ಮಹಾಶಿವರಾತ್ರಿ ದಿನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ! ಪಾಲಿಸಲೇಬೇಕಾದ ವಿಷಯಗಳಿವು | Maha Shivaratri

ನಾಳೆ (ಫೆ.26) ಮಹಾಶಿವರಾತ್ರಿ ಹಬ್ಬ. ಶಿವನ ನಾಮಸ್ಮರಣೆ, ಧ್ಯಾನದ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವ ಹಬ್ಬವಿದು. ಹಿಂದೂ ಪುರಾಣಗಳ ಪ್ರಕಾರ, ಮಹಾಶಿವರಾತ್ರಿ ಹಬ್ಬವು ಬಹಳ ವಿಶೇಷವಾಗಿದೆ. ಈ ದಿನದಂದು, ಭಕ್ತಾಧಿಗಳು ಮುಕ್ಕಣ್ಣನನ್ನು ಬಹಳ ಭಕ್ತಿಪೂರ್ವಕವಾಗಿ ಪೂಜಿಸುತ್ತಾರೆ.
ಪ್ರತಿವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾಶಿವರಾತ್ರಿ ಸಂಭವಿಸುತ್ತದೆ.ಪ್ರತಿಯೊಬ್ಬ ಶಿವಭಕ್ತರು ಈ ಹಬ್ಬದ ದಿನದಂದು ವಿಶೇಷ ಭಕ್ತಿಯಿಂದ ದೇವರಿಗೆ ಹಲವಾರು ಹಣ್ಣು, ಪುಷ್ಪಗಳಿಂದ ಪೂಜಿಸುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಭಕ್ತರು ಶಿವಲಿಂಗಕ್ಕೆ ಜಲಭಿಷೇಕ ಮಾಡುತ್ತಾರೆ. ಈ ವೇಳೆ ಶಿವ ಮಂತ್ರಗಳನ್ನು ಪಠಿಸುತ್ತಾರೆ. ಆಚರಣೆಗಳ ಪ್ರಕಾರ, ಶಿವರಾತ್ರಿಯಂದು ಭಕ್ತರು ಭಕ್ತಿ ಭಾವದಿಂದ ಪೂಜಿಸಿದರೆ ತಮ್ಮೆಲ್ಲಾ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತದೆ ಎಂಬುದು ಒಂದು ಬಲವಾದ ನಂಬಿಕೆ. ಪ್ರತಿ ವರ್ಷದಂತೆ, ಈ ವರ್ಷವೂ ಮಹಾಶಿವರಾತ್ರಿಯ ದಿನದಂದು ಯಾವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು? ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿಯೋಣ.

ಮಹಾಶಿವರಾತ್ರಿಯನ್ನು ಸಾಮಾನ್ಯವಾಗಿ ರಾತ್ರಿಯಲ್ಲಿ ಆಚರಿಸಲಾಗುತ್ತದೆ. ಭಗವಂತನನ್ನು ಪೂಜಿಸಲು ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಶಿವ ದೇವಾಲಯಗಳನ್ನು ಸೇರುತ್ತಾರೆ. ರಾತ್ರಿಯಲ್ಲಿ ಶಿವನಾಮವನ್ನು ಜಪಿಸುವ ಮೂಲಕ ಭಕ್ತಿ ಪರವಶರಾಗುತ್ತಾರೆ. ಹಬ್ಬದ ದಿನದಂದು ಅನೇಕ ಭಕ್ತರು ಹಲವಾರು ನಿಯಮಗಳನ್ನು ಪಾಲಿಸುತ್ತಾರೆ. ಶಿವನ ಸನ್ನಿಧಿಯಲ್ಲಿ ರಾತ್ರಿಯಿಡೀ ಶಿವನಾಮ, ಮಂತ್ರಗಳ ಪಠಿಸುವ ಮೂಲಕ ಜಾಗರಣೆ ಮಾಡುವುದು ಈ ಹಬ್ಬದ ವಿಶೇಷತೆ.
ಕೆಲವರು ಕೇವಲ ನಿದ್ರೆ ತ್ಯಜಿಸುವ ಮೂಲಕ ಜಾಗರಣೆ ಮಾಡಿದರೆ, ಇನ್ನೂ ಕೆಲವರು ಬೆಳಗ್ಗಿನಿಂದಲೇ ಉಪವಾಸ ಮಾಡುತ್ತಲೇ, ಜಾಗರಣೆ ಮಾಡುತ್ತಾರೆ. ಶಿವನ ಭಕ್ತಿಪೂರ್ವಕ ಪೂಜೆಯಲ್ಲಿ ಇಡೀ ರಾತ್ರಿ ಕಳೆಯುತ್ತಾರೆ. ಮಹಾಶಿವರಾತ್ರಿಯ ದಿನದಂದು ಯಾವ ತಪ್ಪುಗಳನ್ನು ಮಾಡಬಾರದು? ಈ ಸಂದರ್ಭದಲ್ಲಿ ಏನ್ನನ್ನು ಮಾಡಿದರೆ ತಪ್ಪು ಎಂಬ ಒಂದಷ್ಟು ವಿಚಾರಗಳ ವಿವರ ಹೀಗಿದೆ ಗಮನಿಸಿ.

1. ನಿದ್ರಿಸುವುದನ್ನು ತಪ್ಪಿಸಿ
ಮಹಾಶಿವರಾತ್ರಿಯ ದಿನದಂದು ಇಡೀ ರಾತ್ರಿ ಮಲಗಬಾರದು. ಭಗವಂತನ ಧ್ಯಾನ, ಸೇವೆ ಮೂಲಕ ಎಚ್ಚರವಾಗಿರಬೇಕು. ಹೀಗೆ ಮಾಡಲು ವಿಫಲವಾದರೆ, ನೀವೆಷ್ಟೇ ಪೂಜೆ ಮಾಡಿದರೂ ಪುಣ್ಯ ಫಲಗಳು ಸಿಗುವುದಿಲ್ಲ ಎಂಬುದು ನಂಬಿಕೆ.
2. ಮಾಂಸಾಹಾರ ತಿನ್ನಬೇಡಿ
ಶಿವರಾತ್ರಿಯ ದಿನದಂದು, ನಿದ್ರೆ ಮಾತ್ರವಲ್ಲ, ಆಹಾರವನ್ನು ಸಹ ಸೇವಿಸಬಾರದು. ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು. ಅದು ಕೂಡ ಲಘು ತಿಂಡಿಯಾಗಿರಬೇಕು. ಮುಖ್ಯವಾಗಿ ಸುಲಭವಾಗಿ ಜೀರ್ಣವಾಗುವಂತಿರಬೇಕು. ಅತಿಯಾಗಿಯೂ ತಿನ್ನಬಾರದು. ಮಾಂಸಾಹಾರಿ ಆಹಾರವನ್ನು ಮುಟ್ಟಲೇಬಾರದು. ಹಣ್ಣು, ಹಾಲು ಅಥವಾ ಯಾವುದೇ ಒಣ ಹಣ್ಣುಗಳನ್ನು ಸೇವಿಸಬಾರದು.
3. ಮದ್ಯ ತ್ಯಜಿಸಿ
ಶಿವರಾತ್ರಿಯ ದಿನದಂದು ಮದ್ಯ ಸೇವಿಸಬಾರದು. ಮದ್ಯಕ್ಕೆ ಸಂಬಂಧಿಸಿದಂತ ಪಾನೀಯಗಳನ್ನು ಸೇವಿಸಬಾರದು. ಭಗವಂತನ ಪ್ರಸಾದ ಮತ್ತು ತೀರ್ಥಗಳನ್ನು ಮಾತ್ರ ಸೇವಿಸಬೇಕು. ಇತರೆ ಆಹಾರಗಳನ್ನು ತಿನ್ನುವುದು ಸರಿಯಲ್ಲ.
4. ಉಪವಾಸ ನಿರ್ಲಕ್ಷಿಸಬೇಡಿ
ಭಕ್ತರು ಶಿವರಾತ್ರಿಯ ಸಮಯದಲ್ಲಿ ಉಪವಾಸವನ್ನು ಪಾಲಿಸಬೇಕು. ಇಡೀ ದಿನ ಉಪವಾಸ ಮಾಡಬೇಕು ಮತ್ತು ಶಿವನ ಸಾನ್ನಿಧ್ಯವನ್ನು ಆನಂದಿಸಬೇಕು. ಉಪವಾಸದ ಹಿಂದಿನ ಅರ್ಥವನ್ನು ತಿಳಿಯಬೇಕು. ಉಪವಾಸವು ನಿಮ್ಮ ದೇಹದಲ್ಲಿ ಸಂಗ್ರಹವಾದ ವಿಷವನ್ನು ನಿರ್ವಿಷಗೊಳಿಸುತ್ತದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮನಸ್ಸನ್ನು ಭಕ್ತಿಯ ಮಾರ್ಗದಲ್ಲಿ ಮಾತ್ರ ಇರಿಸಿಕೊಳ್ಳಲು ಪ್ರಯತ್ನಿಸಬೇಕು.
5. ಸಮರ್ಪಣಾಭಾವದ ನಿದ್ರೆ
ಶಿವರಾತ್ರಿಯ ದಿನವನ್ನು ಸಾಧಾರಣ ದಿನವೆಂದು ಪರಿಗಣಿಸಬಾರದು. ಇಡೀ ದಿನ ಭಗವಂತನ ಪೂಜೆಯಲ್ಲಿ ಮಗ್ನರಾಗಬೇಕು. ಸಮರ್ಪಣಾ ಭಾವದಿಂದ ಮಲಗಬೇಕು. ಮನರಂಜನೆಗಾಗಿ ಫೋನ್ ಮತ್ತು ಟಿವಿಗಳೊಂದಿಗೆ ಸಮಯ ವ್ಯರ್ಥ ಮಾಡಬಾರದು. ಧ್ಯಾನ, ಜಪ ಮತ್ತು ಮಂತ್ರಗಳನ್ನು ಪಠಿಸುತ್ತಾ ದೇವರನ್ನು ಸ್ಮರಿಸಬೇಕು.