ದೇಶ

ಇಂದಿನಿಂದ ಇತಿಹಾಸ ಪ್ರಸಿದ್ಧ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಜಾತ್ರೆ: ಕೊಟ್ಟೂರು ಹೆಸರು ಹೇಗೆ ಬಂತು ಗೊತ್ತಾ?

ಕೊಟ್ಟೂರು: ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ನೆಲೆವೀಡು. ಶ್ರೀಗುರು ಕೊಟ್ಟೂರೇಶ್ವರನಿಗೆ ಕೊಟ್ಟೂರು ಬಸವೇಶ್ವರ ಎಂತಲು ಕರೆಯುತ್ತಾರೆ. ಪ್ರತಿ ವರ್ಷ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ರಥೋತ್ಸವ ಜರುಗುವುದು ಡಿಸೆಂಬರ್ ತಿಂಗಳಲ್ಲಿ ಲಕ್ಷ ದೀಪೊತ್ಸ್ತ್ವವ ಜರುಗುವುದು.

ಈ ಸ್ವಾಮಿಯ ಹಿರೇಮಠಕ್ಕೆ ಅನೇಕ ಭಕ್ತರಿದ್ದಾರೆ.

ಈ ದೇವರ ಗುಡಿಯು ಮೂರು ಸ್ಥಳಗಳಲ್ಲಿ ಇದೆ. ಒಂದು ಹಿರೇಮಠ ಅಥವಾ ದೊಡ್ಡಮಠ, ತೊಟ್ಟಿಲು ಮಠ ಮತ್ತು ಗಚ್ಚಿನ ಮಠ.ಗಚ್ಚಿನಮಠದಲ್ಲಿ ಅಕ್ಬರ್ ಚಕ್ರವರ್ತಿ ಕೊಟ್ಟಿದ್ದಾನೆ ಎಂಬ ಪ್ರತೀತಿಯಿರುವ ಒಂದು ಮಂಚವೂ ಕೂಡ ಇದೆ.ಗಚ್ಚಿನ ಮಠದಲ್ಲಿ ಶ್ರೀ ಸ್ವಾಮಿಯ ಜೀವಂತ ಸಮಾಧಿಯೂ ಇದೆ.

ಕೊಟ್ಟೂರಿಗೆ ಮೊದಲಿದ್ದ ಹೆಸರು ಶಿಖಾಪುರ. ಶ್ರೀ ಗುರು ಕೊಟ್ಟೂರೇಶ್ವರರು ಆಗಮಿಸಿದ ನಂತರ ಪವಾಡಗಳನ್ನು ಮಾಡುತ್ತಾ, ಇಲ್ಲದವರಿಗೆ ಪವಾಡ ಮಾಡಿ ಕೊಡುತ್ತಾ , ಕೊಡುವ ಊರು ಕೊಟ್ಟೂರು ಎಂದಾಯ್ತು ನೋಡ ಎನ್ನುತ್ತಾರೆ ಹಿರಿಯರು.

ಕೊಟ್ಟೂರೇಶ್ವರ ಸ್ವಾಮಿ ಉತ್ಸವಕ್ಕೆ ಭಕ್ತರು ತಮ್ಮ ತಮ್ಮ ಊರುಗಳಿಂದ ಕಾಲ್ನಡಿಗೆಯಲ್ಲಿ ನಡೆದುಕೊಂಡು ಬರುವುದು ರೂಢಿಯಲ್ಲಿದೆ. ೨೦೧೦ ರಲ್ಲಿ ಸುಮಾರು ೫೫೦೦ಕ್ಕೂ ಹೆಚ್ಚು ಭಕ್ತರು ದಾವಣಗೆರೆ ಜಿಲ್ಲೆ ಮತ್ತು ಹರಿಹರ ತಾಲೂಕಿನಿಂದ ಬಂದಿದ್ದರು.

ಪೌರಾಣಿಕ ಹಿನ್ನಲೆಯಲ್ಲಿ ಶ್ರೀ ಕೊಟ್ಟೂರಶ್ವರ ಸ್ವಾಮಿ ನೆಲೆ ನಿಲ್ಲುವ ಮುಂಚೆ ಈ ಕ್ಷೇತ್ರದಲ್ಲಿ ಶ್ರೀ ವೀರಭದ್ರಶ್ವೇರ ಸ್ವಾಮಿ ನೆಲೆಯ ಕ್ಷೇತ್ರವಾಗಿತ್ತು, ಒಮ್ಮೆ ಕೊಟ್ಟೂರೇಶ್ವರ ಸ್ವಾಮಿಯು ಊರುರು ಸುತ್ತುತ್ತಾ ಶಿಖಾಪುರಕ್ಕೆ ಬಂದಾಗ ರಾತ್ರಿ ಆಯಿತು ಆ ಸಮಯದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಬಳಿ ಬಂದು ಕೊಟ್ಟುರೇಶ್ವರರು ತಮಗೆ ತಂಗಲು ಸ್ಥಳವನ್ನು ನೀಡುವಂತೆ ಕೋರಲು ಒಪ್ಪಿದ ವೀರಭದ್ರೇಶ್ವರರರು ತಮ್ಮ ಆಸ್ತಾನದಲ್ಲಿ ಮಲಗಲು ಸ್ಥಳವನ್ನು ನೀಡಿದರು ಬೆಳಗಾಗುವ ಹೊತ್ತಿಗೆ ಸಂಪೂರ್ಣಾವಾಗಿ ಇಡಿ ಆಸ್ತಾನವನ್ನು ಆವರಿಸಿದ

ಕೊಟ್ಟೂರೇಶ್ವರರು ಶ್ರೀ ವೀರಭದ್ರನಿಗೆ ಸ್ಥಳವೇ ಇಲ್ಲದಂತೆ ಮಾಡಿದರು ಈ ಕುರಿತು ವೀರಭದ್ರನು ಕೊಟ್ಟೂರೇಶ್ವರರನ್ನಲ್ಲಿ ಕೇಳಲಾಗಿ ನೀವು ನಿಮ್ಮ ಸ್ಥಳವನ್ನು ನನಗೆ ನೀಡಿ ನೀವು ಕೊಡದಗುಡ್ಡಕ್ಕೆ ಹೋಗಿ ನೆಲೆಸಿರಿ ಎಂದು ಹೇಳಿದರು ಅದರಂತೆ ವೀರಭದ್ರ ದೇವರು ಇನ್ನು ಮುಂದೆ ಆ ನಿಮ್ಮ ಸ್ಥಳವನ್ನು ನೀವು ಯಾರಿಗೂ ಕೊಡಬಾರದು ಆ ಕ್ಷೇತ್ರವು ಕೊಡದಗುಡ್ಡ ಎಂದು ಪ್ರಖ್ಯಾತವಾಗಲಿ ಅಂತಯೇ ನೀವು ನನಗೆ ಕೊಟ್ಟ ಈ ಶಿಖಾಪುರ ಇನ್ನು ಮುಂದೆ ಕೊಟ್ಟೂರು ಎಂದು ಪ್ರಖ್ಯಾತವಾಗಲಿ ಎಂದು ಹರಸಿದರು.

ವ್ಯಾಪಾರ ವಹಿವಾಟು

ಈ ಊರಿನ ಮಂಡಕ್ಕಿ ಮೆಣಸಿನಕಾಯಿ ಎಂಬ ಖಾದ್ಯವು ಅತ್ಯಂತ ರುಚಿಕರವಾಗಿರುವುದು ಮತ್ತು ಜನಪ್ರಿಯವು ಆಗಿದೆ. ಚಿಕ್ಕ ಪಟ್ಟಣವಾಗಿದ್ದರೂ ವ್ಯಾಪಾರ ವಹಿವಾಟು ಸಮೃದ್ಡವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಅನ್ನದಾತನ ಮಾರುಕಟ್ಟೆ, 4 ಕಾಟನ್ ಪ್ರೆಸ್ ಗಳು 9 ಹತ್ತಿ ಜಿನಿಂಗ್, ಮತ್ತು 8 ಶೇಂಗಾ ಡಿಕಾಟಿಕೆಟಿಂಗ್ ಮಿಲ್ ಗಳು ವ್ಯಾಪರದ ಅವಶ್ಯಕತೆ ಪೂರೈಸುವುದು.

ಈ ಊರಿನ ಪ್ರಮುಖ ಬೆಳೆಗಳಂದರೆ ಜೋಳ,ರಾಗಿ ,ಹತ್ತಿ, ಶೇಂಗಾ, ಸೂರ್ಯಕಾಂತಿ ಇನ್ನಿತರವು. ತೂಕ ಮಾಡಲಿಕ್ಕೆ ದೇವರಮನಿ ವೇ ಬ್ರಿಡ್ಜ್ ಇದ್ದು ಮತ್ತು ಈ ಊರಿನಲ್ಲಿ ಎರಡು ಚಲನಚಿತ್ರ ಮಂದಿರಗಳು (ರೇಣುಕ ಮತ್ತು ಕೊಟ್ಟೂರೇಶ್ವರ) ಸಾರ್ವಜನಿಕರ ಮನರಂಜನೆಯ ಅವಶ್ಯಕತೆ ಪೂರ್ಣಗೊಳಿಸುತ್ತವೆ. ಅಂತಯೇ ಇತ್ತಿಚ್ಚೀಗೆ ಹೊಸದಾಗಿ ರೈಲು ಓಡಾಟ ಪ್ರಾರಂಭವಾಗಿದ್ದು, ಹರಿಹರ -ಕೊಟ್ಟೂರು ಮಾರ್ಗಾದಲ್ಲಿ ಸಂಚರಿಸುತ್ತದೆ. ಇದರಿಂದಾಗಿ ಕೊಟ್ಟೂರು ಪಟ್ಟಣವು ಮುಖ್ಯ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಸಾಕಷ್ಟು ಸಹಾಯಕವಾಗಿದೆ. ನೂತನ ತಾಲೂಕು ಪಟ್ಟಿಯಲ್ಲಿ ಈ ಪಟ್ಟಣದ ಹೆಸರು ಇದ್ದು ಅದಷ್ಟು ಬೇಗನೆ ತಾಲೂಕು ರಚನೆಯಾಗಿ ಇನ್ನುಷ್ಟು ಇನ್ನುಷ್ಟು ಬೆಳವಣಿಗೆ ಸಾದಿಸಲು ಸಹಾಯಕವಾಗಲಿ.

ಕೊಟ್ಟೂರು (ಕನ್ನಡ: ಕೊಟ್ಟೂರು)ಗೆ ಸಂತ ಕೊಟ್ಟೂರೇಶ್ವರನ ಹೆಸರನ್ನು ಇಡಲಾಗಿದೆ, ಆದ್ದರಿಂದ ಇದರ ಇತಿಹಾಸವು ಗುರು ಕೊಟ್ಟೂರೇಶ್ವರನ ಇತಿಹಾಸದಿಂದ ಬಂದಿದೆ. ಒಮ್ಮೆ ಭೂಮಿಯ ಮೇಲೆ ವೀರಶೈವ ಪಂಥವು ಬೆದರಿಕೆಗೆ ಒಳಗಾದಾಗ, ಸ್ವರ್ಗದಿಂದ (ಕೈಲಾಸ) ಭಗವಾನ್ ಶಿವ ಮತ್ತು ಪಾರ್ವತಿಯು ನಂದಿಗೆ ಸಾರಸಿಪುರ / ಶಿಕಾಪುರ (ಕೊಟ್ಟೂರಿನ ಹಿಂದಿನ ಹೆಸರು) ಗೆ ಹೋಗಿ ಮುಗ್ಧ ಜನರನ್ನು ರಕ್ಷಿಸಲು ಆದೇಶಿಸಿದರು. ಆದ್ದರಿಂದ ಭಗವಾನ್ ನಂದಿಯು ಸಾಧುವಿನ ರೂಪದಲ್ಲಿ ವೇಷ ಧರಿಸಿ ಶಿಕಾಪುರವನ್ನು ತಲುಪಿದನು.ಈ ಸಂತನನ್ನು ನಂತರ ಜನರು ಕೊಟ್ಟೂರೇಶ್ವರ ಎಂದು ಕರೆಯುತ್ತಾರೆ (ಕನ್ನಡದಲ್ಲಿ ಕೊಟ್ಟು ಅಥವಾ ಕೊಡು ಎಂದರೆ ಕೊಡು ಮತ್ತು ಈಶ್ವರ ಎಂದರೆ ಶಿವ), ಆಶೀರ್ವಾದ ನೀಡುವವನು.

ಕೊಟ್ಟೂರು ಮಂಡಕ್ಕಿ ಹೆಸರುವಾಸಿ ಖಾದ್ಯಮೆಣಸಿನಕಾಯಿ. ಮಂಡಕ್ಕಿಯಲ್ಲಿ ವಿವಿಧ ತಳಿಗಳಿವೆ.

ಭಕ್ತರು ಭೇಟಿ ನೀಡಿದಾಗ ಈ ಖಾದ್ಯವನ್ನು ಸೇವಿಸುವುದನ್ನು ರೂಢಿಸಿಕೊಂಡಿದ್ದಾರೆ. ಹಾಗೂ ಜಾತ್ರ ಸಮಯದಲ್ಲಿ ಪ್ರಮುಖವಾಗಿ ಖಾರ ಮಂಡಕ್ಕಿ ಜೊತೆಗೆ ಬೆಂಡ್ ಬೆತ್ತಾಸ್‌ಗಳು ಮೈಸೂರ್ ಪಾಕ್ ಜಿಲೇಬಿಯಂತಹ ಸಿಹಿ ತಿನಿಸುಗಳನ್ನು ಖರೀದಿಸುವಲ್ಲಿ ಹಾಗೂ ಜಾತ್ರಾ ಖಾದ್ಯವಾಗಿ ಸೇವಿಸುವಲ್ಲಿ ಭಕ್ತಾಧಿಗಳು ಮುಂದಾಗುವುದು ವಿಶೇಷ.ಹಬ್ಬದ ಚಟುವಟಿಕೆಗಳುಪ್ರತಿ ವರ್ಷ ಫೆಬ್ರವರಿಯಲ್ಲಿ ಮಹಾ ಶಿವರಾತ್ರಿಯ ಮೊದಲು ನಡೆಯುವ ಗುರು ಕೊಟ್ಟೂರೇಶ್ವರ ತೇರು (ರಥೋತ್ಸವ) ಸಮಯದಲ್ಲಿ ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಭಗವಾನ್ ಗುರು ಕೊಟ್ಟೂರೇಶ್ವರ ವಿಗ್ರಹವನ್ನು ರಥದೊಳಗೆ ಇರಿಸಲಾಗುತ್ತದೆ ಮತ್ತು ನಂತರ ಅವರಿಗೆ ಬುಡಕಟ್ಟು ಜನರು ಹಾಲು (ಕನ್ನಡ: ಗಿಣ್ಣು-ಹಾಲು) ಬಡಿಸುತ್ತಾರೆ. ಈ ಬುಡಕಟ್ಟು ಕುಟುಂಬಕ್ಕೆ ಪ್ರತಿ ವರ್ಷ ಹಸು ಅಥವಾ ಎಮ್ಮೆ ಅಥವಾ ಮೇಕೆ ಈ ದಿನದಂದು ತಮ್ಮ ಮರಿಗಳಿಗೆ ಜನ್ಮ ನೀಡುತ್ತದೆ ಎಂದು ನಂಬಲಾಗಿದೆ.

Related Articles

Leave a Reply

Your email address will not be published. Required fields are marked *

Back to top button