ಕ್ರೀಡೆ

Champions Trophy- 2025: ಚಾಂಪಿಯ್ಸ್‌ ಟ್ರೋಫಿಗೆ ಇನ್ನು 4 ದಿನ ಮಾತ್ರ ಬಾಕಿ; ವಿನ್ನರ್‌, ರನ್ನರ್‌ಗೆ ಸಿಗುವ ಹಣವೆಷ್ಟು?

ಇದೆ ತಿಂಗಳ 19ರಿಂದ ಬಹು ನಿರೀಕ್ಷಿತ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಆರಂಭವಾಗಲಿದ್ದು, ಟೂರ್ನಿಗೆ ದಿನಗಣನೆ ಶುರುವಾಗಿದೆ.

ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದು, ಭಾರತದ ಪಂದ್ಯಗಳು ಮಾತ್ರ ದುಬೈನಲ್ಲಿ ನಡೆಯಲಿವೆ. ಟ್ರೋಫಿಯಲ್ಲಿ ಭಾಗವಹಿಸುವ ಮುನ್ನ ಬಹುತೇಕ ಎಲ್ಲಾ ತಂಡಗಳು ವಿವಿಧ ಪ್ರವಾಸ ಕೈಗೊಂಡು ಏಕದಿನ ಸರಣಿಗಳನ್ನಾಡುತ್ತಿದ್ದು, ಟ್ರೋಫಿಗಾಗಿ ಅಭ್ಯಾಸ ನಡೆಸಿವೆ.

ಇನ್ನು ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮುವ ತಂಡಕ್ಕೆ 20.8 ಕೋಟಿ ರೂಪಾಯಿ ಸಿಕ್ಕರೆ, ರನ್ನರ್‌ ಅಪ್‌ ಆಗುವ ತಂಡಕ್ಕೆ 10.4 ಕೋಟಿ ರೂಪಾಯಿ ಸಿಗಲಿದೆ ಹಾಗೂ ಸೆಮಿಫೈನಲ್‌ನಲ್ಲಿ ಸೋತು ಹೊರಬೀಳುವ ತಂಡಗಳಿಗೆ ತಲಾ 5.2 ಕೋಟಿ ರೂಪಾಯಿಗಳು ಲಭಿಸಲಿದೆ.

ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ

ಫೆ.19: ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್‌, ಕರಾಚಿ

ಫೆ.20: ಬಾಂಗ್ಲಾದೇಶ ವಿರುದ್ಧ ಭಾರತ, ದುಬೈ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ

ಫೆ.21: ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ, ನಾಷನಲ್‌ ಸ್ಟೇಡಿಯಂ, ಕರಾಚಿ

ಫೆ.22: ಅಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌, ಗಡಾಫಿ ಸ್ಟೇಡಿಯಂ, ಲಾಹೋರ್‌

ಫೆ.23: ಪಾಕಿಸ್ತಾನ ವಿರುದ್ಧ ಭಾರತ, ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ, ದುಬೈ

ಫೆ.24: ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್‌, ರಾವಲ್ಪಿಂಡಿ ಕ್ರಿಕೆಟ್‌ ಸ್ಟೇಡಿಯಂ, ರಾವಲ್ಪಿಂಡಿ

ಫೆ.25: ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ ಕ್ರಿಕೆಟ್‌ ಸ್ಟೇಡಿಯಂ

ಫೆ.26: ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್‌, ಗಡಾಫಿ ಸ್ಟೇಡಿಯಂ, ಲಾಹೋರ್‌

ಫೆ.27: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ರಾವಲ್ಪಿಂಟಿ ಕ್ರಿಕೆಟ್‌ ಸ್ಟೇಡಿಯಂ, ರಾವಲ್ಪಿಂಡಿ

ಫೆ.28: ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ, ಗಡಾಫಿ ಕ್ರೀಡಾಂಗಣ, ಲಾಹೋರ್‌

ಮಾರ್ಚ್‌.1: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌, ನ್ಯಾಷನಲ್‌ ಸ್ಟೇಡಿಯಂ, ಕರಾಚಿ

ಮಾರ್ಚ್‌.2: ನ್ಯೂಜಿಲೆಂಡ್‌ ವಿರುದ್ಧ ಭಾರತ, ದುಬೈ ಅಂತರಾಷ್ಟ್ರೀ ಕ್ರಿಕೆಟ್‌ ಸ್ಟೇಡಿಯಂ, ದುಬೈ

ಮಾರ್ಚ್‌.4: ಮೊದಲ ಸೆಮಿಫೈನಲ್‌, ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ,‌ ದುಬೈ

ಮಾರ್ಚ್‌.5: ಎರಡನೇ ಸೆಮಿಫೈನಲ್‌, ಗಡಾಫಿ ಸ್ಟೇಡಿಯಂ, ಲಾಹೋರ್‌

ಮಾರ್ಚ್‌.9: ಫೈನಲ್‌, ಗಡಾಫಿ ಸ್ಟೇಡಿಯಂ, ಲಾಹೋರ್‌ (ಭಾರತ ಅರ್ಹತೆ ಪಡೆದರೆ ದುಬೈನಲ್ಲಿ ಫೈನಲ್‌ ಪಂದ್ಯ )

ಮಾರ್ಚ್‌.10: ಮೀಸಲು ದಿನ


Related Articles

Leave a Reply

Your email address will not be published. Required fields are marked *

Back to top button