ಬೆಂಗಳೂರು; ಕಳೆದು ಮೂರ್ನಾಲ್ಕು ದಿನಗಳಿಂದಅ ಅಬ್ಬರಿಸಿದ್ದ ಮಳೆರಾಯ (Rainfall) ಶುಕ್ರವಾರದ ವೇಳಗೆ ಮತ್ತೆ ಹಿಂದಿರುಗಲಿದ್ದಾನೆ ಬೆಂಗಳೂರಿನಲ್ಲಿ (Bengaluru) ಇವತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ನಾಳೆ ಗುರುವಾರ ಸಹ ಬೆಂಗಳೂರಿನಲ್ಲಿ ಒಣಹವೆ ಮುಂದುವರಿಯಲಿದ್ದು, ಶುಕ್ರವಾರ ಮಳೆಯಾಗುವ ಸಾಧ್ಯತೆಗಳಿವೆ. ಮೈಸೂರು, ಹಾಸನದಲ್ಲಿ ಇಂದು ತುಂತುರು ಮಳೆಯಾಗುವ ಸಾಧ್ಯತೆ ಇದೆ.

ಇನ್ನುಳಿದಂತೆ ಬೀದರ್, ಕಲಬುರಗಿ, ಕೊಪ್ಪಳ, ಬಾಗಲಕೋಟೆ, ವಿಜಯಪುರದಲ್ಲಿ ಒಣ ಹವೆ ಇರಲಿದ್ದು, ಸೂರ್ಯನ ಪ್ರಖರತೆ ಇರಲಿದೆ. ಚಳಿಗಾಲ ಆರಂಭ ದಿನಗಳಾಗಿದ್ದರಿಂದ, ಬೆಳಗಿನ ಜಾವ ಮತ್ತು ಸಂಜೆ ಶೀತ ಗಾಳಿಯ ಅನುಭವ ಆಗಲಿದೆ. ಮೈಸೂರಿನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇದ್ದು, ಮಳೆಯ ಸಾಧ್ಯತೆಗಳಿವೆ. ಬಳ್ಳಾರಿಯಲ್ಲಿ ಬೇಸಿಗೆ ವಾತಾವರಣ ಇರಲಿದೆ. ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಮಳೆಯಿಂದಾಗಿ ಸಂಕಷ್ಟದಲ್ಲಿ ರೈತ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆ ಅಬ್ಬರಿಸಿತ್ತು. ಸತತ ಮೂರು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಉತ್ತರ ಕನ್ನಡ ಭಾಗದ ರೈತರು ಮಳೆಯಿಂದಾಗಿ ಕೈಗೆ ಬಂದು ತುತ್ತು ನಾಶವಾಗಿತ್ತು. ಮತ್ತೊಂದಡೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಿಂದಾಗಿ ನದಿಗಳಿಗೆ ಜೀವ ಕಳೆ ಬಂದಿತ್ತು. ಜೂನ್ ಮತ್ತು ಜುಲೈನಲ್ಲಿ ಸುರಿದ ಮಳೆಗೆ ತುಂಬಿದ್ದ ಕೆರೆ ಕಟ್ಟೆಗಳು ಬರಿದಾಗುವ ಸಮಯದಲ್ಲಿ ಬಂದ ಮಳೆ ಜೀವ ಸಂಕುಲಕ್ಕೆ ಸಂತಸವನ್ನುಂಟು ಮಾಡಿತ್ತು.