ಶತಮಾನದ ಹೊಸ್ತಿಲಿನಲ್ಲಿಕೆ.ಬಿ.ಆರ್. ಡ್ರಾಮಾ ಕಂಪನಿ

ಕೊಟ್ಟೂರು : ಪ್ರತೀ ವರ್ಷ ಕೊಟ್ಟೂರಿನ ರಥೋತ್ಸವ ಪ್ರಯುಕ್ತ ಆನೇಕ ನಾಟಕ ಕಂಪನಿಗಳು ಇಲ್ಲಿಗೆ ಬರತ್ತವೆ. ಕಲಾ ಪೋಷಕರನ್ನು ಬೆಳೆಸುತ್ತಾ ಬಂದಿದೆ. ಕೆ ಬಿ ಅರ್ ಡ್ರಾಮಾ ಕಂಪನಿ ಪ್ರಾರಂಭವಾಗಿದ್ದು ಇದೇ ನಮ್ಮ ಕೊಟ್ಟೂರಿನಲ್ಲಿ 1928ರಲ್ಲಿ ಸರಿಸುಮಾರು ಈಗ 98ವರ್ಷ ಆಗಿದೆ.ಶತಮಾನದ ಸಾಗುತ್ತಿದೆ
ಎಂದು ನಾಟಕ ಕಂಪನಿಯ ಮಾಲೀಕ ಚಿಂದೋಡಿ ಶ್ರೀಕಂಠೇಶ ಹೇಳಿದರು.
ಕೊಟ್ಟೂರಿನಲ್ಲಿ ಹಾಕಿರುವ ಕೆ.ಬಿ.ಆರ್ ನಾಟಕ ಕಂಪನಿ ಭಾನುವಾರ ರಾತ್ರಿ ತಮ್ಮ ತಾಯಿ ಆಂಜಲಿ ಶ್ರೀಕಂಠೇಶ
ಹೆಸರಲ್ಲಿ ಪ್ರಶಸ್ತಿ ನೀಡುತ್ತಿದ್ದು ಪ್ರಸ್ತುತ ಚಿತ್ತರಗಿ ನಾಟಕ ಕಂಪನಿಯ ಹಿರಿಯ ಕಲಾವಿದ ಮಹಾರುದ್ರಾಚಾರ ಅವರಿಗೆ ಪ್ರಶಸ್ತಿ ಪತ್ರ ಹಾಗೂ 5 ಸಾವಿರ ರೂ. ನಗದು ನೀಡಿ ಸನ್ಮಾನಿಸಿ ದರು.
ಕೊಟ್ಟೂರನಲ್ಲಿ ಕೊಟ್ಟೂರೇಶ್ವರ ಸ್ವಾಮಿ ಮಹಾತ್ಮ ನಾಟಕ ಪ್ರದರ್ಶನದ ಮೂಲಕ ಈ ಕೆ.ಬಿ.ಆರ್. ನಾಟಕ ಕಂಪನಿ ಆರಂಭವಾಯಿತು. ಅಲ್ಲಿಂದ ಕಲೆಗಾಗಿ ನಾವು ನಮಗಾಗಿ ಕಲೆ. ಕಲೆಯೇ ನಮ್ಮ ಲ್ಲರ ಉಸಿರಾಗಿಸಿಕೊಂಡು ನಿರಂತರ ವಾಗಿ ಕಂಪನಿ ಉತ್ತಮ ಸಂದೇಶ, ಅಭಿರುಚಿಯ ನಾಟಕಗಳನ್ನು ಪ್ರದ ರ್ಶಿಸುತ್ತ ನಿಮ್ಮೆಲ್ಲರ ಆಶೀರ್ವಾದ ದಿಂದ ಮುನ್ನಡೆಯುತ್ತ ಬಂದಿದೆ ಎಂದರು.
ನಮ್ಮ ಕಂಪನಿಯಲ್ಲಿ ಸಿನಿಮಾ ರಂಗದ ಬಹುತೇಕ ಕಲಾವಿದರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಭಿನಯಿ ಸುತ್ತಲೇ ಇದ್ದು. ಆನೇಕ ಕಲಾವಿದರು ನಮ್ಮಲ್ಲಿ ಬದುಕುರೂಪಿಸಿಕೊಂಡಿದ್ದಾರೆ. ಇದರಲ್ಲಿ ನನ್ನ ಮಕ್ಕಳು, ಸೊಸೆ ಯಂದಿರು, ಮೊಮ್ಮಕ್ಕಳು ಸೇರಿದಂತೆ ಒಂದು ಕುಟುಂಬ ಒಡೆತನದ ಕಂಪನಿ ಎಂದೇಳು ಹೆಮ್ಮೆಯಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ಮಹಾರುದ್ರಾ ಚಾರಿ. ಕಂಪನಿ ಮಾಲೀಕರು ಕಲಾವಿದರ ಮೇಲೆ ತೋರುತ್ತಿದ್ದ ಪ್ರೀತಿ,
ಪ್ರೋತ್ಸಾಹವನ್ನು ನೆನೆದು ಭಾವುಕರಾದರು.
ಈ ಸಂದರ್ಭದಲ್ಲಿ ಮಾಲೀಕ ಚಿಂದೋಡಿ ಶ್ರೀಕಂಠೇಶ, ಚಿಂದೋಡಿ ವಿಜಯಕುಮಾರ್, ಎನ್.ವಿ. ರಮಾ, ಸಿ.ವಿ. ಹೇಮಾ, ಸಿ.ವಿ. ದೀಪಾ, ಮಹಾಂತೇಶ ತಾಳಿಕೋಟೆ, ಕಾಂತ ಪಾಟೇಲ್, ರಾಘವೇಂದ್ರ ಬೆಂಗಳೂರು ಇದ್ದರು.