ಜನಪ್ರಿಯ ಆಡಿಯೊ ಚಾಟ್ ಅಪ್ಲಿಕೇಶನ್ ಕ್ಲಬ್ಹೌಸ್ (Clubhouse) ಮಂಗಳವಾರ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಾ ಬರುತ್ತಿರುವ ಕ್ಲಬ್ಹೌಸ್ ತನ್ನ ಬಳಕೆದಾರರಿಗಾಗಿ ಆಡಿಯೊ ಚಾಟ್ ರೆಕಾರ್ಡ್ (Audio Reacord) ಮಾಡಬಹುದಾದ ಆಯ್ಕೆಯನ್ನು ನೀಡಿದೆ. ಮಾತ್ರವಲ್ಲದೆ ಪ್ರೊಫೈಲ್ನಲ್ಲಿ (Profile) ಉಳಿಸಬಹುದಾದ ಆಯ್ಕೆಯನ್ನು ಪರಿಚಯಿಸಿದೆ.

ಕ್ಲಬ್ಹೌಸ್ ವಿವರಿಸಿದಂತೆ: “ರೀಪ್ಲೇಗಳು ಐಚ್ಛಿಕ ವೈಶಿಷ್ಟ್ಯವಾಗಿದ್ದು, ಯಾವುದೇ ಸಾರ್ವಜನಿಕ ಕೊಠಡಿಗೆ ಟಾಗಲ್ ಆನ್ ಅಥವಾ ಆಫ್ ಮಾಡಲು ರಚನೆಕಾರರು ಆಯ್ಕೆ ಮಾಡಬಹುದು. ಒಂದು ವೇಳೆ ಈ ಆಯ್ಕೆಯನ್ನು ಎನೇಬಲ್ ಮಾಡಿದರೆ ಮರು ರೀಪ್ಲೇ ಮಾಡಬಹುದಾಗಿದೆ. ಅಂದಹಾಗೆಯೇ ಇದರಲ್ಲಿ PTR ಗಳು, ಮೈಕ್ ಟ್ಯಾಪ್ಗಳನ್ನು ಮಾಡಬಹುದಾದ ಆಯ್ಕೆಯಿದೆ.
ಕ್ಲಬ್ಹೌಸ್ ಪರಿಚಯಿಸಿರುವ ಹೊಸ ವೈಶಿಷ್ಟ್ಯವು ನಿಮ್ಮ ಸೆಷನ್ಗಳನ್ನು ರೆಕಾರ್ಡ್ ಮಾಡಲು ಅನುಮತಿಸುತ್ತದೆ. ನಂತರ ಅದದನ್ನು ಪ್ಲೇ ಮಾಡಬಹುದಾಗಿದೆ. ಮಾತ್ರವಲ್ಲದೆ ಈ ಆಡಿಯೊ ಚಾಟ್ಗಳನ್ನು ಡೌನ್ಲೋಡ್ ಮಾಡಬಹುದು ಮತ್ತು ಇತರ ಪ್ಲ್ಯಾಟ್ಫಾರ್ಮ್ಗಳಿಗೆ ಬಾಹ್ಯವಾಗಿ ಹಂಚಿಕೊಳ್ಳಬಹುದು.
ಇನ್ನು ಬಳಕೆದಾರರು ಲೈವ್ ರೂಮ್ಗಳಂತೆಯೇ “ಸುಮ್ಮನೆ ಇರಬಹುದಾಗಿದೆ ಮತ್ತು ವೇದಿಕೆಯಲ್ಲಿ ನಡೆಯುವ ಮಾತುಗಳನ್ನು ಆಳಿಸಬಹುದಾಗಿದೆ. ಪಿಟಿಆರ್ಗಳು, ಮೈಕ್ ಟ್ಯಾಪ್ಗಳು ಮತ್ತು ಎಲ್ಲಾ ವಿಶೇಷ ಕ್ಷಣಗಳನ್ನು ಒಳಗೊಂಡಂತೆ ಚರ್ಚೆಯ ಉದ್ದಕ್ಕೂ ವಿಕಸನಗೊಳ್ಳುವ ಅವಕಾಶ ನೀಡಿದೆ” ಎಂದು ಕಂಪನಿ ಹೇಳಿದೆ.