ರಾಜ್ಯ
Karnataka Budget: ಅತಿಥಿ ಶಿಕ್ಷಕರಿಗೆ ಸಿಹಿ ಸುದ್ದಿ! ಮಾಸಿಕ ಗೌರವ ಧನ ಹೆಚ್ಚಳ

ಬೆಂಗಳೂರು: state Budget: ಇಂದು (ಮಾ.07) ಬಹುನಿರೀಕ್ಷಿತ ರಾಜ್ಯ ಬಜೆಟ್ (2025-26) ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಈ ಮೂಲಕ 16ನೇ ಬಜೆಟ್ ಮಂಡಿಸಿದ ದಾಖಲೆಯನ್ನೂ ಬರೆಯಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿಯ ಬಜೆಟ್ ಗಾತ್ರ ಶೇ.10ರಷ್ಟು ವೃದ್ಧಿಯೊಂದಿಗೆ 4.15 ಲಕ್ಷ ಕೋಟಿ ರೂ.ದಾಟುವ ಸಾಧ್ಯತೆಯಿದೆ.
ಕುವೆಂಪು ಕವಿತೆ ಮೂಲಕ ಇಂದಿನ ರಾಜ್ಯ ಬಜೆಟ್ ಆರಂಭಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕರಿಗೆ ಮಾಸಿಕ ಗೌರವ ಧನ ಹೆಚ್ಚಿಸಿದ ಸಿಎಂ ಸಿದ್ದರಾಮಯ್ಯ, ತಿಂಗಳಿಗೆ ಎರಡು ಸಾವಿರ ರೂ. ಹೆಚ್ಚಳ ಮಾಡಿದ್ದೇವೆ ಎಂದು ಬಜೆಟ್ನಲ್ಲಿ ಘೋಷಿಸಿದ್ದಾರೆ.