ಕರ್ತವ್ಯ ಮರೆತ ವಿಎಸ್‌ಎಸ್‌ಎನ್ ಕಾರ್ಯದರ್ಶಿ,ರಾಜಕೀಯಕ್ಕೆ ಬಳಸಿಕೊಂಡ ಜವಾಬ್ದಾರಿತ ಕಾರ್ಯದರ್ಶಿ ಹುದ್ದೆ

ರಾಯಚೂರು: ರೈತರ- ಶ್ರೇಯಾಭಿವೃದ್ಧಿಗಾಗಿ ಜಾರಿಗೆ ಆ ಬಂದಿರುವ ಪತ್ತಿನ ಸಹಕಾರ ಈ ಸಂಘಗಳ ಮೂಲ ಆಶಯಕ್ಕೆ ಧಕ್ಕೆ ತರುವ ರೀತಿಯಲ್ಲಿ ತಾ – ಲ್ಲೂಕಿನ ಗಾಣದಾಳ ಸೊಸೈ ವ್ಯ ಟಿಯಲ್ಲಿ ಭಾಷಾವಲಿ ಮುಖ್ಯ 2 ಕಾರ್ಯನಿರ್ವಹಣ ಅಧಿಕಾರಿ – ಆಡಿದ್ದೇ ಆಟ ಎನ್ನುವಂತಾಗಿದೆ. ಈ ಕಾರ್ಯದರ್ಶಿ ಹುದ್ದೆಯು = ಚುನಾವಣೆಯಲ್ಲಿ ಆಯ್ಕೆಯಾಗಿ → ಬರುವ ಅಧ್ಯಕ್ಷ ಮತ್ತು ನಿರ್ದೇ – ಶಕರ ಮೇಲೆ ಅವಲಂಬಿತ ವಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಭಾಷವಲಿ ಚು ನಾವಣೆಯಲ್ಲಿ ತನ್ನ ಹುದ್ದೆ ಯನ್ನು ದುರುಪಯೋಗ ಪಡಿ ಸಿಕೊಂಡು ಕಾನೂನು ಬಾಹಿರಿ ‘ವಾಗಿ ತನ್ನದೇ ವ್ಯಕ್ತಿಗಳು ಆಯ್ಕೆಯಾಗುವ ರೀತಿಯಲ್ಲಿ ರೈತ ಸದಸ್ಯರ ಮೇಲೆ ಒತ್ತಡ – ತರುತ್ತಿದ್ದಾರೆ ಎಂದು ವಿರೋಧ ಬಣ ಅಭ್ಯರ್ಥಿಗಳು ಆರೋಪ → ವ್ಯಕ್ತಪಡಿಸಿದ್ದಾರೆ.-

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಸಾಮಾನ್ಯ ಚುನಾವಣೆ ಮುಂದಿನ 05 ವರ್ಷಗಳ ಅವಧಿಗೆ ನಡೆಯುತ್ತಿದೆ. ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ‘ಎ’, ಹಿಂದುಳಿದ ವರ್ಗ ‘ಬಿ’ ಮತ್ತು ಮಹಿಳೆಯರಿಗೆ ಮೀಸಲಿರಿಸಿದ ಒಟ್ಟು ಖಾಲಿ ಇರುವ 12 ಸ್ಥಾನಗಳಿಗೆ ಇದೇ ಫೆ.23 ಭಾನುವಾರದಂದು ಬೆಳಿಗ್ಗೆ 9:00 ಯಿಂದ ಸಂಜೆ 4:00 ವರೆಗೆ ಮತದಾನ ನಡೆಯುತ್ತಿದೆ. ಎಲ್ಲಾ ರೈತ ಬಾಂಧವರು ತಪ್ಪದೆ ತಮ್ಮ ಮತ ಚಲಾಯಿಸಿ ಉತ್ತಮ ಕಾರ್ಯ ನಿರ್ವಹಿಸುವ ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿ ವಿನಂತಿಸಲಾಗಿದೆ.
ಮತದಾನದ ಸ್ಥಳ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘನಿ. ಗಾಣಧಾಳ ತಾ.ಜಿ.ರಾಯಚೂರು
ಇದುವರೆಗೂ ಯಾವು ದೇ ಕ್ರಮ ತೆಗೆದುಕೊಳ್ಳದ ಸಹಕಾರ ಇಲಾಖೆಯೂ ಈಗ ಚುನಾ ವಣೆಯಲ್ಲಿ ತನಗೆ ಸಂಬಂಧಿಸಿದ ಸದಸ್ಯರನ್ನು ಆಯ್ಕೆ ಮಾಡಿ ಕೊಳ್ಳಲು ತನ್ನ ಹುದ್ದೆ ದುರು ಪಯೋಗ ಪಡಿಸಿಕೊಳ್ಳುತ್ತಿದ್ದು, ಸಾಲಗಾರರಲ್ಲದ ಕ್ಷೇತ್ರದ ಸದಸ್ಯರ ಸಂಖ್ಯೆಯನ್ನು ಮನಸ್ಸಿಗೆ ಬಂದಂತೆ ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ ನಾವು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಕೂಡ ಸರಿಯಾದ ಕ್ರಮವಾಗಿಲ್ಲ. ಈತನು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದು,ಸೊಸೈಟಿಯ ಸ್ವಂತ ಹಣ ಬಳಸಿಕೊಳ್ಳುತ್ತಿದ್ದಾನೆ. ಲಂಚ ಪಡೆದು ಹೆಚ್ಚುವರಿ ಸಾಲ ನೀಡುತ್ತಿದ್ದಾನೆ. ಹೀಗೆ ಮನಸೋ ಇಚ್ಛೆ ಕಾರ್ಯ ನಿರ್ವಹಿಸು ತ್ತಿದ್ದರೂ ಕೂಡ ಅಧಿಕಾರಿಗಳು ಕಣ್ಣು ಮುಚ್ಚಿ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಈ ಕೃಷಿ ಪತ್ತಿನ ಚುನಾವಣೆಯ ಕರ್ತವ್ಯದಿಂದ ಕಾರ್ಯದರ್ಶಿ ಭಾಷಾವಲಿಯನ್ನು ಮುಕ್ತಿ ಗೊಳಿಸಬೇಕು. ಪಾರದರ್ಶಕ ಚುನಾವಣೆ ನಡೆಯಲು ಸಹಕಾರ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವರದಿ: ವಿಶ್ವನಾಥ್ ಸಾಹುಕಾರ್ tv8kannada ರಾಯಚೂರು