ಕ್ರೈಂ
ರಾಯಚೂರು | ಬೈಕ್-ಕಾರು ನಡುವೆ ಢಿಕ್ಕಿ ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಲಿಂಗಸೂಗೂರು : ಪಟ್ಟಣದ ಹುಣಕುಂಟಿ ಕ್ರಾಸ್ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಮಸ್ಕಿ ತಾಲೂಕಿನ ತಲೇಖಾನ ಬಳಿಯ ಯಾರದೊಡ್ಡಿ ನಿವಾಸಿ ಬಸನಗೌಡ (30) ಮೃತವ್ಯಕ್ತಿ ಎಂದು ಗುರುತಿಸಲಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರದಿಂದ ದಾವಣಗೆರೆಗೆ ಹೊರಟಿದ್ದ ವ್ಯಾಗ್ನರ್ ಕಾರಿಗೆ ಮುದಗಲ್ ನಿಂದ ಲಿಂಗಸೂಗೂರು ಬರುತ್ತಿದ ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ತಿಲಿದುಬಂದಿದೆ.
ಸ್ಥಳಕ್ಕೆ ಲಿಂಗಸೂಗೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ತಿಳಿದುಬಂದಿದೆ.
ವರದಿ: ಮುಸ್ತಾಫಾ tv8kannada ಲಿಂಗಸುಗೂರು