ದೇಶ

Champions Trophy: ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ತಂದ ಟೀಂ ಇಂಡಿಯಾ ಬಗ್ಗೆ ಹೆಮ್ಮೆ! ಪ್ರಧಾನಿ ಮೋದಿ ಶ್ಲಾಘನೆ

ಚಾಂಪಿಯನ್ಟ್ರೋಫಿ ಫೈನಲ್ನಲ್ಲಿ (Champions Trophy Final) ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಬೈನಲ್ಲಿ ನಡೆದ ಫೈನಲ್ನಲ್ಲಿ (Final) ಟೀಮ್ ಇಂಡಿಯಾ 4 ವಿಕೆಟ್ಗಳಿಂದ ಗೆಲುವು ಸಾಧಿಸಿ ಹೊಸ ಅಧ್ಯಾಯ ಬರೆದಿದೆ.

ಈ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ 3 ಟ್ರೋಫಿ ಗೆದ್ದ (2002, 2013, 2025) ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಫೈನಲ್ ಪಂದ್ಯದಲ್ಲಿ ಕಿವೀಸ್ ನೀಡಿದ್ದ 252 ರನ್​​ಗಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ 49 ಓವರ್​​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿ 12 ವರ್ಷಗಳ ಬಳಿಕ (2013ರ ನಂತರ) ಚಾಂಪಿಯನ್ಸ್ ಟ್ರೋಫಿಯನ್ನು ಮರಳಿ ಗೆದ್ದುಕೊಂಡಿದೆ. ರೋಹಿತ್ ಶರ್ಮಾ 76 , ಶ್ರೇಯಸ್ ಅಯ್ಯರ್ 48 ರನ್​​ಗಳಿಸಿ ಗೆಲುವಿನ ರೂವಾರಿಗಳಾದರು. ಇದೀಗ ಭಾರತ ಚಾಂಪಿಯನ್ಸ್‌ ಟ್ರೋಫಿ ತನ್ನದಾಗಿಸಿಕೊಂಡಿದಕ್ಕೆ ಇತ್ತ ಪ್ರಧಾನಿ ಮೋದಿ (PM Modi) ಕೂಡಾ ಟೀಂ ಇಂಡಿಯಾ ಆಟಗಾರರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು, ಇಡೀ ದೇಶವೇ ಸಂಭ್ರಮದಲ್ಲಿ ತೊಡಗಿದೆ. ಇತ್ತ ಪ್ರಧಾನಿ ಮೋದಿ ಕೂಡಾ ಭಾರತ ತಂಡದ ಆಟಗಾರರಿಗೆ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಭಾರತ ತಂಡಕ್ಕೆ ಅಭಿನಂದನೆಗಳು; ಮೋದಿ!

ಇನ್ನು ಪ್ರಧಾನಿ ಮೋದಿ ಎಕ್ಸ್ ಪ್ಲಾಟ್‌ಫಾರ್ಮ್‌ ಮೂಲಕ ಟೀಂ ಇಂಡಿಯಾ ಆಟಗಾರರಿಗೆ ಅಭಿನಂದನೆ ತಿಳಿಸಿದ್ದು, “ಅತ್ಯದ್ಭುತವಾದ ಆಟ ಮತ್ತು ಅತ್ಯದ್ಭುತವಾದ ಫಲಿತಾಂಶ!, ನಮ್ಮ ಕ್ರಿಕೆಟ್ ತಂಡವು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದು ಹೆಮ್ಮೆಯಾಗುತ್ತಿದೆ. ಟೂರ್ನಮೆಂಟ್‌ನ ಉದ್ದಕ್ಕೂ ಅವರು ಅದ್ಭುತವಾಗಿ ಆಡಿದ್ದಾರೆ. ನಮ್ಮ ತಂಡಕ್ಕೆ ಈ ಭವ್ಯವಾದ ಸರ್ವಾಂಗೀಣ ಪ್ರದರ್ಶನಕ್ಕಾಗಿ ಅಭಿನಂದನೆಗಳು.” ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button