WPL: ಅಬ್ಬಬ್ಬಾ RCB ಯಿಂದ ರೋಮಾಂಚನಕಾರಿ ಚೇಸ್! ರಿಚಾ, ಪೆರ್ರಿ ಅಬ್ಬರಕ್ಕೆ ಗುಜರಾತ್ ಉಡೀಸ್

ವಡೋದರ: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ಗುಜರಾತ್ ಜೈಂಟ್ಸ್ (Gujarat Gaints) ತಂಡಗಳ ನಡುವೆ 2025ನೇ ಸಾಲಿನ ಡಬ್ಲ್ಯೂಪಿಎಲ್ (WPL) ಉದ್ಘಾಟನಾ ಪಂದ್ಯ ವಡೋದರಲ್ಲಿ (Vadodara) ನಡೆಯಿತು. ಈ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ತೋರಿದ ಆರ್‌ಸಿಬಿ (RCB) ಮಹಿಳಾ ತಂಡ ಗುಜರಾತ್ ವಿರುದ್ಧ ರೋಚಕವಾಗಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
202 ರನ್ ಚೇಸ್ ಮಾಡಿ ಗೆದ್ದ ಆರ್‌ಸಿಬಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾಜ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 201 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಬೃಹತ್ ಮೊತ್ತ ಚೇಸ್ ಮಾಡಿದ ಬೆಂಗಳೂರು ತಂಡಕ್ಕೆ ನಾಯಕ ಮಂದಾನ ಹಾಗೂ ವ್ಯಾಟ್ ಹಾಡ್ಜ್ ಒಂದಕ್ಕಿಂಗೆ ವಿಕೆಟ್ ಒಪ್ಪಿಸಿದರು, ಆದ್ರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಎಲ್ಲಿಸ್ ಪೆರ್ರಿ ಹಾಗೂ ಕೆಳ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ರಿಚಾ ಘೋಷ್ ಬ್ಯಾಟಿಂಗ್ ನೆರವಿನಿಂದ ರೋಚಕವಾಗಿ ಗೆದ್ದುಕೊಂಡಿತು.
ಆಶ್ಲೀ ಗಾರ್ಡ್ನರ್ ಅಬ್ಬರ
ಗುಜರಾತ್ ಪರವಾಗಿ ಅಬ್ಬರದ ಬ್ಯಾಟಿಂಗ್ ನಡೆಸಿದ ಆಶ್ಲೀ ಗಾರ್ಡ್ನರ್ ಕೇವಲ 37 ಎಸೆತಗಳಲ್ಲಿ 79 ರನ್ ಸಿಡಿಸಿ ಮಿಂಚಿದರು. ಇನ್ನೂ ಆರಂಭಿಕ ಆಟಗಾರ್ತಿ ಬೆತ್ ಮೂನಿ 56 ರನ್ ಸಿಡಿಸಿದರು. ಇವರ ಜೊತೆಗೆ ಡಿಯಾಂಡ್ರ ಡೋಟ್ಟಿನ್ ಸ್ಫೋಟಕ 25 ರನ್ ಸಿಡಿಸುವ ಮೂಲಕ ಗುಜರಾತ್ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.
ಬೌಲಿಂಗ್‌ನಲ್ಲಿ ರೇಣುಕಾ ಕಮಾಲ್
ಆರ್‌ಸಿಬಿ ಪರ ರೇಣುಕಾ ಸಿಂಗ್ 2 ವಿಕೆಟ್ ಪಡೆದು ಮಿಂಚಿದರು. ಇನ್ನೂ ಕನಿಕಾ ಅಹುಜಾ, ವಾರೆಹಾಮ್ ಹಾಗೂ ಪ್ರೇಮಾ ರಾವತ್ ತಲಾ ಒಂದು ವಿಕೆಟ್ ಪಡೆದುಕೊಂಡರು.
ರಿಚಾ ಘೋಷ್ ಬೌಂಡರಿ ಸಿಕ್ಸರ್ ಅಬ್ಬರ
ಬೃಹತ್ ಮೊತ್ತ ಚೇಸ್ ಮಾಡಲು ಮುಂದಾದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಅದರ ಹೊರತಾಗಿಯೂ ಸ್ಫೋಟಕ ಇನ್ನಿಂಗ್ಸ್ ಆಡಿದ ಎಲ್ಲಿಸ್ ಪೆರ್ರಿ 34 ಎಸೆತಗಳಲ್ಲಿ 57 ರನ್ (6 ಬೌಂಡರಿ & 2 ಸಿಕ್ಸರ್), ರಿಚಾ ಘೋಷ್ 27 ಎಸೆತಗಳಲ್ಲಿ 64 ರನ್ (7 ಬೌಂಡರಿ & 4 ಸಿಕ್ಸರ್) ಇವರಿಗೆ ಉತ್ತಮ ಸಾಥ್ ನೀಡಿದ ಕನಿಕಾ ಅಹುಜಾ 13 ಎಸೆತಗಳಲ್ಲಿ 30 ರನ್ (4 ಬೌಂಡರಿ) ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಆರ್‌ಸಿಬಿ ತಂಡ ಗೆಲುವಿನ ನಗೆ ಬೀರಿತು.
https://www.instagram.com/reel/DGD93OLMfZJ/?igsh=ZHF3MzVtazl2MGt5