ಸುದ್ದಿ

ಹೋಳಿ ಹಬ್ಬದಂದೇ ವರ್ಷದ ಮೊದಲ ಸಂಪೂರ್ಣ ಚಂದ್ರ ಗ್ರಹಣ; ಭಾರತದಲ್ಲಿ ಗ್ರಹಣದ ಸಮಯ ಯಾವಾಗ?

ಇಂದು ವರ್ಷದ ಮೊದಲ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಇದು ಭಾರತದ ಯಾವುದೇ ಸ್ಥಳದಲ್ಲೂ ಗೋಚರಿಸುವುದಿಲ್ಲ, ವಿದೇಶದಲ್ಲಿ ನೋಡಬಹುದಾಗಿದೆ.

ಚಂದ್ರ ಗ್ರಹಣವು ಧಾರ್ಮಿಕ, ಜ್ಯೋತಿಷ್ಯ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಮಹತ್ವವಾಗಿದೆ.

ಧಾರ್ಮಿಕ ದೃಷ್ಟಿ ಕೋನದಲ್ಲಿ ರಾಹು ಮತ್ತು ಕೇತು ಚಂದ್ರ ಗ್ರಹಣಕ್ಕೆ ಕಾರಣ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಕೇತುವಿನ ಕಾರಣದಿಂದ ಸಂಭವಿಸಲಿದೆ ಎಂದು ಹೇಳಲಾಗುತ್ತದೆ. ರಾಹು ಮತ್ತು ಕೇತುಗಳು ಹಾವುಗಳಂತೆ ಛಾಯ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಅವುಗಳ ಕಡಿತವು ಗ್ರಹಣಕ್ಕೆ ಕಾರಣವಾಗುತ್ತದೆ. ಅದೇ ಸಮಯದಲ್ಲಿ ರಾಹು ಮತ್ತು ಕೇತು ಚಂದ್ರನನ್ನು ನುಂಗಲು ಪ್ರಯತ್ನಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ ಎಂದು ಕೆಲವರು ನಂಬುತ್ತಾರೆ.

ಮಾರ್ಚ್ 14, ಫಾಲ್ಗುಣ ಕೃಷ್ಣ ಪಕ್ಷ ಪೂರ್ಣಿಮೆ ಶುಕ್ರವಾರ. ಹೋಳಿ ದಿನ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:18 ರವರೆಗೆ ವಿದೇಶಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಅಪರೂಪದ ನೆರಳು ಬೆಳಗ್ಗೆ 09:27 ಕ್ಕೆ ಬೀಳಲಿದೆ. ಬೆಳಗ್ಗೆ 10:40 ಕ್ಕೆ ಗ್ರಹಣ ಸ್ಪರ್ಶಿಸಲಿದೆ. ಗ್ರಹಣದ ಮಧ್ಯಭಾಗವು 12:29. ಮಧ್ಯಾಹ್ನ 2:30ಕ್ಕೆ ಮುಗಿಯಲಿದೆ.

ಪೆಸಿಫಿಕ್ ಮಹಾಸಾಗರ, ಉತ್ತರ ಅಮೆರಿಕಾ, ಕೆನಡಾ, ಮೆಕ್ಸಿಕೊ, ಗ್ರೀನ್‌ಲ್ಯಾಂಡ್, ಪನಾಮ, ಪೆರು, ಉರುಗೈ, ಬ್ರೆಜಿಲ್, ಅರ್ಜೆಂಟೀನಾ, ಚಿಲಿ, ಪಶ್ಚಿಮ ಯುರೋಪ್, ಪಶ್ಚಿಮದಲ್ಲಿ ಐರ್ಲೆಂಡ್, ಬ್ರಿಟನ್, ನಾರ್ವೆ, ಸ್ವೀಡನ್, ಪಶ್ಚಿಮ ಪೋಲೆಂಡ್, ಫ್ರಾನ್ಸ್, ಸ್ಪೇನ್, ಪೋರ್ಚುಗಲ್, ಜರ್ಮನಿ, ಇಟಲಿ, ಆಫ್ರಿಕಾ, ಮೊರಾಕೊ, ಅಲ್ಲೀರಿಯಾ, ಘಾನಾ, ನೈಜೀರಿಯಾ, ಲಿಬಿಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ ಮತ್ತು ದಕ್ಷಿಣ ಅಟ್ಲಾಂಟಿಕ್‌ ಮಹಾಸಾಗರ ಪೂರ್ವ ರಷ್ಯಾದಲ್ಲಿ ಗೋಚರಿಸಲಿದೆ.

Related Articles

Leave a Reply

Your email address will not be published. Required fields are marked *

Back to top button