ಸಾರ್ವಜನಿಕರಿಂದ ದೂರು ಬರದಂತೆ ಕೆಲಸಮಾಡಿ: ಎಸ್ಪಿಸತೀಶ ಚೀಟಗುಪ್ಪಿ

ಯಲಬುರ್ಗಾ:ಎಲ್ಲಾ ಇಲಾಖೆಯ ನೌಕರರು ಸಾರ್ವಜನಿಕರಿಂದ ಯಾವುದೆ ದೂರುಗಳು ಬರದಂತೆ ಹಾಗೂ ಸಾರ್ವಜನಿಕರು ಕೆಲಸಗಳಿಗೆ ಕಚೇರಿಗೆ ಆಗಮಿಸಿದಾಗ ಅವರಿಗೆ ಸರಿಯಾಗಿ ಸ್ಪಂದಿಸಿ ಅವರನ್ನು ಕಚೇರಿಗೆ ಅಲೆದಾಡಿಸದೆ ಕೆಲಸವನ್ನು ಮಾಡಿಕೋಡಬೇಕು ಎಂದು ರಾಯಚೂರ,ಕೊಪ್ಪಳ ಲೋಕಾಯುಕ್ತ ಎಸ್ಪಿ
ಸತೀಶ ಚೀಟಗುಬ್ಬಿ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ಪೋಲಿಸ್ ಇಲಾಖೆಯಿಂದ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಂದು ಸರಕಾರದ ಯೋಜನೆಗಳು ಜಾರಿಯಾಗಿ ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗಬೇಕುಬ ಯಾವ ಇಲಾಖೆಯಿಂದ ಸಾರ್ವಜನಿಕರಿಗೆ ಸರಕಾರದ ಯೋಜನೆಗಳು ದೊರಕಿದ್ದಾವೆ ಹಾಗೂ ಅವುಗಳು ಎಷ್ಟರ ಮೆಟ್ಟಿಗೆ ಸದುಪಯೋಗ ಆಗುತ್ತವೆ ಎನ್ನುವದನ್ನ ಅಧಿಕಾರಿಗಳು ಗಮನಹರಿಸಬೇಕು ಇಲ್ಲವಾದಲ್ಲಿ ಸರಕಾರಿ ಯೋಜನೆಗಳು ಸಫಲವಾಗುವದಿಲ್ಲಾ ಎಂದರು.
ತಾಲೂಕಿನ ಹಲವಾರು ಗ್ರಾಮದಿಂದ ಸಾರ್ವಜನಿಕರು ಆಗಮಿಸಿ ರಸ್ತೆ, ಸರಕಾರಿ ಜಮೀನು, ಸರಕಾರಿ ಸೌಲಭ್ಯಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಲೋಕಾಯುಕ್ತರ ಗಮನಕ್ಕೆ ತರಲಾಯಿತು ಹಾಗೂ ಸ್ಥಳದಲ್ಲಿದ್ಧ ಸಂಬಂದಿಸಿದ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸಮಸ್ಯೆಗಳನ್ನ ಪರಿಹರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿ ಚಂದ್ರಪ್ಪ ಇಟಿ,ಪಿಐಗಳಾದ
ಸುನೀಲ ಮೆಗಳಮನಿ,
ಶೈಲಾ ಪ್ಯಾಟಿ ಶೆಟ್ಟರ,
ನಾಗರತ್ನ, ಯಲಬುರ್ಗಾ ತಹಸೀಲ್ದಾರ ಬಸವರಾಜ ತೆನ್ನಳ್ಳಿ, ಕುಕನೂರ ತಹಸೀಲ್ದಾರ ಪ್ರಾಣೇಶ,ತಾಪಂ ಇಓ
ಸಂತೋಷ ಬಿರಾದಾರ ಪಾಟೀಲ ಸೇರಿದಂತೆ ತಾಲೂಕ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವರದಿ: ದೊಡ್ಡಬಸಪ್ಪ ಹಕಾರಿ tv8kannada ಕೊಪ್ಪಳ