ಇತ್ತೀಚಿನ ಸುದ್ದಿ

Ladle Mashak Dargah: ದರ್ಗಾದೊಳಗೆ ನಾಳೆ ಶಿವಪೂಜೆಗೆ ಅನುಮತಿ! ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ

ಕಲಬುರಗಿ: ಹಿಂದೂಗಳ ಪವಿತ್ರ ಹಬ್ಬ ಮಹಾಶಿವರಾತ್ರಿಗೆ (Maha Shivaratri) ಇನ್ನೊಂದೇ ದಿನ ಬಾಕಿ ಇದೆ. ಭಾರತದಾದ್ಯಂತ ಶಿವಪೂಜೆಗೆ (Shiva Pooja) ಭರ್ಜರಿ ತಯಾರಿ ನಡೆದಿದ್ದು, ನಾಳೆ ಎಲ್ಲೆಡೆ ಶಿವನಾಮ ಪಠಣೆ ನಡೆಯಲಿದೆ. ಇತ್ತ ಕಲಬುರಗಿ (Kalaburagi) ಜಿಲ್ಲೆಯ ಆಳಂದ (Aland) ತಾಲೂಕಿನ ಪ್ರಸಿದ್ಧ ಲಾಡ್ಲೆ ಮಶಾಕ್ ದರ್ಗಾದಲ್ಲೂ (Ladle Mashak Dargah) ಕೂಡ ಶಿವಪೂಜೆ ನಡೆಯಲಿದೆ.

ಹೌದು, ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಪೂಜೆಗೆ ಅವಕಾಶ ನೀಡಿ ಕಲಬುರಗಿ ಹೈಕೋರ್ಟ್ (High Court) ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ದರ್ಗಾದಲ್ಲಿ ಶಿವಪೂಜೆಗೆ ಅವಕಾಶ ಕೇಳಿದ್ದ ಭಕ್ತರು

ನಾಳೆ ಮಹಾ ಶಿವರಾತ್ರಿಯಂದು ಪ್ರಸಿದ್ಧ ಲಾಡ್ಲೇ ಮಶಾಕ್ ದರ್ಗಾದ ಆವರಣದಲ್ಲಿನ ಶಿವಲಿಂಗ ಪೂಜೆಗೆ ಭಕ್ತರು ಹಾಗೂ ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ದರ್ಗಾದ ಆವರಣದಲ್ಲಿನ ರಾಘವ ಚೈತನ್ಯ ಶಿವಲಿಂಗದ ಪೂಜೆ ಅನುಮತಿ ಕೇಳಿ, ಹಿಂದೂ ಸಂಘಟನೆಗಳು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಅನುಮತಿ ನಿರಾಕರಿಸಿದ್ದ ಜಿಲ್ಲಾಧಿಕಾರಿ

ದರ್ಗಾದೊಳಗೆ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ವಿವಿಧ ಮಠಾಧೀಶರ ಜೊತೆಗೆ 500 ಜನರಿಗೆ ಅವಕಾಶ ‌ನೀಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ಗೆ ಹಿಂದೂ ಸಂಘಟನೆ ಸದಸ್ಯರು ಮನವಿ ಸಲ್ಲಿಸಿದ್ದರು. ಆದರೆ ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ದರ್ಗಾದೊಳಗೆ ಶಿವಪೂಜೆಗೆ ಜಿಲ್ಲಾಧಿಕಾರಿ ಅನಮತಿ ನೀಡಿರಲಿಲ್ಲ.

ನಾಳೆ ಶಿವಪೂಜೆಗೆ ಅನುಮತಿ ನೀಡಿದ ಹೈಕೋರ್ಟ್ ವಿಭಾಗೀಯ ಪೀಠ

ಇನ್ನು ಜಿಲ್ಲಾಧಿಕಾರಿ ಅನುಮತಿ ನಿರಾಕರಣೆ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಸದಸ್ಯರು ಹೈಕೋಟ್೯ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ನಾಳೆ ಶಿವಪೂಜೆಗೆ ಅನುಮತಿ ನೀಡಿದೆ.

ಆಂದೋಲ ಸ್ವಾಮೀಜಿಗೆ ಪೂಜೆಗಿಲ್ಲ ಅವಕಾಶ

ಕಳೆದ ಬಾರಿ 15 ಜನರಿಗೆ ಅವಕಾಶ ನೀಡಿದ್ದ ಹೈಕೋರ್ಟ್, ಈ ಬಾರಿಯೂ ಶಿವಪೂಜೆಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಬಾರಿಯೂ ಹಿಂದೂ ಸಂಘಟನೆಯ 15 ಜನರಿಗೆ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದೆ. ಆದರೆ ಆಂದೋಲ ಸಿದ್ದಲಿಂಗ ಸ್ವಾಮೀಜಿಗೆ ಪೂಜೆಗೆ ಅವಕಾಶ ನೀಡಿಲ್ಲ. ಸ್ವಾಮೀಜಿ ಹೊರತುಪಡಿಸಿ 15 ಜನರಿಗೆ ಪೂಜೆಗೆ ಅವಕಾಶ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button