ಇತ್ತೀಚಿನ ಸುದ್ದಿ

ಸೇವಾಲಾಲ ಅವರು ಹಾಕಿ ಕೊಟ್ಡಿರುವ ಮಾರ್ಗದಲ್ಲಿ ಪ್ರತಿಯೊಬ್ವರು ನಡೆಯಬೇಕು : ಡಾ. ಮಲ್ಲಪ್ಪ ಕೆ. ಯರಗೋಳ ಅಭಿಮತ

ಮಸ್ಕಿ : ಸೇವಾಲಾಲ ಅವರು ಹಾಕಿ ಕೊಟ್ಡಿರುವ ಮಾರ್ಗದಲ್ಲಿ ಪ್ರತಿಯೊಬ್ವರು ನಡೆಯಬೇಕು ಎಂದು ತಹಶೀಲ್ದಾರ್ ಮಲ್ಲಪ್ಪ ಯರಗೋಳ ಅವರು ಹೇಳಿದರು.ಪಟ್ಟಣದ ತಹಶೀಲ್ ಕಚೇರಿಯಲ್ಲಿ ನಡೆದ ಸಂತ ಸೇವಾಲಾಲ ಅವರ ಜಯಂತಿ ಆಚರಣೆ ವೇಳೆ ಮಾತನಾಡಿದ ಅವರು, ಸಂತರು, ಶರಣರು ನಡೆದಾಡಿದ ಭಾರತ ದೇಶ ಸಂಸ್ಕಾರದ ಕಾರಣಕ್ಕೆ ಜಗತ್ತಿಗೆ ಹೆಸರ ವಾಸಿವಾಗಿದೆ. ಅಂಥ ಮಹಾನ್ ವ್ಯಕ್ತಿಗಳ ಜಯಂತಿಯನ್ನು ನಾವುಗಳು ಕೇವಲ ಆಚರಣೆಗೆ ಮಾತ್ರ ಸಿಮೀತ ಮಾಡಬಾರದು ಅವರ. ಆದರ್ಶ, ತತ್ವ ಸಿದ್ದಾಂತಗಳನ್ನು ಎಲ್ಲಾರು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಬಂಜಾರ ಸಮಾಜದ ಮುಖಂಡರು ಪಟ್ಟಣದಮದಗಲ್ಲ ರಸ್ತೆಯಲ್ಲಿನ ಸಂತ ಸೇವಾಲಾಲ ವೃತ್ತಕ್ಕೆ ಪೂಜೆ ಸಲ್ಲಿಸಿ ಹೂವಿನಹಾರ ಅರ್ಪಿಸಿದರು. ಬಳಿಕ‌ ಪುರಸಭೆ ಕಚೇರಿ, ಬಿಜೆಪಿ ಕಚೇರಿ,‌ ಕಾಂಗ್ರೆಸ್ ಕಚೇರಿ, ಶಾಸಕರ‌ ಕಚೇರಿಗೆ ಸಮಾಜದ ಮುಖಂಡರು ತೆರಳಿ ಸರಳವಾಗಿ ಸೇವಾಲಾಲ‌ ಜಯಂತಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಎಐಬಿಎಸ್ಎಸ್ ಸಂಘಟನೆ‌ ತಾಲೂಕ ಘಟಕ ಅಧ್ಯಕ್ಷ ಅಮರೇಶ‌ನಾಯ್ಕ, ಕೃಷ್ಣ ಜಾಧವ, ಭೀಮಶಪ್ಪ ಪೂಜಾರಿ, ಅಮರೇಶ ಪವಾರ, ದೇವಪ್ಪ ಜಾಧವ, ವಿಠ್ಠಲ ಕೆಳೂತ್, ಬಾಲು ಜಾಧವ, ಶೇಟಪ್ಪ ಕಾರಬಾರಿ, ಮೀಟಪ್ಪ ಮೂಡಲದಿನ್ನಿ, ಲೋಕೇಶ, ಪೋಮಾನಾಯ್ಕ, ವಿಕ್ರಮ ಸೇರಿದಂತೆ ಇನ್ನಿತರಿದ್ದರು.

ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button