ಅಡವಿಬಾವಿ ಗ್ರಾಮದಲ್ಲಿ ಕ್ಷಯ ರೋಗ ನಿರ್ಮೂಲನೆ ಕುರಿತು ಜಾಗೃತಿ

ಲಿಂಗಸುಗೂರು: ಇಂದು 100 ದಿನಗಳ ಕ್ಷಯ ರೋಗ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ ವನ್ನು ಈಚನಾಳ್ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಡವಿಬಾವಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಪ್ರಾಣೇಶ್ ಅವರು ಮಾತನಾಡಿ 100ದಿನಗಳ ಅಭಿಯಾನದಲ್ಲಿ ಎಲ್ಲಾ ಧೂಮಪಾನ ಮಾಡುವವರು. ಮಧುಮೇಹ ಇರುವವರು.60ವರ್ಷ ಮೇಲ್ಪಟ್ಟ ವರು , ಕಾರ್ಮಿಕರು, ಅಪೌಷ್ಠಿಕ ಮಕ್ಕಳು ,25 kg ಗಿಂತ ಕಡಿಮೆ ತೂಕದ ವರನ್ನು ಆಯಾ ಗ್ರಾಮದಲ್ಲಿಯೇ ತಪಾಸಣೆ ಮಾಡಿ ಕಫ ಹಾಗೂ ಎಕ್ಸ್ ರೇ ಗೆ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಕ್ಕೆ ರೆಫರ್ ಮಾಡಲಾಗುವುದು. ಸಾರ್ವಜನಿಕರು. ಜನ ಪ್ರತಿನಿಧಿಗಳು ಕ್ಷಯ ರೋಗ ನಿರ್ಮೂಲನೆಗೆ ಕೈ ಜೋಡಿಸಲು ಕೋರಿದರು.
ಕ್ಷಯ ರೋಗ ಮೇಲ್ವಿಚಾರಕ ಶ್ರೀ ರವಿಕುಮಾರ್ ಹೂಗಾರ ಅವರು ಮಾತನಾಡಿ ಕ್ಷಯ ರೋಗ ಲಕ್ಷಣಗಳು ಎರಡು ವಾರಕ್ಕಿಂತ ಹೆಚ್ಚಿನದಿನಗಳ ಕಫದೊಂದಿಗಿನ ಕೇಮ್ಮು.ಕಫದಲ್ಲಿ ಆಗಾಗ್ಗೆ ರಕ್ತಕಾಣುವುದು.ಹಸಿವಾಗದಿರುವದು.ಜ್ವರ, ತೂಕ ಕಡಿ ಮೆಯಾಗುವಿಕೆ ಪ್ರಮುಖ ಲಕ್ಷಣ ಗಳಾಗಿವೆ . ಇಂತಹ ಲಕ್ಷಣ ಇರುವವರು ಇಲಾಖೆಯಿಂದ ದೊರೆಯುವ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಲು ತಿಳಿಸಿದರು.
ಮಾನಸಿಕ ಆರೋಗ್ಯ ಕಾರ್ಯಕರ್ತೆ ಮಂಜುಳಾ, ಸಮುದಾಯ ಆರೋಗ್ಯ ಅಧಿಕಾರಿ ಹರಿತಾ,ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಗದೀಶ, ಮಲ್ಲಮ್ಮ,ಆಶಾ ಹನುಮಂತಿ.ಹಾಜರಿದ್ದರು.
ವರದಿ: ಮುಸ್ತಾಫಾ tv8kannada ಲಿಂಗಸೂಗೂರು