ವಿದ್ಯಾರ್ಥಿಗಳ ಕಲಿಕೆಯ ಹಿತದೃಷ್ಟಿಯಿಂದ ಕಲಿಕೋತ್ಸವ ಹಬ್ಬ: ಅಬ್ದುಲ್ ಯುನಿಸ್ ಇಸಿಒ

ಮಸ್ಕಿ : ತಾಲ್ಲೂಕು ಹಾಲಾಪೂರ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ನಡೆಯಿತು. ಆರಂಭದಲ್ಲಿ ವಿದ್ಯಾರ್ಥಿಗಳು ಕುಂಭ ,ಕಳಸ ಮತ್ತು ಅಲಂಕೃತ ಎತ್ತಿನ ಬಂಡೆಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಿಕಾ ಹಬ್ಬ ಆಚರಣೆ ಸಂಭ್ರಮದಿಂದ ನಡೆಸಿ ನಂತರ ವೇದಿಕೆ ಕಾರ್ಯಕ್ರಮದ ಸಾನಿದ್ಯವನ್ನು ಜಂಗಮರಹಳ್ಳಿ ಶ್ರೀ ದಂಡಗುಂಡಪ್ಪ ತಾತ ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅದ್ಯಕ್ಷೆ ಸಾಬಮ್ಮ ಗಂಡ ಗಂಗಪ್ಪ ನೆರವೇರಿಸಿದರು, ನಂತರ ಶಿಕ್ಷಣ ಸಂಯೋಜಕರಾದ ಅಬ್ದುಲ್ ಯುನಿಸ್ ಮಾತನಾಡುತ್ತಾ ಮಕ್ಕಳ ಗುಣಮಟ್ಟದ ಶಿಕ್ಷಣ ಕಲಿಕಾ ಮಟ್ಟ ಮತ್ತಷ್ಟು ಗಟ್ಟಿಯಾಗಿ ಉಳಿಯಲು ಸರಕಾರ ಮಹತ್ವಪೂರ್ಣ ಕಾರ್ಯಕ್ರಮವಾದ ಕಲಿಕಾ ಹಬ್ಬ ಎಂಬ ವಿನೂತನ ಯೋಜನೆ ಜಾರಿಗೆ ತಂದಿದ್ದು ಅದಕ್ಕೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕಲಿಕೆಗೆ ಪ್ರೊತ್ಸಾಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶರಣೇಗೌಡ ಜಂಗಮರಹಳ್ಳಿ, ವೆಂಕಟರಡ್ಡಿಗೌಡ ಹಾಲಾಪೂರ, ಪಂಪಾಪತಿ ಹೂಗಾರ,ಮಂಜುನಾಥ ಶಾಲೆಯ ಮುಖ್ಯಗುರು, ಸಿ ಆರ್ ಪಿ ಪ್ರಶಾಂತಗೌಡ,ಮರಿಗೌಡ ಪಾಟೀಲ್, ರವಿ ದೇಸಾಯಿ,ಸುಭಾಷ್ ಸಿಂಗ್, ಎಸ್ ಡಿ ಎಮ್ ಸಿ ಅದ್ಯಕ್ಷ ಲಾಲಪ್ಪ , ಉಪಾಧ್ಯಕ್ಷ ಮುದಕನಗೌಡ, ಬಸವರಾಜ ಜಂಗಮರಹಳ್ಳಿ,ಸಿದ್ದಾರ್ಥ ಪೊ.ಪಾ, ಮೌನೇಶ ನಾಯಕ,ಲಕ್ಷ್ಮಣ ನಾಯಕ, ಮಹೇಶಗೌಡ,ರಾಮಣ್ಣ, ಶಿಕ್ಷಕರಾದ ಅರವಿಂದ ಪಾಟೀಲ್ , ಚನ್ನವೀರ ಜೊತಾನ,ಹನುಮಂತರಾಯ ದೇಸಾಯಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯ ಗುರುಗಳು ಮತ್ತು ಶಿಕ್ಷಕ ವೃಂದದವರು ಪಾಲ್ಗೊಂಡು ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ