ಅತಿಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಮೂಡಿಗೇರಿಸಿಕೊಂಡ ದಾಖಲೆಯಲ್ಲಿ ಆಸ್ಟ್ರೇಲಿಯಾ ಹಿಂದಿಕ್ಕಿದ ಭಾರತ ಈಗ ನಂಬರ್ 1

ದುಬೈ : ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್ಗಳ ಗೆಲುವು ಕಂಡು ಚಾಂಪಿಯನ್ ಆಗಿ ಹೊರಹೊಮ್ಮಿದೆ.

50 ಒವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿರುವ ನ್ಯೂಜಿಲೆಂಡ್ ಭಾರತಕ್ಕೆ 252 ರನ್ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಭಾರತ 49 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿತು.
ಈ ಗೆಲುವಿನ ಮೂಲಕ ಭಾರತ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿದೆ. ಈ ಹಿಂದೆ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು ಎರಡು ಬಾರಿ ಟ್ರೋಫಿ ಗೆದ್ದು ಸಮಬಲ ಸಾಧಿಸಿದ್ದವು.
ಎಲ್ಲ ಚಾಂಪಿಯನ್ಸ್ ಟ್ರೋಫಿಗಳ ವಿನ್ನರ್ಸ್
1998 – ದಕ್ಷಿಣ ಆಫ್ರಿಕಾ
2000 – ನ್ಯೂಜಿಲೆಂಡ್
2002 – ಭಾರತ ಹಾಗೂ ಶ್ರೀಲಂಕಾ ( ಫೈನಲ್ ರದ್ದಾದ ಕಾರಣ ಟ್ರೋಫಿ ಹಂಚಿಕೆ )
2004 – ವೆಸ್ಟ್ ಇಂಡೀಸ್
2006 – ಆಸ್ಟ್ರೇಲಿಯಾ
2009 – ಆಸ್ಟ್ರೇಲಿಯಾ
2013 – ಭಾರತ
2025 – ಭಾರತ