ಫೆ.26ಕ್ಕೆ ವೆಂಟಾಪುರ ಸಣ್ಣ ದುರ್ಗಾದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ.

ಮಸ್ಕಿ : ತಾಲೂಕಿನ ಸುಕ್ಷೇತ್ರ ವೆಂಕಟಾಪುರ ಗ್ರಾಮದಲ್ಲಿ ಫೆ26 ರಂದು ಶ್ರೀ ಸಣ್ಣದುರ್ಗ ದೇವಿ ಹಾಗೂ ಶ್ರೀ ಗೋವಿಂದಪ್ಪ ಪೂಜಾರಿ ತಾತನವರ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ಕನಕರಾಯ ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ25 ರಂದು ಮಂಗಳವಾರ ಶ್ರೀ ಸಣ್ಣದುರ್ಗದೇವಿಗೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಿಸಲಾಗುವುದು. ಸಾಯಂಕಾಲ ನೂತನ ದೇವಿ ಮೂರ್ತಿಯ ಮೆರವಣಿಗೆ ಮುಖಾಂತರ ಪುರ ಪ್ರವೇಶ ಮಾಡಲಾಗುವುದು.

ಫೆ26ರಂದು ಬುಧವಾರ ಬೆಳಿಗ್ಗೆ ಬ್ರಾಹಿ ಮೂಹೂರ್ತದಲ್ಲಿ ಶ್ರೀ ಸಣ್ಣದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗಂಗಾ ಸ್ಥಳಕ್ಕೆ ಹೋಗುವುದು. ನಂತರ ದೇವಿಗೆ ಉಡಿತುಂಬುವ ಕಾರ್ಯಕ್ರಮ ನಡೆಯುವುದು. ಸಕಲ ಭಾಜಾ ಭಜಂತ್ರಿ, ಡೊಳ್ಳು ಕಳಸ, ಕನ್ನಡಿ ಮುಖಾಂತರ ಅಮ್ಮನವರ ಮೂರ್ತಿ ಮೆರವಣಿಗೆ ಹಾಗೂ ಸಾಯಂಕಾಲ 5-00 ಗಂಟೆಗೆ ಉಚ್ಚಯ್ಯ ಕಾರ್ಯಕ್ರಮ, ದೀಪೋತ್ಸವ ನಂತರ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯುತ್ತವೆ. ಜಾತ್ರೆಗೆ ವೆಂಕಟಾಪೂರು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತ ಸಮೂಹ ಸೇರಲಿದೆ ಎಂದು ತಿಳಿಸಿದರು.
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ