ಇತ್ತೀಚಿನ ಸುದ್ದಿ

ರೇಣುಕಾಚಾರ್ಯ ಜಯಂತಿ 12 ರಂದು

ಮಸ್ಕಿ ; ದಾರ್ಶನಿಕರು, ಮಹಾನುಭಾವರ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವ ಸಲುವಾಗಿ ಸರ್ಕಾರದಿಂದ ಜಯಂತಿಗಳನ್ನು ಆಚರಣೆ ಮಾಡಲಾಗುವುದು’ ಎಂದು ಡಾ.ಮಲ್ಲಪ್ಪ ಎಸ್ ಯರೋಗೋಳ
ತಿಳಿಸಿದರು.

ಇಲ್ಲಿನ ತಹಶಿಲ್ದಾರರ
ಕಚೇರಿ ಸಭಾಂಗಣದಲ್ಲಿ ವಿವಿಧ ಜಯಂತಿಗಳ ಆಚರಣೆ ಸಂಬಂಧ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಾರ್ಚ್ 12ರಂದು ಬೆಳಿಗ್ಗೆ 10 ಕ್ಕೆ
ರೇಣುಕಾಚಾರ್ಯ ಜಯಂತಿಯನ್ನು
ಮಾರ್ಚ್ 14ರಂದು ಬೆಳಿಗ್ಗೆ 11.30ಕ್ಕೆ ಯೋಗಿನಾರೇಯಣ ಯತೀಂದ್ರರ ಜಯಂತಿ,ಹಾಗೂ ಮಾ.28 ರಂದು ಅಗ್ನಿ ಬನ್ನಿರಾಯ ಜಯಂತಿಯನ್ನು
ತಹಶಿಲ್ದಾರರ ಕಚೇರಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಆಚರಿಸಲಾಗುವುದು’ ಎಂದು ಹೇಳಿದರು.

ಮಹನೀಯರ ಜಯಂತಿಗಳ ಆಚರಣೆಗೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲಾ ಸಮುದಾಯದವರೂ ಪಾಲ್ಗೊಳ್ಳಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಈ ಸಂದರ್ಭದಲ್ಲಿ, ಡಾ.
ಪಂಚಾಕ್ಷರಯ್ಯ ಸ್ವಾಮಿ ಕಂಬಾಳಿಮಠ,ಕರಿಬಸವಯ್ಯ ಸ್ವಾಮಿ,ಸಿದ್ದಯ್ಯ ಹೆಸರೂರು ಹಿರೇಮಠ, ಗಂಗಾಧರ ಕಂಬಾಳಿಮಠ,ಆದಯ್ಯ ಸ್ವಾಮಿ ತಿಪ್ಪಯ್ಯಸ್ವಾಮಿ ಸಿದ್ದಲಿಂಗಯ್ಯ ಸ್ವಾಮಿ,ಅಮರೇಶ ಸೊಪ್ಪಿಮಠ,
ಶಿವಮೂರ್ತಿ ಸ್ವಾಮಿ,ಮಹೇಶ್ ಕೊಟ್ಟರಮಠ,ಬಸವರಾಜ ಪೂಜಾರಿ ಸೇರಿದಂತೆ ಅನೇಕರು ಇದ್ದರೂ

Related Articles

Leave a Reply

Your email address will not be published. Required fields are marked *

Back to top button