ದೇಶ

PM Modi: ನಾಳೆ ಉತ್ತರಾಖಂಡಕ್ಕೆ ಮೋದಿ ಭೇಟಿ. ಗಂಗಾ ಮಾತೆಗೆ ಪೂಜೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಗುರುವಾರ(ಮಾ.6) ಉತ್ತರಾಖಂಡಕ್ಕೆ ಭೇಟಿ ನೀಡುತ್ತಿದ್ದು, ಹರ್‌ಸಿಲ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬೆಳಗ್ಗೆ 9:30ಕ್ಕೆ ಮುಖ್ವಾದಲ್ಲಿರುವ ಗಂಗಾ ಮಾತೆಗೆ ಪೂಜೆ ಸಲ್ಲಿಸಲಿರುವ ಪ್ರಧಾನಿ, ಬೆಳಗ್ಗೆ 10:40ರ ಸುಮಾರಿಗೆ ಹರ್‌ಸಿಲ್‌ನಲ್ಲಿ ಚಾರಣ ಮತ್ತು ಬೈಕ್‌ ರಾಲಿಗಳಿಗೆ ಚಾಲನೆ ನೀಡಲಿದ್ದಾರೆ.

ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಹೇಳಿಕೆ ನೀಡಿದೆ.

ಪ್ರಸಕ್ತ ವರ್ಷದಿಂದ ಚಳಿಗಾಲದ ಪ್ರವಾಸೋದ್ಯಮ ಕಾರ್ಯಕ್ರಮವನ್ನು ಉತ್ತರಾಖಂಡ ಸರ್ಕಾರ ಪ್ರಾರಂಭಿಸಿದೆ.

Related Articles

Leave a Reply

Your email address will not be published. Required fields are marked *

Back to top button