ನಲ್ಲೂರಿನಲ್ಲಿ ಅದ್ದೂರಿಯಾಗಿ ನಡೆದ ಗೋಣಹಳ್ಳಿ ಮಾರಮ್ಮ ಪ್ರತಿಷ್ಠಾಪನಾ ಕಾರ್ಯಕ್ರಮ

ಚಾಮರಾಜನಗರ: ತಾಲೂಕಿನ ನಲ್ಲೂರು ಗ್ರಾಮದಲ್ಲಿ ಅದ್ದೂರಿಯಾಗಿ ಐತಿಹಾಸಿಕ ಪ್ರಸಿದ್ಧ ಗೋಣಹಳ್ಳಿ ಮಾರಮ್ಮನ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಇದೇ ವೇಳೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು, ನಂತರ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇವರಲ್ಲಿ ನನಗೆ ಅಪಾರವಾದ ನಂಬಿಕೆ ಇದೆ ಗ್ರಾಮದ ಎಲ್ಲಾ ಜನರಿಗೂ ಗೋಣಹಳ್ಳಿ ಮಾರಮ್ಮ ಆಯಸ್ಸು ಆರೋಗ್ಯದ ಜೊತೆಗೆ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಶಕ್ತಿ ನೀಡಲಿ ಎಂದರು, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಅವರು ನೀಡಿದ ಸಂವಿಧಾನದ ಹಕ್ಕುಗಳ ಅಡಿಯಲ್ಲಿ ನಾವು ಬದುಕುತ್ತಿದ್ದೇವೆ ಅಲ್ಲದೆ ಸಮುದಾಯ ಭವನದ ನಿರ್ಮಾಣದ ಜೊತೆಗೆ ಲೈಬ್ರರಿ ನಿರ್ಮಿಸಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.
ಇದೇ ವೇಳೆ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು
ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂದ ಹಾಲರುವೆ ಉತ್ಸವ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ನಿತ್ಯಶ್ರೀ, ಉಪಾಧ್ಯಕ್ಷ ಶ್ರೀನಾಥ್,ಸದಸ್ಯರಾದ ಲೋಕೇಶ್, ನಿರ್ಮಲ, ಶಶಿಕಲಾ, ಭಾಗ್ಯಮ್ಮ, ಮಾಜಿ ಅಧ್ಯಕ್ಷೆ ರಾಜಮ್ಮ, ಯಜಮಾನರಾದ ಮಾದೇವಯ್ಯ, ಸೋಮೇಶ್ವರ, ಬಸವಣ್ಣ, ಚಾಮಯ್ಯ, ನಂಜಯ್ಯ, ಪರಮೇಶ್ವರ್, ಡೈರಿ ಅಧ್ಯಕ್ಷ ಸುರೇಶ್ ,ಗ್ರಾ. ಪಂ.ಮಾಜಿ ಸದಸ್ಯ ಪುಟ್ಟರಾಜು ಮುಖಂಡ ಮಹದೇವಸ್ವಾಮಿ ಸೇರಿದಂತೆ ಗ್ರಾಮಸ್ಥರು, ಯುವಕರು ಹಾಜರಿದ್ದರು.
ವರದಿ; ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ