ರಾ.ಅಹಿಂದ ಸಂಘಟನೆ ಪದಾಧಿಕಾರಿಗಳ ನೇಮಕ ಆದೇಶ ಪತ್ರ ವಿತರಣಾ ಕಾರ್ಯಕ್ರಮ

ಚಾಮರಾಜನಗರದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆಯ ಪದಾಧಿಕಾರಿಗಳ ನೇಮಕ ಆದೇಶ ಪತ್ರ ವಿತರಣಾ ಕಾರ್ಯಕ್ರಮ
ಚಾಮರಾಜನಗರ.ಫೆ.14; ರಾಷ್ಟ್ರೀಯ ಅಹಿಂದ ಸಂಘಟನೆಯ ಪದಾಧಿಕಾರಿಗಳಿಗೆ ನೇಮಕ ಆದೇಶ ಪತ್ರವನ್ನು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ಶಿವಣ್ಣ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲಾ ಪದಾಧಿಕಾರಿಗಳು ನಮ್ಮ ಸಂಘದ ಬಲವರ್ಧನೆಗಾಗಿ ಸಂಘಟಿತರಾಗಬೇಕು ನಮ್ಮ ಸಂಘಟನೆಯೂ ರಾಜ್ಯದಾದ್ಯಂತ ವಿಸ್ತರಣೆಯಾಗಿದ್ದು,ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದು ರಾಷ್ಟ್ರೀಯ ಅಹಿಂದ ಸಂಘಟನೆಯನ್ನು ಸ್ಥಾಪಿಸಿದ್ದು, ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಎಲ್ಲಾ ವರ್ಗದವರನ್ನು ಸಂಘಟನೆಗೆ ಸೇರಿಸಿ ಮುಂದೆ ನಡೆಯುವ ಚುನಾವಣೆಗಳಲ್ಲಿ ನಮ್ಮ ಸಂಘಟನೆ ವತಿಯಿಂದ ರಾಜ್ಯದಾದ್ಯಂತ ಅಭ್ಯರ್ಥಿಗಳನ್ನು ಚುನಾವಣೆಗೆ ಹಾಕಲಾಗುವುದು, ನಮ್ಮ ಸಂಘಟನೆಯು ಜನಪರ, ಶೋಷಿತರ ಪರ ಜನಾನುರಾಗಿಯಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಎಸ್ ರೇವಣ್ಣ ಕೆರೆಹಳ್ಳಿ, ಉಪಾಧ್ಯಕ್ಷ ಸಿದ್ದಪ್ಪಾಜಿ, ಜಿಲ್ಲಾ ಮಾಧ್ಯಮ ಮುಖ್ಯ ವಕ್ತಾರ ಸಿದ್ದಪ್ಪಾಜಿ,ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಮೂರ್ತಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ತಾಲೂಕು ಅಧ್ಯಕ್ಷರಾದ ವೈಎಂ.ಮಾದೇಶ್, ಬೀರೇಶ್, ಮಹಮ್ಮದ್ ರಫೀಕ್, ಎಂ.ಕೆಂಪರಾಜು, ಮಹೇಶ್.ಬಿ ಮುಖಂಡರಾದ ಬೆಳ್ಳೇಗೌಡ, ಮಸಗಾಪುರ ಸ್ವಾಮಿ ಇದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ