ದುಶ್ಚಟ ಬಿಡಿಸಲು ಜೋಳಿಗೆ ಹಿಡಿದ ಪೂಜ್ಯರು ಯಲಬುರ್ಗಾ ದಿಂದಾ ಶಿವಯೋಗಿ ಮಂದಿರಕ್ಕ ಪಾದಯಾತ್ರೆ

ಯಲಬುರ್ಗಾ: ” ನಿಮ್ಮ ಚಟಾ ಎಲ್ಲ ನನ್ನ ಜೋಳಿಗ್ಯಾಗ್ ಹಾಕ್ರೆಪಾ, ಬೀಡಿ ಸೇದತಿ ಏನೆ ಚಟಾದಿಗಳನ್ನು ನಿಮ್ಮ ಸಂಸಾರದ ಒಳಿತಿಗಾಗಿ ಇನ್ನಾದರೂ ಬಿಡಿ ದುಶ್ಚಟಗಳನ್ನು . ಅದರಿಂದ ಜೀವನ ಹಾಳ್ ಆಗತೈತಿ. ಗೊತ್ತಿಲೇನು ತಾ ತಾ ಇಲ್ಲಿ ಹಾಕು..” ಹೀಗೆ ಭಾಲ್ಕಿ ಗುರುಬಸವ ಪಟ್ಟದ್ದೇವರು ಶ್ರಾವಣದಲ್ಲಿ ಕೈಯಲ್ಲಿ ಜೋಳಿಗೆ ಹಿಡಿದು, ದೇಣಿಗೆ ಪಡೆಯುವಂತಹ ಪೆಟ್ಟಿಗೆ ಹಿಡಿದು ಪಾದಯಾತ್ರೆ ನಡೆಸಿದರು.’ ನಿಮ್ಮ ಚಟಾ ಎಲ್ಲ ನನ್ನ ಜೋಳಿಗ್ಯಾಗ್ ಹಾಕ್ರೆಪಾ, ಬೀಡಿ ಸಿಗರೇಟು ಗುಟಕಾ ಸರಾಯಿ ಎಲ್ಲವನ್ನೂ ನನ್ನ ಜೋಳಿಗಿಗೆ ಹಾಕಿ ನಿಮ್ಮ ಸಂಸಾರವನ್ನ ಕಾಪಾಡಿ ಕೊಳ್ಳಿ ಎಂದು ಹೇಳಿದಾ ಯಲಬುರ್ಗಾ ಪಟ್ಟಣದ ಶ್ರೀ ಬಸವಲಿಂಗೇಶ್ವರ ಶಿವಚಾರ್ಯ ಮಾಹಸ್ವಾಮಿಗಳು ಕೈಯಲ್ಲಿ ಜೋಳಿಗೆ ಹಿಡಿದು, ದೇಣಿಗೆ ಪಡೆಯುವಂತಹ ಪೆಟ್ಟಿಗೆ ಹಿಡಿದು ಪಾದಯಾತ್ರೆ ನಡೆಸಿದರು.
ಈ ವೇಳೆ ದಾರಿಯಲ್ಲಿ ಸಿಕ್ಕ ಜನರಿಂದ ಅವರು ಸೇದಲು, ತಿನ್ನಲು ಇಟ್ಟುಕೊಂಡಿದ್ದ ಮಾದಕ ವಸ್ತುಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡರು. ಬಳಿಕ ಅವುಗಳನ್ನು ಒಂದೆಡೆ ಸೇರಿಸಿ ಸುಟ್ಟು ಹಾಕಿದರು.ತಾಲೂಕಿನ ಯಲಬುರ್ಗಾ ಪಟ್ಟಣ .ಹಾಗೂ ಹೊಸಳ್ಳಿ .ಚಿಕ್ಕೋಪ್ಪ. ತಾಂಡ. ಹಿರೇಕೊಪ್ಪ. ಬೋಳಟಗಿ ಗ್ರಾಮದಲ್ಲಿ ರವಿವಾರ ಶ್ರೀ ಬಸವಲಿಂಗೇಶ್ವರ ಯೋಗ ಕೆಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವ್ಯಸನಮುಕ್ತ ಸಮಾಜ ನಿರ್ಮಾಣ ಅಭಿಯಾನದಲ್ಲಿ ಗುಳೆದಗುಡ್ಡದ ಶ್ರೀ ಒಪ್ಪತೇಶ್ವರ ಶಿವಚಾರ್ಯ ರರು ಮಾಹ ಸ್ವಾಮಿಗಳು ಜಿಗೇರಿಯ. ಶ್ರೀ ಕರಿಸೀದ್ದೆಶ್ವರ ಶಿವಚಾರ್ಯ ಮಾಹ ಸ್ವಾಮಿಗಳು. ಇಟಗಿಯ ಶ್ರೀ ಗುರು ಶಾಂತವ ವೀರಾ ಶಿವಾಚಾರ್ಯ ಮಾಹಸ್ಬಾಮಿಗಳು ಪುರ್ತ ಗೇರಿಯಾ ಶ್ರೀ ಕೈಲಾಸ ಲೀಂಗಾ ಶಿವಚಾರ್ಯ ಸೇರಿದಂತೆ ಸಾವಿರಕ್ಕೂ ಹೆಚ್ಚು ಜನರು, ಪಾದಯಾತ್ರೆ ಮೂಲಕ ದುಶ್ಚಟಗಳ ಕುರಿತು ಜಾಗೃತಿ ಮೂಡಿಸಿದರು.ಈ ವೇಳೆ ಮಾತನಾಡಿದ ಶ್ರೀ, ‘ಯೋಗ ಭ್ರಮ್ಮಿ. ಶ್ರೀ ಬಸವಲಿಗೇಶ್ವರ ಶಿವಾಚಾರ್ಯರು ಮಾತಾನಾಡಿ’ ನಾನು ಕಳೆದ ಒಂದು ತಿಂಗಳಿಂದ ಹಲಾವರು ಗ್ರಾಮದಲ್ಲಿ ಈಗಿನಾ ಯುವಕರು ಕುಡಿತ್ತಕ್ಕೆ ತಮ್ಮ ಜೀವ ಕಳೆದುಕೊಂಡು ಕುಟುಂಬದ ಗೋಳಾಟವನ್ನು ನೋಡಿ ನನಗೆ ಸಹಿಸಾಲಾರದ ದುಖ; ಬಂತು ಆ ಒಂದು ಕಾರಣಕ್ಕೆ ದುಶ್ಚಟಗಳಿಂದ ದೂರ ಮಾಡಲೂ ನಾನು ಜೋಳಿಗಿ ಹಿಡಿದು ಯಲಬುರ್ಗಾ ದಿಂದಾ ಶಿವಯೋಗಿ ಮಂದಿರಕ್ಕೆ ಪಾದಯಾತ್ರೆ ಜೋಳಿ ತಮ್ಮ ಬಳಿ ಬಂದಿರುತ್ತೆನೆ ದುಶ್ಚಟಗಳಿಂದ ಮುಕ್ತ ಗೊಳಿಸಲು ಪ್ರಯತ್ನಿಸಲಾಗುತ್ತಿದೆ ”ಎಂದರು.”ನಾನು ಭಿಕ್ಷೆಗೆ ಬಂದಿದ್ದೇನೆ. ನಿಮ್ಮಲ್ಲಿರುವ ದುಶ್ಚಟಗಳನ್ನು ಜೋಳಿಗೆಗೆ ಹಾಕಿ. ದುಶ್ಚಟದಿಂದ ಮಾನವ ಜನ್ಮ ದುರ್ಲಭವಾಗಿದೆ. ಬದುಕು ಸಾರ್ಥಕತೆಯಿಂದ ತುಂಬಿರಬೇಕು. ವ್ಯಸನ ಮುಕ್ತರಾಗಿ ಬಾಳಿದರೆ ಜೀವನ ಸಾರ್ಥಕವಾಗುತ್ತೆ. ವ್ಯಸನ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರು ಪಣತೊಡಬೇಕು. ಬಂಗಾರ ಆಭರಣ, ಹಣ ಉನ್ನತ ಕಟ್ಟಡಗಳು, ಐಷಾರಾಮಿ ಬದುಕು ದೇಶದ ಆಸ್ತಿಯಲ್ಲ, ಯುವಶಕ್ತಿ ದೇಶದ ಸಂಪತ್ತು. ಇದನ್ನರಿತು ಸ್ವಚ್ಛ ಭಾರತದ ಜತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು ” ಎಂದರು. ಶ್ರೀಗಳೊಂದಿಗೆ ಹೆಜ್ಜೆ ಹಾಕಿದರು.ಜನರ ಮೆಚ್ಚುಗೆ ಯಲಬುರ್ಗಾ ಪಟ್ಟಣ. ದಿಂದಾ ಬೆಳಗ್ಗೆ 7 ಗಂಟೆಗೆ ಜೋಳಿಗೆ ಹಿಡಿದು ಪಾದಯಾತ್ರೆ ಬೆಳೆಸಿದ್ದು, ಈ ಪಾದಯಾತ್ರೆಯಲ್ಲಿ ಜಾತಿಭೇಧ ಎನ್ನದೆ ಎಲ್ಲ ಸಮಾಜದ ಮನೆಗಳಿಗೆ ತೆರಳಿ ಅರಿವು ಮೂಡಿಸಿ, ದುಶ್ಚಟಕ್ಕೆ ವಾಲಬೇಡಿ ಎಂದು ಸಲಹೆ ನೀಡಿದರು. ಇದರಿಂದ ಬೋಳಟಗಿ ಗ್ರಾಮಸ್ಥರು ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿ ಬೆಂಬಲಿಸಿದರು.
ವರದಿ: ದೊಡ್ಡಬಸಪ್ಪ ಹಕಾರಿ tv8kannada ಯಲಬರ್ಗಾ