ಮನಮೋಹನ್ ಸಿಂಗ್ ರೀತಿ ಮೋದಿ ಏಕೆ ಒಮ್ಮೆಯೂ ಪರ್ತಕರ್ತರ ಜೊತೆ ಪ್ರೆಸ್‌ಮೀಟ್ ನಡೆಸಿಲ್ಲ? ಗ್ರೋಕ್ ಎಐ ಕೊಡ್ತು ಶಾಕಿಂಗ್ ಉತ್ತರ!

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಭಾರತಕ್ಕೆ ಕಾಲಿರಿಸಿದಾಗಿನಿಂದ ಹತ್ತಾರು ಎಐ ಟೂಲ್‌ಗಳು ಬಳಕೆದಾರರಿಗೆ ಲಭ್ಯವಾಗಿವೆ. ಹೊಸ ಹೊಸ ಎಐ ಆಯ್ಕೆಗಳು ಬಂದಾಗಲೆಲ್ಲಾ ಭಾರತೀಯ ನೆಟ್ಟಿಗರು ಅವುಗಳನ್ನು ಬಳಸಿ ಅವುಗಳ ಕುರಿತ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಗ್ರೋಕ್ ಎಐನ ಸರದಿ ಬಂದಿದೆ.
ಎಲಾನ್ ಮಸ್ಕ್ ಒಡೆತನದ ಎಕ್ಸ್ ಖಾತೆ ಈ ಗ್ರೋಕ್ ಎಐಯನ್ನು ಪರಿಚಯಿಸಿದ್ದು, ಸದ್ಯ ಭಾರತೀಯರು ಸತತವಾಗಿ ಬಳಸುತ್ತಿದ್ದಾರೆ.
ಎಕ್ಸ್ ಖಾತೆಯಲ್ಲಿಯೇ ಗ್ರೋಕ್ ಎಐ ಎಂಬ ಹೊಸ ವಿಭಾಗವನ್ನು ತೆರೆಯಲಾಗಿದ್ದು, ಮೊದಲಿಗೆ ಇಮೇಜ್ ಕ್ರಿಯೇಟ್ ಮಾಡಲು ಗ್ರೋಕ್ ಅನ್ನು ಬಳಸಲಾಗಿತ್ತು. ಆಗಲೂ ಸಹ ಮನ ಗೆದ್ದಿದ್ದ ಗ್ರೋಕ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿತ್ತು.
ಇದೀಗ ಬಳಕೆದಾರರು ಕೇಳುವ ಪ್ರಶ್ನೆಗಳಿಗೆ ಗ್ರೋಕ್ ಉತ್ತರ ನೀಡುತ್ತಿದ್ದು, ಈ ಉತ್ತರಗಳ ಸ್ಕ್ರೀನ್‌ಶಾಟ್‌ಗಳನ್ನು ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಬಳಕೆದಾರರೊಬ್ಬರು ಮೋದಿ ಪ್ರಧಾನಿಯಾದಾಗಿನಿಂದ ಯಾಕೆ ಇದುವರೆಗೂ ಒಂದೇ ಒಂದು ಪತ್ರಿಕಾಗೋಷ್ಟಿಯಲ್ಲೂ ಸಹ ಪಾಲ್ಗೊಂಡಿಲ್ಲ ಎಂಬ ಪ್ರಶ್ನೆಯನ್ನು ಗ್ರೋಕ್ ಬಳಿ ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಗ್ರೋಕ್ ‘ಮನಮೋಹನ್ ಸಿಂಗ್ ರೀತಿ ಎಷ್ಟೇ ಟೀಕೆಗಳು ಬಂದರೂ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸವನ್ನು ಮೋದಿ ಮಾಡುವುದಿಲ್ಲ. ಬದಲಾಗಿ ಮುಂಚೆಯೇ ಬರೆದು ಸಿದ್ಧಪಡಿಸಿಕೊಂಡ ಸ್ಕ್ರಿಪ್ಟೆಡ್ ಸಂದರ್ಶನಗಳಲ್ಲಿ ಮಾತ್ರ ಮೋದಿ ಭಾಗವಹಿಸುತ್ತಾರೆ ಎಂದಿದೆ.