ರಾಜ್ಯ

Karnataka Budget 2025: ಸಿದ್ದರಾಮಯ್ಯ ಬಜೆಟ್‌ನಲ್ಲಿ ರಾಯಚೂರಿಗೆ ಸಿಕ್ಕ ಕೊಡುಗೆ

ರಾಯಚೂರು : 2025-26ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಪೂರ್ಣಗೊಂಡಿದೆ. ರಾಜ್ಯದ ಹಲವಾರು ಜಿಲ್ಲೆಗಳಿಗೆ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಹಾಗಾದರೆ ರಾಯಚೂರಿಗೆ ಈ ಬಾರಿ ಬಜೆಟ್ ನಲ್ಲಿ ಸಿಕ್ಕ ಕೊಡುಗೆಗಳು ಏನು ಎನ್ನುವುದನ್ನು ಈಗ ತಿಳಿಯೋಣ.

ಕರ್ನಾಟಕದ ಚಿನ್ನ ಉತ್ಪಾದಿಸುವ ಏಕೈಕ ಕಂಪನಿ ಎಂಬ ಹೆಗ್ಗಳಿಕೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ರಾಯಚೂರಿನಲ್ಲಿದೆ. ರಾಜ್ಯದ ಹಲವು ಭಾಗಗಳಿಗೆ ವಿದ್ಯುತ್ ಪೂರೈಸುವ ವಿದ್ಯುತ್ ಉತ್ಪಾದನಾ ಘಟಕಗಳು ರಾಯಚೂರಿನಲ್ಲಿ ಇವೆ. ಹೀಗಿದ್ದರೂ ಕೂಡ ರಾಯಚೂರು ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗುತ್ತಲೇ ಬಂದಿದೆ.

ರಾಯಚೂರು ಮೂಲಭೂತ ಸೌಕರ್ಯಗಳ ಪೂರೈಕೆಗೆ ಅನುದಾನ ಸಿಗದೆ ಶತಮಾನಗಳಿಂದಲೂ ಸಾರ್ವಜನಿಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಶಿಕ್ಷಣ ವ್ಯವಸ್ಥೆ ಸುಧಾರಣೆ, ರಸ್ತೆ, ನೀರು ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬೇಕಾದ ತೃಪ್ತಿದಾಯಕ ಅನುದಾನ ಈವರೆಗೂ ಸಿಕ್ಕಿಲ್ಲ. ಹಾಗಾದರೆ ಚಿನ್ನದ ಗಣಿ, ವಿದ್ಯುತ್ ಉತ್ಪಾದನಾ ಘಟಕಗಳು ಇರುವ ರಾಯಚೂರಿಗೆ ಬಜೆಟ್‌ನಲ್ಲಿ ಸಿಕ್ಕ ಕೊಡುಗೆ ಏನು?

ಬಜೆಟ್ ಮುಖ್ಯ ಅಂಶಗಳು:

* ರಾಯಚೂರು ನಗರಕ್ಕೆ KKRDB macro ಅನುದಾನದಡಿ ಹಾಗೂ ಬೈಲಹೊಂಗಲ ಪಟ್ಟಣಕ್ಕೆ ವರ್ತುಲ ರಸ್ತೆಗಳನ್ನು ನಿರ್ಮಿಸಲು ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲಾಗುವುದು ಎಂದು ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ವೇಳೆ ಘೋಷಣೆ ಮಾಡಿದರು. ಈ ಯೋಜನೆಗಳಿಗೆ ಬೇಕಿರುವ ಜಮೀನನ್ನು Land Pooling ಮಾದರಿಯಲ್ಲಿ ಪಡೆಯಲಾಗುವುದು. ಮುಂದುವರೆದು ವಾಗ್ದಾರಿ-ರಿಬ್ಬನ್‌ಪಳ್ಳಿ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಾಗೂ ಮದ್ದೂರು ನಗರದಲ್ಲಿ ರಸ್ತೆಯ ಅಗಲೀಕರಣಕ್ಕಾಗಿ ವಿಸ್ತೃತ ಯೋಜನಾ ವರದಿಗಳನ್ನು ತಯಾರಿಸಲಾಗುವುದು ಎಂದಿದ್ದಾರೆ.

* 1,696 ಕೋಟಿ ರೂ. ಮೊತ್ತದ ರಾಯಚೂರು-ಸಿಂಧನೂರು ರಸ್ತೆ ಅಭಿವೃದ್ಧಿ ಕಾಮಗಾರಿಯಡಿ ಈವರೆಗೆ 20 ಕೀ.ಮೀ ಉದ್ದದ ರಸ್ತೆ ನಿರ್ಮಿಸಿದ್ದು, ಪ್ರಸಕ್ತ ಸಾಲಿನಲ್ಲಿ ಬಾಕಿ ಉಳಿದ ರಸ್ತೆಯನ್ನು ಪೂರ್ಣಗೊಳಿಸಲಾಗುವುದು.

* ರಾಯಚೂರು, ಬೀದರ್‌ ಹಾಗೂ ಹಾಸನ ನಗರಸಭೆಗಳನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

* ರಾಯಚೂರಿನ ರಾಜೀವ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ಕಿದ್ವಾಯಿ ಪೆರಿಫರೆಲ್ ಕ್ಯಾನ್ಸರ್ ಚಿಕಿತ್ಸಾ ಘಟನಾ ಸ್ಥಾಪಿಸಲಾಗುವುದು.

* ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ 25 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 20 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು ಈಗಾಗಲೇ ಅಂತಿಮ ಸೂಚನೆ ಹೊರಡಿಸಲಾಗಿದೆ.

ವಿಶ್ವನಾಥ್ ಸಾಹುಕಾರ್ tv8kannada ರಾಯಚೂರು

Related Articles

Leave a Reply

Your email address will not be published. Required fields are marked *

Back to top button