ಕೊರೊನಾ ಹೊಸ ತಳಿ ಡೆಲ್ಮಿಕ್ರಾನ್.!
ಕಳೆದ 2 ವರ್ಷಗಳಿಂದ ಸಾಂಕ್ರಾಮಿಕವು(Epidemic ) ಸಂಪೂರ್ಣ ವಿಶ್ವವನ್ನೇ ಹೈರಾಣಾಗಿಸಿದ್ದು, 2022ರಲ್ಲೂ ಸಾಂಕ್ರಾಮಿಕ ಮುಕ್ತವಾಗಿ ಜೀವಿಸಬಹುದೆಂಬ ಆಲೋಚನೆಯನ್ನು ಓಮೈಕ್ರಾನ್ (Omicron) ಸ್ತಬ್ಧವಾಗಿಸಿದೆ. ಇದೀಗ ಅಮೆರಿಕ ಹಾಗೂ ಯುರೋಪ್ನಲ್ಲಿ ಡೆಲ್ಮಿಕ್ರಾನ್ (Delmicron) ರೂಪಾಂತರವು ಅಟ್ಟಹಾಸಕಾರಿಯಾಗಿ ಪ್ರಕರಣಗಳಲ್ಲಿ ಉಲ್ಬಣತೆಯನ್ನುಂಟು ಮಾಡಿದ್ದು ಈ ಡೆಲ್ಮಿಕ್ರಾನ್ ಡೆಲ್ಟಾ ಹಾಗೂ ಓಮೈಕ್ರಾನ್ ರೂಪಾಂತರಗಳ ಸಮ್ಮಿಶ್ರವಾಗಿದೆ. ಇದು ಇನ್ನಷ್ಟು ವೇಗವಾಗಿ ಹರಡುವ ಸಾಮರ್ಥ್ಯ ಪಡೆದುಕೊಂಡಿದೆ. ಮಹಾರಾಷ್ಟ್ರದ ಕೋವಿಡ್-19 ಟಾಸ್ಕ್ ಪೋರ್ಸ್ (Task Force) ಸದಸ್ಯರಾಗಿರುವ ಶಶಾಂಕ್ ಜೋಶಿ, ಡೆಲ್ಮಿಕ್ರಾನ್ ಎಂಬುದು ಡೆಲ್ಟಾ ಹಾಗೂ ಓಮೈಕ್ರಾನ್ ನ ದ್ವಿ ರೂಪಾಂತರವಾಗಿದ್ದು ಯುರೋಪ್ ಹಾಗೂ ಅಮೆರಿಕದಲ್ಲಿ (Europe and America) ಪ್ರಕರಣಗಳ ತೀವ್ರ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಡೆಲ್ಟಾ ರೂಪಾಂತರವು ವ್ಯಾಪಕರವಾಗಿ ಬಹಿರಂಗಗೊಂಡಿರುವಾಗ ಭಾರತದಲ್ಲಿ ಓಮೈಕ್ರಾನ್ ಯಾವ ರೀತಿ ಹರಡಲಿದೆ ಹಾಗೂ ಸಾಂಕ್ರಾಮಿಕದ ದುಷ್ಪರಿಣಾಮಗಳೇನು ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ತಿಳಿಸಿದ್ದಾರೆ. ಡೆಲ್ಟಾ ರೂಪಾಂತರ ಇದೀಗ ಭಾರತದಲ್ಲಿ ಹೆಚ್ಚು ಸಾಮಾನ್ಯ ರೂಪದಲ್ಲಿದ್ದು ವಿಶ್ವದ ಇತರೆಡೆಗಳಲ್ಲಿ ಕೂಡ ಹರಡಿದೆ ಜೊತೆಗೆ ಓಮೈಕ್ರಾನ್ ಡೆಲ್ಟಾವನ್ನು ಹಿಂದಿಕ್ಕಿ ವೇಗವಾಗಿ ಹರಡುತ್ತಿದೆ ಎಂದು ತಿಳಿಸಿದ್ದಾರೆ.
ಓಮೈಕ್ರಾನ್ ಗಿಂತ ಡೆಲ್ಮಿಕ್ರಾನ್ ಹೇಗೆ ಭಿನ್ನವಾಗಿದೆ?
ಓಮೈಕ್ರಾನ್ ಎಂಬುದು SARS-COV-2 ನ B.1.1.529 ಫಾರ್ಮ್ನಿಂದ ಹೆಚ್ಚು ರೂಪಾಂತರಗೊಂಡಿದ್ದು, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿತ್ತು. ಇದು ವೇಗವಾಗಿ ಹರಡಿದ್ದು ಪ್ರಸ್ತುತ ಡೆಲ್ಟಾಗಿಂತಲೂ ಸೌಮ್ಯ ರೋಗಲಕ್ಷಣಗಳನ್ನು ಪ್ರಕಟಿಸುತ್ತಿದೆ. ಡೆಲ್ಟಾ ರೂಪಾಂತರಕ್ಕಿಂತಲೂ ಮರಣ ಪ್ರಮಾಣ ಕಡಿಮೆ ಇದೆ ಆದರೆ ಡೆಲ್ಮಿಕ್ರಾನ್ ಡೆಲ್ಟಾ ಹಾಗೂ ಓಮೈಕ್ರಾನ್ ನ ಸಂಯೋಜನೆಯಾಗಿದ್ದು ರೂಪಾಂತರಗಳ ಅವಳಿ ಸ್ಪೈಕ್ ಆಗಿವೆ.
ಲಸಿಕೆಗಳು ಹೇಗೆ ಪರಿಣಾಮಕಾರಿಯಾಗಿವೆ?
ಆರ್ಥಿಕವಾಗಿ ಸಬಲರಾಗಿರುವ ದೇಶಗಳು ಹೆಚ್ಚುವರಿ ಕೋವಿಡ್ ಲಸಿಕೆಗಳ ಬಿಡುಗಡೆಯಲ್ಲಿ ಮಾಡುತ್ತಿರುವ ತರಾತುರಿಯಿಂದ ಲಸಿಕೆಗಳ ಲಭ್ಯತೆಯಲ್ಲಿ ಅಸಮಾನತೆಯುಂಟಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರಾಸ್ ಅಡಾನಮ್ ಗೆಬ್ರಿಯೂಸಸ್ ಈಗಾಗಲೇ ಲಸಿಕೆ ಪಡೆದುಕೊಂಡವರಿಗೆ ಹೆಚ್ಚುವರಿ ಡೋಸ್ಗಳನ್ನು ನೀಡುವ ಬದಲಿಗೆ ಅಗತ್ಯವಿರುವ ಜನರಿಗೆ ಲಸಿಕೆಗಳನ್ನು ಒದಗಿಸುವುದು ಇದೀಗ ಅತ್ಯವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ನ ಹೊಸ ರೂಪಾಂತರ ಪತ್ತೆಯಾದಾಗಿನಿಂದ ಜಾಗತಿಕವಾಗಿ ಇದು ಕ್ಷಿಪ್ರಗತಿಯನ್ನು ಪಡೆದುಕೊಂಡಿದ್ದು, ಸಾಂಕ್ರಾಮಿಕವು ಇನ್ನೇನು ಮುಕ್ತಾಯಗೊಂಡಿತು ಎಂಬ ಆಶಾವಾದವನ್ನೇ ಬುಡಮೇಲು ಮಾಡಿದೆ ಎಂದು ತಿಳಿಸಿದ್ದಾರೆ. ಹೊಸ ರೂಪಾಂತರವು ಊಹಿಸದೇ ಇರುವ ವೇಗದಲ್ಲಿ ಹಬ್ಬುತ್ತಿದ್ದು ಈಗಾಗಲೇ 106 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ಹೊಸ ರೂಪಾಂತರದ ಹಾವಳಿಯಿಂದ ಭಾರತದ ಸ್ಥಿತಿಗತಿ ಏನು?
ಕೇಂದ್ರ ಆರೋಗ್ಯ ಸಚಿವಾಲಯವು ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, 16 ರಾಜ್ಯಗಳಲ್ಲಿ ಓಮಿಕ್ರಾನ್ ರೂಪಾಂತರದ 236 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 104 ಜನರು ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಓಮೈಕ್ರಾನ್ ನ 65 ಪ್ರಕರಣಗಳು ಪತ್ತೆಯಾಗಿದ್ದು ದೆಹಲಿ 64, ತೆಲಂಗಾಣ 24, ಕರ್ನಾಟಕ 19, ರಾಜಸ್ಥಾನ 21 ಹಾಗೂ ಕೇರಳ 15 ಪ್ರಕರಣಗಳನ್ನು ವರದಿ ಮಾಡಿದೆ. ಒಟ್ಟು 3,47,65,976 ಪ್ರಕರಣಗಳಲ್ಲಿ ಭಾರತವು ಹೊಸದಾಗಿ 7,495 ಕೊರೋನಾ ವೈರಸ್ ಪ್ರಕರಣಗಳನ್ನು ವರದಿ ಮಾಡಿದ್ದು ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 78,291ಕ್ಕೆ ಏರಿಕೆಯಾಗಿದೆ. 434 ಹೊಸ ಸಾವುನೋವುಗಳ ಸಂಖ್ಯೆಯೊಂದಿಗೆ ಮರಣ ಪ್ರಮಾಣವು 4,78,759 ಕ್ಕೆ ಏರಿಕೆಯಾಗಿದೆ.
ಕೋವಿಡ್-19 ಅಂಕಿ ಅಂಶ
ಕಳೆದ 56 ದಿನಗಳಿಂದ 15,000ಕ್ಕಿಂತ ಕೆಳಮಟ್ಟದಲ್ಲಿ ಹೊಸ ಕೋವಿಡ್ ಸೋಂಕುಗಳ ಪ್ರಕರಣಗಳಲ್ಲಿ ದೈನಂದಿನ ಏರಿಕೆಯಾಗುತ್ತಿದೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರವು 98.40%ಗೆ ಇನ್ನಷ್ಟು ಸುಧಾರಣೆಯಾಗಿದ್ದು ಮಾರ್ಚ್ 2020ರಿಂದ ಇದು ಅತ್ಯಧಿಕ ಎಂಬುದಾಗಿ ಸಚಿವಾಲಯವು ತಿಳಿಸಿದೆ. 24 ಗಂಟೆಗಳಲ್ಲಿ ಭಾರತವು ಸಕ್ರಿಯ ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚುವರಿ 101 ಪ್ರಕರಣಗಳನ್ನು ದಾಖಲಿಸಿದೆ. ಭಾರತದ ಕೋವಿಡ್-19 ಅಂಕಿ ಅಂಶವು ಆಗಸ್ಟ್ 7, 2020ರಂದು 20 ಲಕ್ಷ ದಾಟಿದ್ದು, ಆಗಸ್ಟ್ 23ರಂದು 30 ಲಕ್ಷ, ಸಪ್ಟೆಂಬರ್ 5ರಂದು 40 ಲಕ್ಷ ಹಾಗೂ ಸಪ್ಟೆಂಬರ್ 16ರಂದು 50 ಲಕ್ಷ ದಾಖಲಿಸಿದೆ.