ಇತ್ತೀಚಿನ ಸುದ್ದಿ
ಸಮಾಜದ ಉದ್ಧಾರಕ್ಕೆ ಉದಯಿಸಿದ ದೈವಿಪುರುಷ ಸಂತ ಸೇವಾಲಾಲ್ : ವಿಶ್ವನಾಥ ಹಿರೇಮಠ.

ಮಸ್ಕಿ : ಸಮಾಜದ ಉದ್ಧಾರಕ್ಕೆ ಉದಯಿಸಿದ ದೈವಿಪುರುಷ ಸಂತ ಸೇವಾಲಾಲ್ ಸತ್ಯ, ಅಹಿಂಸೆಯನ್ನು ಬೋಧಿಸಿದ್ದರು ಎಂದು ಶಾಲೆಯ ಮುಖ್ಯ ಗುರುಗಳಾದ ವಿಶ್ವನಾಥ ಹಿರೇಮಠ ರವರು ಹೇಳಿದರು.
ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಅಡವಿಭಾವಿ ತಾಂಡಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ ರತ್ನ ಡಾ.ಅಂಬೇಡ್ಕರ್ ವಸತಿ ಆಶ್ರಮ
ಶಾಲೆಯಲ್ಲಿ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿ, ‘ಮಹಾ ಪುರುಷರು ಸ್ವಾರ್ಥ ಬದಿಗೊತ್ತಿ ಸಮಾಜದ ಒಳಿತಾಗಿ ಬದುಕು ಸವಿಸಿದ್ದಾರೆ. ಶೋಷಿತ ಬಂಜಾರ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಂತ ಸೇವಾಲಾಲ್ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಆಚಾರ, ವಿಚಾರ, ಧರ್ಮಬೋಧನೆ ಮಾಡಿ ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನಿಸಿದ್ದಾರೆ ಎಂದರು.
ಈ ವೇಳೆ, ಶಿಕ್ಷಕರಾದ ಅಮೆರೇಶ ವಿಜಯ, ಇಂದಿರಾ ಬೇಗಂ, ಸಿಬ್ಬಂದಿಗಳಾದ ಸುಜಾತ, ಧನಸಿಂಗ, ಶೇಖರಪ್ಪ ಹಾಗೂ ಮಕ್ಕಳು
ಸೇರಿದಂತೆ ಇತರರು ಇದ್ದರು.
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ