ಕೆ.ಶಿವರಾಂ ಅವರ ಕೊಡುಗೆ ಸಮಾಜಕ್ಕೆ ಅಪಾರ : ಆಟೋ ವೆಂಕಟೇಶ್

ಚಾಮರಾಜನಗರ: ಐಎಎಸ್ ಅಧಿಕಾರಿ ಹಾಗೂ ಚಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರಾದ ದಿವಂಗತ ಕೆ.ಶಿವರಾಂ ಅವರು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಅಭಿಮಾನಿ ಹೊನ್ನೂರು ಆಟೋ ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆ.ಶಿವರಾಂ ಅವರು ದಕ್ಷ ಅಧಿಕಾರಿಯಾಗಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಹಿಂದುಳಿದವರಿಗೆ ಗಗನಸಖಿ ಹಾಗೂ ನರ್ಸಿಂಗ್ ತರಬೇತಿ ಕೊಡಿಸುವ ಮೂಲಕ ಸಾವಿರಾರು ಜನರ ಜೀವನಕ್ಕೆ ದಾರಿ ದೀಪವಾಗಿದ್ದರು, ಇಂತಹ ಮಹಾನ್ ವ್ಯಕ್ತಿಯನ್ನು ಎಲ್ಲರೂ ಸ್ಮರಿಸಿಕೊಳ್ಳಬೇಕು ಎಂದು ತಿಳಿಸಿದರು. ಕೆ.ಶಿವರಾಂ ಅವರು ಅಧಿಕಾರದಲ್ಲಿದ್ದ ವೇಳೆ ಅವರಿಂದ ಪ್ರಯೋಜನ ಪಡೆದ ಕೆಲವರು ಅವರನ್ನು ಸ್ಮರಿಸಿಕೊಳ್ಳದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು, ಮುಂದಿನ ದಿನಗಳಲ್ಲಿ ಕೆ.ಶಿವರಾಂ ಅವರ ಹೆಸರನ್ನು ಶಾಶ್ವತವಾಗಿ ಉಳಿಸಲು ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಅನೇಕ ಸೇವ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಶಿವರಾಮ ಅಭಿಮಾನಿಗಳಾದ ಹನುಮಂತರಾಜು ಗುಂಡ್ಲುಪೇಟೆ, ಎಚ್.ಡಿ. ಕೋಟೆ ಕುಮಾರ್, ಸುನಿಲ್ ಕೆಸ್ತೂರು, ಮಹೇಶ್ ಕಾವುದವಾಡಿ ಇದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ