ಭಾರತದಲ್ಲಿ iPhone 16E ಬಿಡುಗಡೆ; ಬೆಲೆ ಇಷ್ಟೊಂದಾ? ವಿಶೇಷತೆಗಳೇನು ಗೊತ್ತಾ?

ಆಪಲ್ ಸಂಸ್ಥೆಯು ಐಫೋನ್ 16E (iPhone 16E) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು ಈ ವರ್ಷದ (2025) ಐಫೋನ್ 16 ಸರಣಿಯಲ್ಲಿ ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್ ಆಗಿದೆ. ಈ ಐಫೋನ್ ಶಕ್ತಿಶಾಲಿ A18 ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಕಂಪನಿಯು ಇದನ್ನು 59,900 ರೂ. ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಬನ್ನಿ, ಈ ಹೊಸ ಐಫೋನ್ 16E ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಐಫೋನ್ 16E ಮೊಬೈಲ್ 6.1 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಐಫೋನ್‌ನಲ್ಲಿ 48 ಮೆಗಾಪಿಕ್ಸೆಲ್ ಫ್ಯೂಷನ್ ಕ್ಯಾಮೆರಾ ಲಭ್ಯವಿದೆ. ಹಾಗೆಯೇ ಸ್ಯಾಟಲೈಟ್ ವೈಶಿಷ್ಟ್ಯಗಳು ಮತ್ತು ಐಫೋನ್ 11 ಫೋನಿಗಿಂತ ಆರು ಗಂಟೆಗಳವರೆಗೆ ದೀರ್ಘ ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ. ಗ್ರಾಫಿಕ್ಸ್ ಮತ್ತು ಹೆಚ್ಚು ಕಾರ್ಯಗಳನ್ನು ನಿರ್ವಹಿಸಲು 4 ಕೋರ್ ಜಿಪಿಯು ಸಹ ಹೊಂದಿದೆ.

ಐಫೋನ್ 16E ಬೆಲೆ ಮತ್ತು ಲಭ್ಯತೆ
- 128GB ಸ್ಟೋರೇಜ್ ಬೆಲೆ = 59,900 ರೂ.
- 256GB ಸ್ಟೋರೇಜ್ ಬೆಲೆ = 69,900 ರೂ.
- 512GB ಸ್ಟೋರೇಜ್ ಬೆಲೆ = 89,900 ರೂ.
ಐಫೋನ್ 16E ಸ್ಮಾರ್ಟ್‌ಫೋನ್ 128GB, 256GB, ಮತ್ತು 512GB ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಐಫೋನ್ 59,900 ರೂ.ಗಳ ಆರಂಭಿಕ ಬೆಲೆಯೊಂದಿಗೆ ಪ್ರಾರಂಭವಾಗುತ್ತದೆ. ಫೆಬ್ರವರಿ 21 ಶುಕ್ರವಾರದಿಂದ ಮುಂಗಡ ಬುಕಿಂಗ್ ಪ್ರಾರಂಭವಾಗುತ್ತವೆ. ಹಾಗೆಯೇ ಫೆಬ್ರವರಿ 28 ಶುಕ್ರವಾರದಿಂದ ಐಫೋನ್ 16E ಖರೀದಿಗೆ ಲಭ್ಯವಿರುತ್ತದೆ.
ಐಫೋನ್ 16E ಅನ್ನು ನೀವು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಖರೀದಿಸಬಹುದು. ಮತ್ತು ಅವುಗಳಿಗೆ ಪೂರಕವಾಗಿ ವಿವಿಧ ವರ್ಣರಂಜಿತ ಬ್ಯಾಕ್ ಕೇಸ್‌ಗಳನ್ನು ಆಯ್ಕೆ ಮಾಡಬಹುದು. ಐಫೋನ್ 16E ಸಿಲಿಕೋನ್ ಕೇಸ್ ಐದು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರ ಬೆಲೆ 3,900 ರೂ. ಆಗಿದೆ. ನೀವು ವಿಂಟರ್ ಬ್ಲೂ, ಪ್ಯೂಷಿಯಾ, ಲೇಕ್ ಗ್ರೀನ್, ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಕೊಳ್ಳಬಹುದು.
ಐಫೋನ್ 16E ವೈಶಿಷ್ಟ್ಯಗಳು
ಐಫೋನ್ 16E ಆರಂಭಿಕ ಹಂತದ ಮಾದರಿಯಾಗಿದ್ದರೂ, ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 6. ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಐಫೋನ್ 14 ಫೋನಿನ ರೀತಿಯೇ ನಾಚ್ ಅನ್ನು ಹೊಂದಿದೆ. ಈ ಸೂಪರ್ ರೆಟಿನಾ XDR ಡಿಸ್ಪ್ಲೇಯು ಸ್ಟ್ರೇಯನ್ನು ಸೆರಾಮಿಕ್ ಶೀಲ್ಡ್ ಫ್ರಂಟ್ ಕವರ್ ಮತ್ತು ಟಫ್ ಬ್ಯಾಕ್ ಗ್ಲಾಸ್ ಹೊಂದಿದೆ. ಈ ಐಫೋನ್‌ನಲ್ಲಿ ಅತ್ಯಂತ ಕಠಿಣವಾದ ಬ್ಯಾಕ್ ಗ್ಲಾಸ್ ಇದೆ ಎಂದು ಕಂಪನಿ ಹೇಳಿದೆ.
ಐಫೋನ್ 16E ಆಪಲ್‌ನ A18 ಪ್ರೊಸೆಸರ್ (ಚಿಪ್‌ಸೆಟ್) ಅನ್ನು ಹೊಂದಿದೆ. ಇದು ಐಫೋನ್ 16 ಸರಣಿಯಲ್ಲಿ ಕಂಡುಬರುತ್ತದೆ. 6 ಕೋರ್ CPU ಐಫೋನ್ 11 ನಲ್ಲಿರುವ A13 ಬಯೋನಿಕ್ ಚಿಪ್‌ಗಿಂತ ಶೇ.80 ರವರೆಗೆ ವೇಗವಾಗಿರುತ್ತದೆ. ಜೊತೆಗೆ ಗ್ರಾಫಿಕ್ಸ್ ಮತ್ತು ಭಾರೀ ಕಾರ್ಯಗಳನ್ನು ನಿರ್ವಹಿಸಲು 4 ಕೋರ್ ಜಿಪಿಯು ಸಹ ಒಳಗೊಂಡಿದೆ.
ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, ಈ ಐಫೋನ್ 16 ಫೋನಿನ ಡ್ಯುಯಲ್ ಕ್ಯಾಮೆರಾ ಸೆಟಪ್‌ಗೆ ಹೋಲಿಸಲು ಸಾಧ್ಯವಿಲ್ಲ. ಹೊಸ ಐಫೋನ್ 16E ಒಂದೇ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ಆಪ್ಟಿಕಲ್ ಜೂಮ್ ಸಾಮರ್ಥ್ಯಗಳನ್ನು ಒಳಗೊಂಡಿದೆ. ಐಫೋನ್ 16e ಡಾಲಿ ವಿಷನ್‌ನೊಂದಿಗೆ 4K ನಲ್ಲಿ 60fps ವರೆಗೆ ವಿಡಿಯೋ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಇದು ಆಪಲ್‌ನ ಇನ್ ಹೌಸ್ C1 ಮೋಡೆಮ್ ಅನ್ನು ಹೊಂದಿದೆ. A18 ಚಿಪ್, C1 ಮೋಡೆಮ್ ಮತ್ತು iOS 18 ರ ಸಂಯೋಜನೆಯು ಬ್ಯಾಟರಿ ಕಾರ್ಯಕ್ಷಮತೆಯನ್ನು ಗಮನಾರ್ಹವಾಗಿ ಸುಧಾರಿಸಿದೆ ಎಂದು ಆಪಲ್ ಹೇಳಿದೆ. ಇದು ಯುಎಸ್‌ಬಿ ಟೈಪ್ ಸಿ ಪೋರ್ಟ್ ಹೊಂದಿದೆ. ಐಫೋನ್ 16e ನಲ್ಲಿ ಕಸ್ಟಮೈಸ್ ಮಾಡಬಹುದಾದ ಆಕ್ಷನ್ ಬಟನ್ ಕೂಡ ಇದೆ. ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುವ ಅತ್ಯಂತ ಕೈಗೆಟುಕುವ ಐಫೋನ್ ಇದಾಗಿದೆ.
ಹೆಚ್ಚುವರಿಯಾಗಿ, ಐಫೋನ್ 16E ಆಪಲ್‌ನ ಸ್ಯಾಟಲೈಟ್ (ಉಪಗ್ರಹ) ವೈಶಿಷ್ಟ್ಯಗಳನ್ನು ಒಳಗೊಂಡಿದೆ. ತುರ್ತು SOS, ರೋಡ್ ಸೈಡ್ ಅಸಿಸ್ಟೆನ್ಸ್, ಸಂದೇಶಗಳು, ಸೆಲ್ಯುಲಾರ್ ಮತ್ತು ವೈ-ಫೈ ಕವರೇಜ್ ಕಾರ್ಯವನ್ನು ಸಕ್ರಿಯಗೊಳಿಸುತ್ತದೆ. ಐಫೋನ್ 16e ಅನ್ನು ಆಪಲ್ ಇಂಟೆಲಿಜೆನ್ಸ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಕಂಪನಿಯ ಅರ್ಥಗರ್ಭಿತ ವೈಯಕ್ತಿಕ ಎಐ (AI) ವ್ಯವಸ್ಥೆಯಾಗಿದೆ.