BREAKING NEWS : ಗಂಡಸರಿಗೂ ಫ್ರೀ ಬಸ್ ಸೇವೆ..!? – ಸಚಿವ ರಾಮಲಿಂಗಾಡ್ಡಿ ಸ್ಫೋಟಕ ಸುಳಿವು..!

ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯನ್ನು ಪುರುಷರಿಗೂ ವಿಸ್ತರಿಸಿ ಎಂಬ ಬೇಡಿಕೆ ಆರಂಭದಿಂದಲೂ ಕೇಳಿ ಬಂದಿತ್ತು.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಪುರುಷರಿಗೆ ಫೀ ಬಸ್ ಯೋಜನೆಯನ್ನು ವಿಸ್ತರಿಸಬೇಕು.
ವಾರಕ್ಕೆ ಕನಿಷ್ಠ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಬಸ್ ಪ್ರಯಾಣ ದರ ಅಂಥವರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಅಂತಹ ಪುರುಷರಿಗೆ ಅನುವಾಗಲು ಫ್ರೀ ಬಸ್ ಯೋಜನೆ ವಿಸ್ತರಿಸುವಂತೆ ಇತ್ತೀಚೆಗೆ ಸ್ಪೀಕರ್ ಯು.ಟಿ. ಖಾದರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು ಎಂದು ವರದಿಯಾಗಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಪುರುಷ ಡಯಾಲಿಸಿಸ್ ರೋಗಿಗಳಿಗಂದ ಫ್ರೀ ಬಸ್ ಪ್ರಯಾಣದ ಬೇಡಿಕೆ ಇದೆ. ಉಚಿತ ಪ್ರಯಾಣ ವ್ಯ ವಸ್ಥೆಗೆ ದುಡ್ಡು ಅವಶ್ಯಕತೆ ಇದೆ. ನಮ್ಮ ಇಲಾಖೆಗೆ ಈ ಬಜೆಟ್ ನಲ್ಲಿ ದುಡ್ಡು ಹೆಚ್ಚಾಗಿ ಬಂದರೆ ಅದು ಸಾಧ್ಯ. ಅನುದಾನ ಬಂದರೆ ಆಮೇಲೆ ನಿರ್ಧಾರ ಮಾಡಲಾಗುವುದು ಎನ್ನುವ ಮೂಲಕ ಪುರಷರಿಗೆ ಫ್ರೀ ಬಸ್ ಯೋಜನೆ ವಿಸ್ತರಿಸುವ ಬಗ್ಗೆ ಸಚಿವರು ಸುಳಿವು ನೀಡಿದರು.