ಬಸಾಪೂರ:ಅಪಾಯಕ್ಕೆ ಅಹುತಿಯಾದ ವಿದ್ಯುತ್ ಟ್ರಾನ್ಸಫಾರ್ಮರ, ಸ್ಥಳಾಂತರಿಸಲು ಜನರು ಆಗ್ರಹ

ಮಸ್ಕಿ : ತಾಲ್ಲೂಕು ಬಸಾಪೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ ಅಪಾಯಕ್ಕೆ ಅಹುತಿಯಂತೆ ಕಾಯ್ದುಕೊಂಡು ಕುಳಿತಿದೆ, ಈ ಒಂದು ವಿದ್ಯುತ್ ಟಿ ಸಿ ಗೆ ಯಾವುದೇ ಸುತ್ತುವರಿದು ರಕ್ಷಣೆ ಇಲ್ಲದಂತಾಗಿದೆ ಹಾಗೆ ಇದೆ, ಹೀಗಾಗಿ ಇಲ್ಲಿಯ ವಾಸಮಾಡುವ ಸುತ್ತಮುತ್ತಲಿನ ಮನೆಯ ಜನರು ದನಕರುಗಳು,ಆಡುಕುರಿಗಳು, ಸಣ್ಣ ಮಕ್ಕಳು ದಿನನಿತ್ಯಲೂ ಭಯದಿಂದ ಜೀವನ ಮಾಡುತ್ತಿದ್ದು, ಈ ಒಂದು ವಿದ್ಯುತ್ ಟಿ ಸಿ ಯನ್ನು ಊರಿಂದ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಪಕ್ಕದಲ್ಲಿ ವಾಸಿಸುವ ಹುಲುಗಪ್ಪ , ಸೂಗಪ್ಪ ನಾಯಕ,ಮೌಲಸಾಬು,ಶೇಖರಯ್ಯಸ್ವಾಮಿ, ಮಹಾಂತೇಶಗೌಡ,ಶಾಂತಮ್ಮ, ಗಂಗಮ್ಮ ತೀವ್ರವಾಗಿ ಖಂಡಿಸುತ್ತಾರೆ,ಇಂತಹ ಬೇಜವಬ್ದಾರಿ, ನಿಷ್ಕಲಾಜಿಯಿಂದ ಐದಾರು ವರ್ಷಗಳ ಹಿಂದೆ ಪಕ್ಕದಲ್ಲಿರುವ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ವಿದ್ಯುತ್ ತಗುಲಿ ಮೃತಪಟ್ಟಿರುವ ಉದಾಹರಣೆ ಇದೆ,ಮತ್ತೊಮ್ಮೆ ಇಂತಹ ಘಟನೆ ಆಗಬಾರದು ಈಗಾಗಲೇ ಈ ಸಮಸ್ಯೆ ಕುರಿತು ಪಿಡಿಒ,ಕ್ಷೇತ್ರದ ಶಾಸಕರಿಗೆ, ಜೆಸ್ಕಂ ಅದಿಕಾರಿಗಳಿಗೆ ಹಲವಾರು ಸಲ ಹೇಳಿದರು ಯಾವುದೇ ಪರಿಹಾರ ಇಲ್ಲ, ನೂಡುವವರು ಇಲ್ಲ,ಅದಕ್ಕೆ ಆದಷ್ಟು ಬೇಗನೆ ಟಿಸಿ ಯನ್ನು ಸ್ಥಳಾಂತರ ಮಾಡದಿದ್ದರೆ, ಮುಂದೆ ಏನಾದರೂ ಅನಾಹುತ ನಡೆದರೆ ಜೆಸ್ಕಾಂ ಇಲಾಖೆ ನೇರೆ ಹೊಣೆಗಾರಿಕೆ ಅದಕ್ಕೆ ಶೀಘ್ರವಾಗಿ ಸಮಸ್ಯೆ ಬಗೆಹರಿಸಿ,ಇಲ್ಲವಾದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಸ್ಥಳದಲ್ಲಿದ್ದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು