ಇತ್ತೀಚಿನ ಸುದ್ದಿ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿಕಾಮಿಡಿ ಕಿಲಾಡಿ ವಿನ್ನರ್ ಸುಜಾತಾ ಗುಬ್ಬಿ ಸಹೋದರಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ನೀಲಾ ಜೇವರ್ಗಿ ನಾಟಕ ಕಂಪನಿ ನಡೆಸಿ ಎಲ್ಲಾರನ್ನು ರಂಚಿಸುತ್ತಿದ್ದಾರೆ.

ಸುಜಾತಾ ಗುಬ್ಬಿ ಹಾಗೂ ನೀಲಾ ಜೇವರ್ಗಿ ಮಹಿಳಾ ಕಲಾವಿದರಾಗಿ ನಾಟಕ ಅಬೀನಯದ ಜೋತೆಗೆ ನಾಟಕ ಕಂಪನಿ ಮುನ್ನಡಿಸುವಲ್ಲಿ ಮೇಲುಗೈ.ಜನರನ್ನು ಸೆಳೆಯುತ್ತಿರುವ ನಾಟಕ “ಅಕ್ಕ ಅಂಗಾರ, ತಂಗಿ ಬಂಗಾರ”ಕೊಟ್ಟೂರುಬೇಡಿದ ವರವನ್ನು ನೀಡುವ ಕಲಿಯುಗದ ಕಾಮದೇನು ಕೊಟ್ಟೂರು ಶ್ರೀ ಗುರು ಬಸವೇಶ್ವರ ಸ್ವಾಮಿ ಜಾತ್ರೆಯಲ್ಲಿ ಹಾಕಿರುವ ವಿಶ್ವ ಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಕ ಸಂಘ ಜೇವರ್ಗಿ ಕಂಪನಿ ರಾಜಣ್ಣ ಜೇವರ್ಗಿ ನಿರ್ದೇಶನದಲ್ಲಿ ಅಕ್ಕ ಅಂಗಾರ ತಂಗಿ ಬಂಗಾರ ನಾಟಕ ಉತ್ತಮ ಪ್ರದರ್ಶನದಿಂದ ಎಲ್ಲಾರ ಗಮನ ಸೆಳೆಯುತ್ತಿರುವುದು ವಿಶೇಷ.

ಬೆಳ್ಳಿ ಪರದೆ ಬರುವ ಮುನ್ನ ಜನರಿಗೆ ಮನೋರಂಜನೆ ನೀಡುತ್ತಿದ್ದುದೇ ಈ ನಾಟಕಗಳು. ಹಳ್ಳಿಗಳಲ್ಲಿ ಜಾತ್ರೆ-ಉತ್ಸವಗಳಲ್ಲಿ ಕಲಾಸಕ್ತರು ನಾಟಕಗಳನ್ನು ಕಲಿತು ಆಡುತ್ತಿದ್ದರು. ದುಡುಮೆಯಿಂದ ದಣಿದ ಮನಸ್ಸುಗಳಿಗೆ ಮುದ ನೀಡುವುದು ಒಂದೆಡೆಯಾದರೆ, ಜಾತ್ರೆಗೆ ಬಂದ ಬೀಗರು ಮಲಗಲು ಚಿಕ್ಕ ಚಿಕ್ಕ ಮನೆಗಳಲ್ಲಿ ಸ್ಥಳವಿಲ್ಲದ ಕಾರಣ ರಾತ್ರಿ ಕಳೆಯಲು ಸ್ಥಳಾವಕಾಶವಾಗಿತ್ತು.

ಹೀಗೆ ನಾಟಕವಾಡುವ, ನೋಡುವ ಹುಚ್ಚು ಹಚ್ಚಿಕೊಂಡ ಜನರಿಗೆ ಮನೋರಂಜನೆ ನೀಡಲು ಅನೇಕ ವೃತ್ತಿ ನಾಟಕ ಕಂಪನಿಗಳು ಹುಟ್ಟಿಕೊಂಡವು. ನಂತರ ಬೆಳ್ಳಿ ಪರದೆ ಜನರನ್ನು ಚಿತ್ರಮಂದಿರದ ಕಡೆ ಸೆಳೆಯಿತು. ಅನೇಕ ನಾಟಕ ಕಲಾವಿದರು ಸಹಾ ಚಿತ್ರರಂಗ ಪ್ರವೇಶ ಮಾಡಿ ತಮ್ಮ ಹೆಸರನ್ನು ಅಳಿಯದಂತೆ ಉಳಿಸಿರುವುದರ ಜೊತೆಗೆ ಚಿತ್ರೋದ್ಯಮವನ್ನು ಬೆಳೆಸಿದರು. ಇವರಲ್ಲಿ ಗುಬ್ಬಿ ಕಂಪನಿಯ ವೀರಣ್ಣ ನವರು, ಇವರ ಕಂಪನಿ ಕೊಟ್ಟೂರಿನಲ್ಲಿ ಬಂದಾಗ ಡಾ ರಾಜಕುಮಾರ್ ಪರದಿಯನ್ನು ಎಳೆಯುವ ಕೆಲಸ ಮಾಡುತಿದ್ದರು. ಪಟ್ಟಣ ಆರಾದ್ಯ ದೇವ ಶ್ರೀ ಗುರು ಬಸವೇಶ್ವರ ಸ್ವಾಮಿಯ ದೇವಾಲಯದಲ್ಲಿ ಬಾಹ್ಮೀ ಮಹೋರ್ತದಲ್ಲಿನ ಪೂಜೆಯಲ್ಲಿ ಫಾಲುಗೊಂಡು ನನಗೆ ನಾಟಕ ಕಂಪನಿ ಕಲಾವಿದನಾಗೆ ಅವಕಾಶ ಒದಗಿಸಿ ಎಂದು ಬಿನ್ನಹಿಸಿದರು. ನಂತರ ಬೆಂಗಳೂರುಗೆ ತೆರಳಿ ಅವರಿಗೆ ಅವಕಾಶ ಒದಗಿ ಬಂದು ಮೇರು ನಾಟರಾಗಿ ಡಾ.ರಾಜಕುಮಾರ್ ಇವರನ್ನು ಮರೆಯಲು ಸಾದ್ಯವೇ. ಎಲಿವಾಳ ಸಿದ್ದಯ್ಯನವರಿಗೆ ಅಂದಿನ ಕಾಲದಲ್ಲಿ ವೃತ್ತಿ ನಾಟಕದಲ್ಲಿ ದೊಡ್ಡ ಹೆಸರಿತ್ತು. ಅವರ ಬಗ್ಗೆ ಅಪಾರ ಅಭಿಮಾನವಿತ್ತು. ಅವರ ಅಭಿನಯ ನೋಡಲು ಜನಸಾಗರವೇ ಹರಿದು ಬರುತ್ತಿತ್ತು. ಅವರು ಕುಡಿತದ ಚಟಕ್ಕೆ ದಾಸರಾಗದೇ ಇದ್ದರೆ, ಈ ದೌರ್ಬಲ್ಯಕ್ಕೆ ಬೀಳದೇ ಇದ್ದರೆ ಕನ್ನಡ ರಂಗಭೂಮಿಯಲ್ಲಿ ಮಾತ್ರವಲ್ಲ ಕನ್ನಡ ಚಲನ ಚಿತ್ರದಲ್ಲಿ ಸಹಾ ಡಾ. ರಾಜ್ ಕುಮಾರ್ ರಂತೆ ಬೆಳೆದು ದೊಡ್ಡ ಹೆಸರು ಮಾಡುತ್ತಿದ್ದರೇನೋ…ಒಂದು ನಾಟಕ ಕಂಪನಿ ನಡೆಸುವುದೆಂದರೆ ಸುಲಭದ ಮಾತಲ್ಲ.

ನಾಟಕ ಟೆಂಟ್ ಒಂದು ಊರಿನಿಂದ ಇನ್ನೊಂದು ಊರಿಗೆ ಸ್ಥಳಾಂತರಿಸಬೇಕೆಂದರೆ ಈಗಿನ ಕೂಲಿ ಕೆಲಸಗಾರರ ಲೆಕ್ಕದಲ್ಲಿ ಕನಿಷ್ಟ ನಾಲ್ಕುರಿಂದ ಐದು ಲಕ್ಷ ಖರ್ಚಾಗುತ್ತದೆ. ನಾಟಕ ಚೆನ್ನಾಗಿ ಕಲೆಕ್ಷನ್ ಆದರೆ ಮಾಲೀಕ ಉಳಿಯುತ್ತಾನೆ.ಇಲ್ಲದೇ ಹೋದರೆ ಸಾಲಗಾರನಾಗುತ್ತಾನೆ. ಎಷ್ಟೋ ಸಣ್ಣ-ಪುಟ್ಟ ನಾಟಕ ಕಂಪನಿಗಳು ಜಾತ್ರೆಗಳಲ್ಲಿ ಹಣಗಳಿಸಬಹುದೆಂದು ಹಾಕಿದ ಟೆಂಟ್ ಪೈಪೋಟಿಯಲ್ಲಿ ಸೋತು, ಸಾಲ ನೀಡಲಾಗದೇ ಚೇರ್ ಗಳು, ಹಾಕಿದ ಟೆಂಟ್ ತಗಡುಗಳನ್ನು ಬಿಟ್ಟುಹೋದ ನಿದರ್ಶನಗಳಿವೆ. ನಾಟಕ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಕಂದಗಲ್ ಹನುಮಂತರಾಯರು ಈ ರೀತಿ ಹಾಕಿದ ನಾಟಕ ಟೆಂಟ್ನಲ್ಲಿ ಕಲೆಕ್ಷನ್ ಆಗದೇ ಮಾರವಾಡಿಗೆ ಮಾಡಿದ ಸಾಲ ತೀರಿಸಲಾಗದೇ ಜೈಲಿಗೆ ಹೋಗಿದ್ದರು. ಅಲ್ಲಿ ತಮ್ಮ ಬದುಕಿನ ಚಿತ್ರಣವನ್ನೇ ನೆನಸಿ “ಬಡತನದ ಭೂತ” ಎನ್ನುವ ನಾಟಕವನ್ನು ರಚಿಸಿ ತಮ್ಮ ತಂಡದವರಿಗೆ ಕಳಿಸುತ್ತಾರೆ. ಬಡತನದ ಭೂತ ಅದ್ಭುತವಾದ ಗಳಿಕೆ ಮಾಡುತ್ತದೆ. ಮಾರವಾಡಿಯ ಸಾಲ ಕಟ್ಟಿ ಕಂದಗಲ್ ಹನುಮಂತರಾಯರನ್ನು ಹೊರಗೆ ಕರೆತರುತ್ತಾರೆ. ನಲವಡಿ ಶ್ರೀಕಂಠ ಶಾಸ್ತ್ರಿಗಳು ತಮ್ಮ ಆತ್ಮೀಯರಾದ ಕಂದಗಲ್ ಹನುಮಂತರಾಯರಿಗೆ “ಅಸ್ತಮಾ ಖಾಯಿಲೆ ಉಲ್ಬಣವಾಗುತ್ತಿದೆ. ಚಿಕಿತ್ಸೆಗೆ ನೂರು ರೂಪಾಯಿ ಸಿಗುತ್ತಿಲ್ಲ. ಮುಂದಿನದು ದೇವರ ಚಿತ್ತ” ಎಂದು ಒಂದು ಪತ್ರವನ್ನು ಬರೆದಿರುತ್ತಾರೆ. ಅದೇ ಕೊನೆಯ ಪತ್ರ. ನಾಟಕ ಕಂಪನಿಗಳು ಗಳಿಕೆಯಲ್ಲಿ ಸೋತಾಗ ನಲವಡಿ ಶ್ರೀಕಂಠ ಶಾಸ್ತ್ರಿಗಳ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ಪ್ರದರ್ಶನ ಮಾಡಿದರೆ ಸಾಕು ಎಲ್ಲಿಲ್ಲದ ಗಳಿಕೆಯಾಗುತ್ತಿತ್ತು. ಆದರೆ ಅಂತಹ ನಾಟಕ ರಚಿಸಿದ ಕಲಾವಿದ ಸಂಕಷ್ಟದಲ್ಲೇ ಮಡಿಯುವಂತಾದದ್ದು ದುರಂತ. ಗೌಡ್ರ ಗದ್ದಲ, ಆಶಾ-ಲತಾ, ಕಲಿತ ಕಳ್ಳ ಮುಂತಾದ ನಾಟಕಗಳನ್ನು ಬರೆದ ಹೂವಿನಹಡಗಲಿ ತಾಲೂಕಿನ ಮಿರಕೊರನಹಳ್ಳಿಯ ಬಿ.ವಿ.ಈಶ ಸಹಾ ತಾವೇ ಮಾಡಿಕೊಂಡ ಸ್ವಯಂಕೃತ ಅಪರಾಧವಾದ ಕುಡಿತ ಚಟಕ್ಕೆ ಬಲಿಯಾಗಿದ್ದು ದುರಂತವೇ ಸರಿ. ಆರ್ಥಿಕ ಸಂಕಷ್ಟದಲ್ಲಿ ದೇವರ ಗುಡಿಯಲ್ಲಿನ ಗಂಟೆಯನ್ನು ಕದ್ದು, ಮಾರಿ ಜೀವನ ಸಾಗಿಸಿದ್ದ ತಮ್ಮ ಜೀವನದ ಕಥೆಯನ್ನೇ ಆದರಿಸಿ “ಕಲಿತ ಕಳ್ಳ” ಎನ್ನುವ ನಾಟಕವನ್ನು ರಚಿಸಿದ್ದರು. ಒಳ್ಳೆಯ ಕಲಾವಿದರನ್ನು ಅಭಿಮಾನದಿಂದ ಅಭಿಮಾನಿಗಳು ಪಾರ್ಟಿಗೆ ಕರೆದುಕೊಂಡು ಹೋಗುತ್ತಾರೆ. ಹೀಗೆ ಹೋಗಿ ಹೋಗಿ ಕೊನೆಗೆ ಕುಡಿತಕ್ಕೆ ದಾಸರಾಗಿ ಅನೇಕ ಕಲಾವಿದರು ಮರೆಯಾಗಿ ಹೋದದ್ದು ದುರಂತವೇ ಸರಿ.ಹೀಗೆ ನಾಟಕಕಾರರು, ರಂಗ ಕಲಾವಿದರು ತಮ್ಮ ಮನಸ್ಸಿನ ಕಹಿ ಘಟನೆಗಳನ್ನು, ಸಮಾಜದಲ್ಲಿ ಕಂಡ ಅನ್ಯಾಯಗಳನ್ನು ತಮ್ಮ ಕೃತಿಗಳಲ್ಲಿ ಬರೆದು ಅದನ್ನು ರಂಗ ತೆರೆಯ ಮೇಲೆ ಪ್ರದರ್ಶನ ಮಾಡಿ ಪ್ರೇಕ್ಷರನ್ನು ರಂಜಿಸಿದ್ದಾರೆ. ತಮ್ಮೊಳಗೆ ದು:ಖ ಮಡುಗಟ್ಟಿದ್ದರೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿ ಪ್ರೇಕ್ಷಕರ ನೋವು ಕ್ಷಣಕಾಲ ಮರೆಯಾಗಿ ನಗು ಮೊಗದೊಂದಿಗೆ ಮನೆಗೆ ತೆರಳುವಂತೆ ಹಾಸ್ಯ ಕಲಾವಿದರು ಮಾಡುತ್ತಾರೆ. ಈಗ ಜನರಿಗೆ 3 ತಾಸು ಕುಳಿತು ನೋಡುವ ವ್ಯವದಾನ ಉಳಿದಿಲ್ಲ. ಮಕ್ಕಳನ್ನು ಹೆಚ್ಚಿನ ವಿದ್ಯಾವಂತರನ್ನಾಗಿ ಮಾಡಿ ವಿವಿಧ ಉದ್ಯೋಗಸ್ತರನ್ನಾಗಿ ಮಾಡುತ್ತಿದ್ದು, ತಮ್ಮ ಕಲೆಯನ್ನೇ ತಮ್ಮ ಮಕ್ಕಳು ಮುಂದುವರಿಸಲು ಹೆಚ್ಣಿನ ಕಲಾವಿದರು ಇಷ್ಟಪಡದೇ ಇರುವುದರಿಂದ ರಂಗಭೂಮಿಯಲ್ಲಿ ಕಲಾವಿದರ ಕೊರತೆ ಇದೆ. ಸುಮಾರು 25 ವರ್ಷಗಳ ಹಿಂದೆ ರಾಜ್ಯದಲ್ಲಿ 50-60 ವೃತ್ತಿ ನಾಟಕ ಕಂಪನಿಗಳಿದ್ದು, ಈಗ ಅಂದಾಜು 25-30 ಕಂಪನಿಗಳು ಉಳಿದಿದ್ದು, ಚಲನ ಚಿತ್ರ, ಟಿ.ವಿ. ಧಾರವಾಹಿಗಳ ಅಬ್ಬರದ ನಡುವೆ ತಮ್ಮ ಬದುಕು ಕಟ್ಟಿಕೊಳ್ಳಲು ಕಂಪನಿ ಮಾಲಕರು, ಕಲಾವಿದರು ಹೆಣಗಾಡುತ್ತಿದ್ದಾರೆ.ನಾಟಕ ಕಂಪನಿಗಳಿಗೆ ವರ್ಷದ ಅನ್ನ ನೀಡುವ ಸ್ಥಳವೆಂದರೆ ಅದು ಬಾದಾಮಿ ಬನಶಂಕರಿ ಜಾತ್ರೆ. ಅಲ್ಲಿ ಪ್ರತಿವರ್ಷ ಹತ್ತಾರು ಕಂಪನಿಗಳು ತಿಂಗಳವರೆಗೆ ಪ್ರದರ್ಶನ ಮಾಡಿ ಪ್ರೇಕ್ಷರನ್ನು ಸೆಳೆಯುತ್ತವೆ. ಅವರವರ ಸಾಮರ್ಥ್ಯದಿಂದ 30 ರಿಂದ 50 ಲಕ್ಷದವರೆಗೆ ಗಳಿಸುತ್ತಾರೆ.

ಬನಶಂಕರಿ ದೇವಿ ನಾಟಕ ಕಂಪನಿಗಳಿಗೆ ವರ್ಷದ ಅನ್ನವನ್ನು ಕರುಣಿಸುತ್ತಾಳೆ. ಬೇರೆ ಜಾತ್ರೆಗಳಲ್ಲಿ ಕಳೆದುಕೊಂಡವರಿಗೆ ಇಲ್ಲಿ ಮತ್ತೆ ನಾಟಕ ಕಂಪನಿ ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎನ್ನುತ್ತಾರೆ.ನಾಡಿನಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆಯು ಪ್ರಸಿದ್ಧವಾಗಿದ್ದು, ಕೊಟ್ಟೂರಿನ ಈ ರಥೋತ್ಸವದಲ್ಲಿ ಪ್ರಸಿದ್ಧ 2-3 ನಾಟಕ ಕಂಪನಿಗಳು ಪ್ರತಿವರ್ಷ ಟೆಂಟ್ ಹಾಕಿ 15 ದಿನದಿಂದ ತಿಂಗಳವರೆಗೆ ಇದ್ದು ಗಳಿಕೆಮಾಡಿಕೊಂಡು ಹೋಗುತ್ತವೆ. ಕೊಟ್ಟೂರು ಪಟ್ಟಣ ಸೇರಿ ಸುತ್ತ ಮುತ್ತ 15-20 ಕಿಲೋ ಮೀಟರ್ ವರೆಗಿನ ಊರುಗಳಿಂದ ನಾಟಕ ಅಭಿಮಾನಿಗಳು ನೋಡಲು ಬರುವುದರಿಂದಲೇ ಇಲ್ಲಿನ ಜಾತ್ರೆಯನ್ನು ನಂಬಿ ಬದುಕು ಕಟ್ಟಿಕೊಳ್ಳಲು ಬರುವುದು ರೂಢಿಯಾಗಿದೆಸುಮಾರು 35 ವರ್ಷಗಳಿಂದ ರಂಗ ಸಜ್ಜಿಕೆಯಲ್ಲಿರುವ ಹಿರಿಯ ರಂಗಭೂಮಿ ಸಾಹಿತಿಗಳು, ನಿರ್ದೇಶಕರು ಕಲಾವಿದರಾದ ರಾಜಣ್ಣಜೇವರ್ಗಿ ಇವರು ನಾಟಕಕಾರರಾಗಬೇಕೆಂದು ಬರೆದ 2 ನಾಟಕಗಳನ್ನು ಅನೇಕ ನಾಟಕ ಕಂಪನಿ ಮಾಲೀಕರಿಗೆ ತೋರಿಸಿದರೆ ನಾಟಕ ಪ್ರದರ್ಶನ ಮಾಡುವುದಿರಲಿ, ಒಂದು ಸನ್ನಿವೇಶವನ್ನು ಕೇಳಲೂ ಸಿದ್ದರಿರಲಿಲ್ಲ. ಇದರಿಂದ ನಿರಾಶೆಯಾಗಿ ಬರೆದ 2 ನಾಟಕ ಕೃತಿಗಳನ್ನು ಹರಿದು ನದಿಯಲ್ಲಿ ಬಿಸಾಡಿ ನಾಟಕಗಳಲ್ಲಿ ಪಾತ್ರದಾರಿಯಾಗಿ ಮುಂದುವರಿದರು. “ಕುಂಟ ಕೋಣ ಮೂಕ ಜಾಣ” ಎನ್ನುವ ಕೃತಿಯನ್ನು ರಚಿಸಿ ತಾವೇ ನಿರ್ದೇಶನ ಮಾಡಿ ಪ್ರದರ್ಶನ ಮಾಡಿ ಯಶಸ್ವಿಗೊಂಡರು. ಈ ನಾಟಕ ಇವರ ಬದುಕನ್ನೇ ಬದಲಾಯಿಸಿತು. ಈಗ ಕೊಟ್ಟೂರಿನಲ್ಲಿ ಹಾಕಿರುವ ಟೆಂಟ್ನಲ್ಲಿ “ಅಕ್ಕ ಅಂಗಾರ, ತಂಗಿ ಬಂಗಾರ” ಎನ್ನುವ ನಾಟಕವನ್ನು ನಿರ್ದೇಶನ ಮಾಡಿ ಪ್ರದರ್ಶನ ಮಾಡುತ್ತಿದ್ದು, ಹೌಸ್ಫುಲ್ ಆಗಿ ಗಳಿಸುತ್ತಿದೆ. ಒಂದೇ ತಾಯಿಯ ಉದರದಲ್ಲಿ ಜನಿಸಿದ 2 ಹೆಣ್ಣುಮಕ್ಕಳು ಕುಡುಕ ತಂದೆಯಿಂದ ವೇಶ್ಯವಾಟಿಕೆ ಮಾಡುವ ಮಾರವಾಡಿಗೆ ಮಾರಾಟವಾಗಿ ಒಬ್ಬಳು ವೇಶ್ಯಯಾದರೆ, ಈ ಸಂಕೋಲೆಯಿಂದ ತಪ್ಪಿಸಿಕೊಂಡು ಬಂದ ಮಗು ಒಳ್ಳೆ ಕುಟುಂಬದಲ್ಲಿ ಗೃಹಿಣಿಯಾಗಿ ಬದುಕುತ್ತಾಳೆ. ಈ ನಾಟಕದಲ್ಲಿ ಒಬ್ಬ ಕುಡುಕ ತಂದೆಯಿಂದ ಹೆಣ್ಣಿನ ಬದುಕು ಹೇಗೆ ನರಕವಾಗುತ್ತದೆ ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ನಾಟಕ ಮುಕ್ತಾಯವಾಗುವವರೆಗೂ ಹೊಟ್ಟೆ ಹುಣ್ಣಾಗುವಂತೆ ಹಾಸ್ಯ ಕಲಾವಿದರು ನಗಿಸಿ ಜನರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಇಡೀ ಕುಟುಂಬ ಕುಳಿತು ನೋಡುವಂತಹ ನಾಟಕವಾಗಿದೆ. ಅಲ್ಲದೇ ಈ ನಾಟಕ ಕಂಪನಿಯನ್ನು ರಾಜಣ್ಣನವರಿಂದ ಪಡೆದ ಮಗಳು ಸುಜಾತ ಸುಜಾತಾ ಗುಬ್ಬಿ,ನೀಲಾ ಜೇವರ್ಗಿ ಇವರು ಕಲಾವಿರಾಗಿ ಮುನ್ನೆಡೆಸಿಕೊಂಡು ಹೋಗುತ್ತಿರುವುದು ಇನ್ನೂ ವಿಶೇಷ. ಇವರ ಜೊತೆಗೆ ನಾಟಕವೆಂದರೆ ಹಾಸ್ಯ ಇರಲೇ ಬೇಕು. ನಾಟಕವನ್ನು ಇಡೀ ಕುಟುಂಬ ಕುಳಿತು ನೋಡುವುದರಿಂದ ಹಾಸ್ಯ ಅಪಹಾಸ್ಯವಾಗಿ, ಕೀಳು ಅಶ್ಲೀಲದ ಡಬಲ್ ಮೀನಿಂಗ್ ನಿಂದ ಮುಜುಗರ ಪಡುವ ಸ್ಥಿತಿ ಇಲ್ಲಿ ಇಲ್ಲ. ಜೇವರ್ಗಿ ರಾಜಣ್ಣ ಇವರ ಕಂಪನಿಯ “ಕುಂಟ ಕೋಣ ಮೂಕ ಜಾಣ” ನಾಟಕ ಹಾಸ್ಯದ ಮೂಲಕ ಗಳಿಕೆಯಲ್ಲಿ ದಾಖಲೆಯನ್ನು ಸೃಷ್ಟಿಸುವ ಮೂಲಕ ರಾಜಣ್ಣನವರನ್ನು ಕೈಹಿಡಿದೆತ್ತಿದೆ. ಒಂದೊಂದು ಕಂಪನಿಯ ನಾಟಕ ಒಂದೊಂದು ರೀತಿ ಇರುತ್ತವೆ. ಒಂದು ನಾಟಕ ಒಂದು ಊರಿನಲ್ಲಿ ನಿರೀಕ್ಷೆ ಮೀರಿ. ಗಳಿಸಿದರೆ, ಅದೇ ನಾಟಕ ಇನ್ನೊಂದು ಊರಿನಲ್ಲಿ ನಿರಾಶೆ ಮೂಡಿಸಿರುತ್ತದೆ. ಪ್ರೇಕ್ಷಕ ಯಾವ ರೀತಿ ಬಯಸುತ್ತಾನೆ ಎನ್ನುವುದನ್ನು ಹೇಳಲಾಗುವುದಿಲ್ಲ. ಹೀಗೆ ನಾಟಕ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿ ಕೆಲ ಇಲಾಖೆಯ ಅಧಿಕಾರಿ ಮತ್ತು ನೌಕರರು, ಮುಖಂಡರು ತಾವು ತಮ್ಮ ಕುಟುಂಬ, ಸ್ನೇಹಿತರ ಸಮೇತ ಮುಂದಿನ ಸಾಲಿನಲ್ಲಿ ಕುಳಿತುಕೊಂಡು ಪುಗಸಟ್ಟೆ ಮನೋರಂಜನೆ ನೋಡುವುದು ಸಹಾ ಇರುತ್ತದೆ. ಹೀಗೆ ಪ್ರತಿದಿನ ಕನಿಷ್ಟ 50-100 ಜನ ಹೋದರೆ ಕನಿಷ್ಟ 10,000 ರೂಪಾಯಿ ನಷ್ಟವಾಗುತ್ತದೆ. ಕಲಾವಿದರ ಸಂಬಳ, ಊಟ, ವಿದ್ಯುತ್ ಬಿಲ್, ಪ್ರಚಾರ ಹೀಗೆ ಎಲ್ಲಾ ಲೆಕ್ಕವನ್ನು ಹಾಕಿದರೆ ಪ್ರತಿದಿನಕ್ಕೆ ಕನಿಷ್ಟ ಇಪ್ಪತ್ತು ಸಾವಿರಕ್ಕೂ ಹೆಚ್ಚಿರುತ್ತದೆ.ಉಚಿತವಾಗಿ ಗೌರವ ಪಾಸ್ ಪಡೆದು ಹೋಗುವ ಬದಲು ಗೌರವಯುತವಾಗಿ ಟಿಕೆಟ್ ಖರೀದಿಸಿ ಹೋದರೆ ಅವರ ಊಟಕ್ಕೆ ಸಹಾಯವಾಗುತ್ತದೆ. ಚೆನ್ನಾಗಿದೆ ಎಂದು ಉಚಿತವಾಗಿ ಹೋಗಿ ಖುಷಿ ಪಡುವ ಜನ, ಕಲಾವಿದ ಸಂಕಷ್ಟದಲ್ಲಿದ್ದಾಗ ಸಹಾಯ ಮಾಡುವರೇ? ಗಳಿಕೆ ಇಲ್ಲದೇ ಸಾಲದ ಸುಳಿಯಲ್ಲಿ ಕಂಪನಿ ಮಾಲಕ ಸಿಕ್ಕಾಗ ಸಹಾಯ ಮಾಡುವರೇ? ರಾಜಣ್ಣವರ ಕಂಪನಿಯಲ್ಲಿ ಒಬ್ಬ ಪಿಟೀಲು ವಾದಕ ಮೃತಪಟ್ಟಾಗ ಅಂತ್ಯ ಸಂಸ್ಕಾರ ಮಾಡಲು ಹಣವಿಲ್ಲದೇ ಜನರಲ್ಲಿ ಬಿಕ್ಷೆಬೇಡಿ ತಂದು ಅಂತ್ಯ ಸಂಸ್ಕಾರ ಮಾಡಿದ ಕಹಿ ಘಟನೆಯನ್ನು ಹಂಚಿಕೊಂಡರು. ಅಂದರೆ ಒಮ್ಮೆ ಲಕ್ಷಗಟ್ಟಲೆ ಗಳಿಸುವ ನಾಟಕಗಳು ಒಮ್ಮೊಮ್ಮೆ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಗೆ ನಿಲ್ಲಿಸಿದ ಉದಾಹರಣೆಗಳು ಸಹಾ ಇವೆ. ಹೀಗೆ ಸಿನಿಮಾ ರಂಗದ ಮಧ್ಯೆ ರಂಗ ಕಲೆ ಉಳಿಯಬೇಕೆಂದರೆ ಅವರಿಗೆ ಕೈಲಾದ ಸಹಾಯ ಮಾಡಬೇಕಿದೆ. “ಬರೀ ನೋಡುಗರ ಮನಸ್ಸನ್ನು ಗೆದ್ದರೆ ಸಾಲದು, ಕಂಪನಿ ಮಾಲೀಕರ ಜೇಬನ್ನು ಸಹಾ ಗೆಲ್ಲಿಸಬೇಕು” ಆಗ ಕನ್ನಡ ರಂಗ ಭೂಮಿ ಉಳಿಯುತ್ತವೆ.ನಾಟಕವೆಂದರೆ ಬರೀ ಮನೋರಂಜನೆಯಲ್ಲ. ಸಮಾಜದ ಅಂಕು-ಡೊಂಕನ್ನು ತಿದ್ದುವ ವೇದಿಕೆಯಾಗಿವೆ. ಮಾಸ್ಟರ್ ಹಿರಣ್ಣಯ್ಯನವರು ತಮ್ಮ ನಾಟಕಗಳಲ್ಲಿ ಭ್ರಷ್ಟ ರಾಜಕಾರಣಿಗಳ, ಭ್ರಷ್ಟ ಅಧಿಕಾರಿಗಳ ಮಾನವನ್ನೇ ಹರಾಜು ಹಾಕುತ್ತಿದ್ದರು. ನಾಟಕದಲ್ಲಿ ಹಾಸ್ಯದ ಮಾತುಗಳ ಮೂಲಕ ಭ್ರಷ್ಟರನ್ನ ನಗ್ನಗೊಳಿಸುತ್ತಿದ್ದ ಅವರ ಎದೆಗಾರಿಕೆ ಮೆಚ್ಚುವಂತದ್ದು. ಮಹಾತ್ಮ ಗಾಂಧೀಜಿಯವರು ಹರಿಶ್ಚಂದ್ರ ನಾಟಕವನ್ನು ನೋಡಿ ತಮ್ಮ ಇಡೀ ಬದುಕಿನಲ್ಲೇ ಸತ್ಯವ್ರತರಾಗಿ ಉಳಿಯುವಂತೆ ಮಾಡಿದ್ದು ನಾಟಕದ ಶಕ್ತಿ ಎಂತಹದು ಎನ್ನುವುದನ್ನು ಮರೆಯುವಂತಿಲ್ಲ. ಅಂಧ, ಅನಾಥ ಮಕ್ಕಳಿಗೆ ಆಶ್ರಯ ನೀಡಿ ಅನ್ನ, ಅಕ್ಷರ, ಸಂಗೀತ ವಿದ್ಯೆ ಕಲಿಸಿ ಸ್ವಾಭಿಮಾನಿಯಾಗಿ ಸಮಾಜದಲ್ಲಿ ಉಳಿಯುವಂತೆ ಮಾಡಿದ ಗದುಗಿನ ಪಂಚಾಕ್ಷರಿ ಗವಾಯಿಗಳು ಆಶ್ರಮ ನಡೆಸಲು ಸಂಕಷ್ಟದಲ್ಲಿರುವ ಸಮಯದಲ್ಲಿ ಕೆಲ ಕಲಾವಿದರು ನಾಟಕ ತಂಡ ಕಟ್ಟಿ ಪ್ರದರ್ಶನ ಮಾಡಿ ಆಶ್ರಮಕ್ಕೆ ಸಹಾಯ ಮಾಡುವುದಾಗಿ ವಿನಂತಿಸಿದಾಗ, ನಾಟಕದಲ್ಲಿ ಯಾವುದೇ ಸ್ತ್ರೀಯನ್ನು ಪಾತ್ರಧಾರಿಯಾಗಿ ಬಳಸಬಾರದು ಎನ್ನುವ ಷರತ್ತು ವಿಧಿಸುತ್ತಾರೆ. ಅವರ ಅಪ್ಪಣೆಯಂತೆ ನಾಟಕ ಕಂಪನಿ ಕಟ್ಟಿ ಇಂದಿಗೂ ಸಹಾ ಅದೇ ಸಂಪ್ರದಾಯ ಉಳಿಸಿಕೊಂಡು ಬಂದಿದ್ದು, ಪುರುಷ ಕಲಾವಿದರೇ ಸ್ತ್ರೀಯರು ನಾಚುವಂತೆ ಸ್ತ್ರೀ ಪಾತ್ರವನ್ನ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ.ಕೆಲ ನಾಟಕಗಳಲ್ಲಿ ತುಂಡುಡುಗೆ ನೃತ್ಯದಿಂದ ಪ್ರೇಕ್ಷರನ್ನು ತನ್ನತ್ತ ಸೆಳೆದು ಗಳಿಕೆ ಮಾಡಲು ಪ್ರಯತ್ನಿಸುವವರ ಮಧ್ಯೆ ಸ್ತ್ರೀಯರೇ ಇಲ್ಲದೇ ಪಂಚಾಕ್ಷರಿ ನಾಟ್ಯ ಸಂಘ ಇಂದಿಗೂ ಉಳಿದಿರುವುದು ಅದರ ಹೆಮ್ಮೆ. ಆದ್ದರಿಂದ ಎಲ್ಲೋ ಖರ್ಚು ಮಾಡುವ ನಾವು ನಾಟಕ್ಕೆ 120-150 ರೂಪಾಯಿ ಖರ್ಚು ಮಾಡುವುದರಿಂದ ಕಲಾವಿದ ತನ್ನ ಬದುಕು ಕಟ್ಟಿಕೊಳ್ಳುತ್ತಾನೆ. ಕಲಾವಿದರನ್ನ, ಪ್ರೇಕ್ಷಕರನ್ನ ನಂಬಿ ನಾಟಕ ಕಂಪನಿ ನಡೆಸುತ್ತಿರುವ ಮಾಲಕನೂ ಬದುಕಿ ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಕನ್ನಡ ರಂಗಭೂಮಿ ಉಳಿಸುತ್ತಾನೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಣ್ಣು ಮಗಳು ಗುಬ್ಬಿ ವೀರಣ್ಣ ಇವರ ಮೊಮ್ಮನನ್ನು ವಿವಾಹವಾಗಿರುವ ಸುಜಾತ ಗುಬ್ಬಿ ಇವರು ನಾಟಕವನ್ನು ಮುನ್ನೆಡೆಸುತ್ತಿರುವ ಧೈರ್ಯಮಾಡಿದ್ದು, ಅವರ ಜೊತೆಗೆ ಸಹೋದರಿ ನೀಲಾ ಜೇವರ್ಗಿ ಕೈಜೋಡಿಸಿದ್ದು, ನಾಟಕ ಪ್ರೀಯರು ಪ್ರಚಾರಮಾಡಿ ಇವರನ್ನು ಪ್ರೋತ್ಸಾಹಿಸಬೇಕಲ್ಲವೇ ? ಸಿ.ಮ.ಗುರುಬಸವರಾಜಹವ್ಯಾಸಿ ಬರಹಗಾರರು, ಇಟ್ಟಿಗಿ

Related Articles

Leave a Reply

Your email address will not be published. Required fields are marked *

Back to top button