ಇತ್ತೀಚಿನ ಸುದ್ದಿ

ಜೀತಮುಕ್ತರಿಗೆ ಬಜೆಟ್ ನಲ್ಲಿ 500 ಕೋಟಿ ಮೀಸಲಿಡುವಂತೆ ಹಾಗೂ ಎಸ್ ಒಪಿ ಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಎಚ್ ಡಿ ಕೋಟೆ: ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟ ಮತ್ತು ಜೀವಿಕ ಸಂಘಟನೆ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಂಬೇಡ್ಕರ್ ಭವನದಿಂದ ಮೆರವಣಿಗೆ ಹೊರಟು ಆಡಳಿತ ಸೌಧದ ಮುಂಭಾಗ ಜಮಾವಣೆಗೊಂಡು ಮುಖ್ಯಮಂತ್ರಿಗಳಿಗೆ ಮಾನ್ಯ ಶಾಸಕ ಅನಿಲ್ ಚಿಕ್ಕಮಾದು ಮತ್ತು ತಹಶಿಲ್ದಾರ್ ಶ್ರೀನಿವಾಸ್ ರವರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಪ್ರತಿಭಟನೆ ಕುರಿತು ಜೀವಿಕ ರಾಜ್ಯ ಸಂಚಾಲಕ ಸಂಚಾಲಕ ಉಮೇಶ್. ಬಿ. ನೂರಲಕುಪ್ಪೆ ಮಾತಾನಾಡಿ ಕರ್ನಾಟಕ ರಾಜ್ಯದಲ್ಲಿ 2000 ಇಸವಿಯಿಂದ 2024ರ ತನಕ ರಾಜ್ಯಾದ್ಯಂತ ಸುಮಾರು 7000 ಸಾವಿರ ಮಂದಿ ಜೀತವಿಮುಕ್ತಿ ಆಗಿದ್ದಾರೆ, ಆದರೆ ಜೀತ ಪದ್ಧತಿ ರದ್ಧತಿ ಕಾನೂನಿನ ಪ್ರಕಾರ ಹಾಗೂ ಕರ್ನಾಟಕ ಸರ್ಕಾರದ 2006 ಜೀತಮುಕ್ತರ ಕ್ರಿಯಾ ಯೋಜನೆ ಪ್ರಕಾರ ಸಿಗಬೇಕಾದ ಸಮಗ್ರ ಪುನರ್ವಸತಿ ಅಂದರೆ ಪರಿಹಾರ, ಮಾಸಾಶನ, ಕಾರ್ಪಸ್ ನಿಧಿ, ನಿವೇಶನ, ವಸತಿ, ಲೈನ್ ಡಿಪಾರ್ಟ್ಮೆಂಟ್ ನಿಂದ ವಿವಿಧ ಸೌಲಭ್ಯಗಳು, ಬ್ಯಾಂಕುಗಳಿಂದ ಸಿಗಬೇಕಾದ ಸಾಲಸೌಲಭ್ಯಗಳು ಸಿಗದೆ ಬಿಡುಗಡೆ ಗೊಂಡ ಜೀತಮುಕ್ತರ ಜೀವನ ಅತಂತ್ರ ಸ್ಥಿತಿಯಲ್ಲಿದೆ.


ಮೈಸೂರು ಜಿಲ್ಲೆಯಲ್ಲಿ ಇದುವರೆಗೆ ಸುಮಾರು 1155 ಕ್ಕೂ ಹೆಚ್ಚು ಜನರು ಜೀತಮುಕ್ತರಾಗಿದ್ದು ಇವರಿಗೆ ಸರ್ಕಾರದಿಂದ ಪರಿಹಾರ & ಪುನರ್ವಸತಿ ಸೌಲಭ್ಯಗಳು ಸರಿಯಾಗಿ ಮತ್ತು ಸಕಾಲದಲ್ಲಿ ಸಿಗದೆ ಜೀತಮುಕ್ತರ ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗಿದೆ.ಎಂದು ತಿಳಿಸಿದರು,

ಪ್ರತಿಭಟನೆ ಉದ್ದೇಶಿಸಿ ಒಕ್ಕೂಟದ ರಾಜ್ಯಾದ್ಯಾಕ್ಷ ಮಹದೇವ್. ಮಾಜಿ ಅಧ್ಯಕ್ಷ ಶಿವಣ್ಣ, ಜಿಲ್ಲಾ ಸಂಚಾಲಕ ಬಸವರಾಜ್, ತಾಲೋಕು ಸಂಚಾಲಕ ಚಂದ್ರಶೇಖರ ಮೂರ್ತಿ, ದಲಿತ ಮುಖಂಡರಾದ ಮುದ್ದುಮಲ್ಲಯ್ಯ, ಹೈರಿಗೆಶಿವರಾಜ್, ಪ್ರಸನ್ನಕಾಡುಮನೆ ಮಾತಾನಾಡಿದರು.

ಇದೆ ಸಂದರ್ಭದಲ್ಲಿ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಶಾಸಕ ಅನಿಲ್ ಚಿಕ್ಕಮಾದು ಮನವಿ ಸ್ವೀಕರಿಸಿ ಜೀವಿಕ ಸಂಘಟನೆ ನಮ್ಮ ತಾಲೋಕಿನಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಉತ್ತಮವಾದ ಕೆಲಸ ಮಾಡುತ್ತಿದ್ದು ಸಂಘಟನೆಯ ಎಲ್ಲಾ ಕೆಲಸದಲ್ಲಿಯೂ ನಾನು ಜೊತೆಗಿರುತ್ತೆನೆ ಮತ್ತೆ ನೀವು ಸಲ್ಲಿಸಿರುವ ಬೇಡಿಕೆಗಳನ್ನು ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ಲೇಟರ್ ಹೆಡ್ ನಲ್ಲಿ ಸಲ್ಲಿಸಿ ಅಧಿವೇಶನದಲ್ಲಿ ಪ್ರಶ್ನೆಮಾಡುತ್ತೆನೆ ಎಂದು ಭರವಸೆ ನೀಡಿದರು. ಬಳಿಕ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕ ಜೀವಿಕ ಬಸವರಾಜ್. ಚಂದ್ರಶೇಖರ ಮೂರ್ತಿ. ಶಿವರಾಜ್. ನಟರಾಜ್. ಶ್ರೀನಿವಾಸ್. ವೆಂಕಟೇಶ. ನಾಗರಾಜ್. ನಾಗಮ್ಮ. ವಸಂತ. ಮಹದೇವ. ಶಿವಣ್ಣ. ಮಲ್ಲಿಗಮ್ಮ. ಸೋಮಣ್ಣ. ಗೋಪಾಲ್. ಗಣೇಶ. ಮಹದೇವಪ್ಪ. ಮಂಜುನಾಥ್. ಪುಟ್ಟರಾಚಯ್ಯ ಮುಂತಾದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button