -ಹಾಜಿಬಾಬು ಕಲ್ಯಾಣಿ

ಲಿಂಗಸುಗೂರು. ಮಾ. 20.-ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಪ್ರಗತಿಪರ ರೈತರು,ಹಾಗು ಮಾಜಿ ಯೋಧರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಇದೆ ತಿಂಗಳು ಮಾರ್ಚ್ 24 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷ ಹಾಜಿಬಾಬು ಕಲ್ಯಾಣಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಟ್ಟಣದ ರಾಯಚೂರು ರಸ್ತೆಯಲ್ಲಿರುವ ಶಂಕರರೆಡ್ಡಿ ಕಲ್ಯಾಣ ಮಂಟಪದಲ್ಲಿ ಮಾ, 24 ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಜರುಗಲಿದೆ. ಜೊತೆಗೆ ಅಂದೆ ನಿವೃತ್ತ ಸಹಕಾರ ಸಂಘಗಳ ನಿಬಂಧಕರಾದ ಲಿಯಾಖತ ಆಲಿ ಅವರು ಸರಕಾರಿ ಸೇವಾ ನಿಯಮಗಳು ಕುರಿತು ಕಾರ್ಯಾಗಾರವನ್ನು ನಡೆಸಿ ಕೊಡಲಿದ್ದಾರೆ.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಜರುಗಲಿದೆ. ಮತ್ತು ಸಮಾರಂಭದಲ್ಲಿ ಐದು ಜನ ಪ್ರಗತಿಪರ ರೈತರಿಗೆ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 60 ಕ್ಕೂ ಹೆಚ್ಚು ಜನ ಯೋಧರಿಗೆ ಸನ್ಮಾನಿಸಲಾಗುವುದು. ಮತ್ತು 2024 ರಿಂದ 2029ರ ಅವಧಿಯವರೆಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಶಾಸಕರು, ಸಂಸದರು ವಿಧಾನಪರಿಷತ್ ಸದಸ್ಯರು, ಸಾಹಿತಿಗಳು ನಿವೃತ್ತ ನೌಕರರು, ಚಿಂತಕರು ಬುದ್ದಿ ಜೀವಿಗಳು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದು ತಾಲ್ಲೂಕಿನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭ ಯಶಸ್ವಿಗೊಳಿಸಲು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಅಮರಪ್ಪ ಸಾಲಿ, ನೌಕರರ ಸಂಘದ ಮಾಜಿ ಜಿಲ್ಲಾ ಅಧ್ಯಕ್ಷ ಬೀಮಣ್ಣ ನಾಯಕ, ಅಮರೇಶಪ್ಪ ಹೂನೂರು, ರಾಜ್ಯ ಪರಿಷತ್ ಸದಸ್ಯ ರಾಮಕೃಷ್ಣ, ನಾಯಕ್, ಹಿರಿಯ ಉಪಾಧ್ಯಕ್ಷ ಶೆಟ್ಟೆಪ್ಪ ನಾಯಕ್, ಪ್ರಧಾನ ಕಾರ್ಯದರ್ಶಿ ವೀರೇಶ್, ಮಾನಪ್ಪ ಬಡೀಗೆರ, ಹನುಮಂತ್ ರಾಯ,ಮಂಜುನಾಥ, ಸಂಗನಗೌಡ ಸೇರಿದಂತೆ ಇತರರು ಇದ್ದರು.

ವರದಿ : ಮುಸ್ತಾಫಾ tv8kannada ಲಿಂಗಸುಗೂರು

Related Articles

Leave a Reply

Your email address will not be published. Required fields are marked *

Back to top button