ಕ್ರೀಡೆ

ವಿರಾಟ್ ಕೊಹ್ಲಿ ಹಿಂದಿಕ್ಕಿ ಹಾಶೀಮ್ ಆಮ್ಲಾ ವಿಶ್ವದಾಖಲೆ ಸರಿಗಟ್ಟಿದ ಬಾಬರ್ ಅಜಮ್; ಈ ಸಾಧನೆಗೈದ ಏಷ್ಯಾದ ಮೊದಲ ಆಟಗಾರ

ಕರಾಚಿ: ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 29 ರನ್ ಸಿಡಿಸಿದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರು ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 6000 ರನ್ ಪೂರೈಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಬಾಬರ್ ಪಾತ್ರರಾಗಿದ್ದಾರೆ.

ಇದರೊಂದಿಗೆ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದು ಹಾಶೀಮ್ ಆಮ್ಲಾ ಅವರ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.ಕಿವೀಸ್ನ ಜೇಕಬ್ ಡಫಿ ಎಸೆದ ಪಂದ್ಯದ 7ನೇ ಓವರ್ನ 3ನೇ ಎಸೆತದಲ್ಲಿ ಬಾಬರ್ ಅಜಮ್ ಬೌಂಡರಿ ಬಾರಿಸಿದಾಗ ಈ ಮೈಲಿಗಲ್ಲು ತಲುಪಿದರು. ಇದಕ್ಕೂ ಮುನ್ನ ಒಡಿಐ ಕ್ರಿಕೆಟ್ನಲ್ಲಿ ವೇಗವಾಗಿ 6,000 ರನ್ ಪೂರೈಸಿದ ದಾಖಲೆ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಹಾಶೀಮ್ ಆಮ್ಲಾ ಅವರ ಹೆಸರಿನಲ್ಲಿತ್ತು. ಅವರು ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ಅವರಂತೆಯೇ ಬಾಬರ್ ಕೂಡ ಅಷ್ಟೇ ಇನ್ನಿಂಗ್ಸ್ಗಳಲ್ಲಿ ಈ ಐತಿಹಾಸಿಕ ದಾಖಲೆಯನ್ನು ಮುಟ್ಟಿದ್ದಾರೆ. ಬಾಬರ್ ಅಜಮ್ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗವಾಗಿ ಈ ಮೈಲಿಗಲ್ಲು ತಲುಪಿದ ಏಷ್ಯಾದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.ಬಾಬರ್ ಅಜಮ್ ಏಕದಿನ ಕ್ರಿಕೆಟ್ನಲ್ಲಿ 123 ಇನ್ನಿಂಗ್ಸ್ಗಳಲ್ಲಿ 6 ಸಾವಿರ ರನ್ ಸಿಡಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಆಮ್ಲಾ ಕೂಡ 6000 ರನ್ ಮುಟ್ಟಲು ಇಷ್ಟೇ ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಭಾರತದ ವಿರಾಟ್ ಕೊಹ್ಲಿ 136 ಇನ್ನಿಂಗ್ಸ್ಗಳಲ್ಲಿ 6,000 ಏಕದಿನ ರನ್ ಗಳಿಸಿದ್ದರು. ಇದೀಗ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಇನ್ನು ಕೇನ್ ವಿಲಿಯಮ್ಸನ್ ಮತ್ತು ಡೇವಿಡ್ ವಾರ್ನರ್ ತಲಾ 139 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ವೇಗ 6000 ರನ್ ಗಳಿಸಿದ ಆಟಗಾರ

ಹಾಶೀಮ್ ಆಮ್ಲಾ – 123 ಇನ್ನಿಂಗ್ಸ್ಬಾಬರ್ ಅಜಮ್ – 123ವಿರಾಟ್ ಕೊಹ್ಲಿ – 136ಕೇನ್ ವಿಲಿಯಮ್ಸನ್ – 139ಡೇವಿಡ್ ವಾರ್ನರ್ – 139ಬಾಬರ್ ಅಜಮ್ ಕಳಪೆ ಪ್ರದರ್ಶನನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಬಾಬರ್ ರನ್ ಗಳಿಸಲು ಹೆಣಗಾಡಿದ್ದಾರೆ. ಫೈನಲ್ಗೂ ಮುನ್ನ ನಡೆದ ಹಿಂದಿನ ಎರಡು ಪಂದ್ಯಗಳಲ್ಲಿ 30ರ ಹರೆಯದ ಆಟಗಾರ ಕ್ರಮವಾಗಿ 10 ಮತ್ತು 23 ರನ್ ಗಳಿಸಿದ್ದರು. ಇದೀಗ ಫೈನಲ್ನಲ್ಲೂ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಬಾಬರ್ ಉತ್ತಮ ಆರಂಭ ಪಡೆದರ ಹೊರತಾಗಿಯೂ ಅದರ ಲಾಭ ಪಡೆಯಲು ವಿಫಲರಾದರು. ಬಲಗೈ ಬ್ಯಾಟರ್ 34 ಎಸೆತಗಳಲ್ಲಿ 29 ರನ್ ಗಳಿಸಿದ ನಂತರ ಪೆವಿಲಿಯನ್ ಮರಳಿದರು.ಪಾಕಿಸ್ತಾನದ ಮಾಜಿ ನಾಯಕ ಕೊನೆಯ ಬಾರಿಗೆ ಶತಕ ಸಿಡಿಸಿದ್ದು 2023ರಲ್ಲಿ. ಅದು ಕೂಡ ನೇಪಾಳದ ವಿರುದ್ಧ. ಅಂದಿನಿಂದ, ಬಾಬರ್ ಏಕದಿನ ಪಂದ್ಯಗಳಲ್ಲಿ ಇನ್ನೂ ಮೂರು ಅಂಕಿಯ ಗಡಿಯನ್ನು ದಾಟಿಲ್ಲ. ತ್ರಿಕೋನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯಿಂದ ಸೈಮ್ ಅಯೂಬ್ ಹೊರಗುಳಿದ ನಂತರ ಬಾಬರ್ 50 ಓವರ್ಗಳ ಸ್ವರೂಪದಲ್ಲಿ ಪಾಕಿಸ್ತಾನ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.

ನನ್ನನ್ನು ಕಿಂಗ್ ಎಂದು ಕರೆಯುವುದನ್ನು ನಿಲ್ಲಿಸಿ’

ಇತ್ತೀಚೆಗೆ ಬಾಬರ್ ಅಜಮ್ ಪಾಕಿಸ್ತಾನದ ಪತ್ರಕರ್ತರಿಗೆ ನನ್ನನ್ನು ‘ರಾಜ’ ಎಂದು ಕರೆಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ತ್ರಿಕೋನ ಸರಣಿಯಲ್ಲಿ ಆತಿಥೇಯರು ದಕ್ಷಿಣ ಆಫ್ರಿಕಾ ವಿರುದ್ಧ ದಾಖಲೆಯ ಚೇಸಿಂಗ್ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ದಯವಿಟ್ಟು ನನ್ನನ್ನು ಕಿಂಗ್ ಎಂದು ಕರೆಯುವುದನ್ನು ನಿಲ್ಲಿಸಿ. ನಾನು ರಾಜನಲ್ಲ. ನಾನು ಇನ್ನೂ ಅಲ್ಲಿಗೆ ಬಂದಿಲ್ಲ. ಈಗ ನನಗೆ ಹೊಸ ಪಾತ್ರಗಳಿವೆ’ ಎಂದು ಬಾಬರ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button