ಇತ್ತೀಚಿನ ಸುದ್ದಿ
ಗುರುಗುಂಟ ಅಮರೇಶ್ವರ ಜಾತ್ರೆ: ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

ಲಿಂಗಸುಗೂರು : ತಾಲ್ಲೂಕಿನ ಸುಕ್ಷೇತ್ರ ಅಮರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಅಭಿನವ ಗಜದಂಡ ಶಿವಾಚಾರ್ಯರು ಬುಧವಾರ ಸಂಜೆ ಚಾಲನೆ ನೀಡಿದರು.
ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದಿಂದ ಕಳಸ, ಯರಡೋಣಿ ಗ್ರಾಮದಿಂದ ಉತ್ಸವ ಮೂರ್ತಿ ಹಾಗೂ ದೇವರಭೂಪುರದಿಂದ ದೇವರ ಪಲ್ಲಕ್ಕಿಯೊಂದಿಗೆ ತೆರಳಿ ಪಾದಗಟ್ಟಿಗೆ ಬಸವಪಟ ಕಂಕಣ ಕಟ್ಟಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
6ರಿಂದ 11ರವರೆಗೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ ನಡೆಯಲಿದೆ. 12ರಂದು ಗುರುಗುಂಟಾ ಸಂಸ್ಥಾನದಲ್ಲಿ ವಿಶೇಷ ಪೂಜೆ, 13ಕ್ಕೆ ಗುಂತಗೋಳ ಸಂಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದ್ದು, 14ರಂದು ಸಂಜೆ ಮಹಾರಥೋತ್ಸವ ನಡೆಯಲಿದೆ.
ವರದಿ : ಮುಸ್ತಾಫಾ tv8kannada ಲಿಂಗಸುಗೂರು