ಬ್ಯಾಂಕ್ ಲಾಕರ್ನಲ್ಲಿ ₹500 ಕೋಟಿ ಮೌಲ್ಯದ ಲಿಂಗ ಪತ್ತೆ!
ತಿರುಚ್ಚಿ: ತಂಜಾವೂರಿನಲ್ಲಿ ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್ನಿಂದ 500 ಕೋಟಿ ರೂಪಾಯಿ ಮೌಲ್ಯದ ಪಚ್ಚೆ ಲಿಂಗವನ್ನು ವಿಗ್ರಹ ವಿಭಾಗದ ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಂಜಾವೂರಿನ ಮನೆಯೊಂದರಲ್ಲಿ ಪುರಾತನ ವಿಗ್ರಹಗಳನ್ನು ಇರಿಸಲಾಗಿದೆ ಎಂಬ ಸುಳಿವು ಮೇರೆಗೆ ಕಾರ್ಯಾಚರಣೆ ನಡೆಸಿದ್ದೇವೆ ಎಂದು ವಿಭಾಗದ ಮುಖ್ಯಸ್ಥರಾಗಿರುವ ಎಡಿಜಿಪಿ ಕೆ ಜಯಂತ್ ಮುರಳಿ ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಆರ್.ರಾಜಾರಾಂ ಮತ್ತು ಪಿ.ಅಶೋಕ್ ನಟರಾಜನ್ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ತಂಜಾವೂರಿನ ಅರುಳಾನಂದನಗರದ 7ನೇ ಅಡ್ಡರಸ್ತೆಯಲ್ಲಿರುವ ಲಾಂಗ್ವಾಲ್ ಹೋಮ್ಸ್ನಲ್ಲಿ ಶೋಧ ನಡೆಸಿತು.
ಸುಮಾರು 80 ವರ್ಷ ವಯಸ್ಸಿನ ಸಾಮಿಯಪ್ಪನ್ ಎಂಬುವರ ಪುತ್ರ ಎನ್.ಎಸ್.ಅರುಣ್ ಅವರನ್ನು ಲಿಂಗದ ಬಗ್ಗೆ ಪ್ರಶ್ನಿಸಿದರು. ತನ್ನ ತಂದೆ ಪುರಾತನವಾದ ಪಚ್ಚೆ ಲಿಂಗವನ್ನು ತಂಜಾವೂರಿನ ಬ್ಯಾಂಕ್ ಲಾಕರ್ನಲ್ಲಿ ಇರಿಸಿದ್ದರು ಎಂದು ಅರುಣ್ ತಿಳಿಸಿದ್ದಾರೆ. ನಂತರ ಅದನ್ನು ತನಿಖೆಗಾಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ .
530 ಗ್ರಾಂ ತೂಕದ ಲಿಂಗ 8 ಸೆಂ.ಮೀ. ಎತ್ತರ ಇದೆ. ಈ ಪುರಾತನ ಲಿಂಗವನ್ನು ಸಾಮಿಯಪ್ಪನ್ ಹೇಗೆ ಮತ್ತು ಎಲ್ಲಿಂದ ಪಡೆದರು ಎಂದು ಅರುಣ್ ಹೇಳಿಕೊಂಡಿದ್ದಾರೆ. ಈ ವಿಗ್ರಹದ ಬೆಲೆ 500 ಕೋಟಿ ರೂಪಾಯಿ ಎಂದು ರತ್ನಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ಧರ್ಮಪುರಂ ಅಧೀನಂ ಅವರಂತಹ ಕಸ್ಟಡಿಯನ್ಗಳೊಂದಿಗೆ ಪರಿಶೀಲನೆ ನಡೆಸಿದ್ದು, ಮೂಲ ಮೌಲ್ಯವನ್ನು ಖಚಿತಪಡಿಸಿದ್ದಾರೆ. ವೈಜ್ಞಾನಿಕ ವಿಶ್ಲೇಷಣೆಯನ್ನು ಮಾಡಿ ಅದು ಯಾವ ದೇವಾಲಯಕ್ಕೆ ಸೇರಿದೆ ಎಂಬುದನ್ನು ಗುರುತಿಸಬೇಕು ಎಂದು ಎಡಿಜಿಪಿ ಹೇಳಿದರು.
ದಕ್ಷಿಣ ಭಾರತದ ದೇವಾಲಯಗಳು ಮತ್ತು ಮಠಗಳಿಂದ ಪಚ್ಚೆ ಲಿಂಗಗಳ ಕಳ್ಳತನವು 80 ರ ದಶಕದ ಉತ್ತರಾರ್ಧದಿಂದ ನಡೆಯುತ್ತಿದೆ. 2016ರಲ್ಲಿ ನಾಗಪಟ್ಟಣಂ ಜಿಲ್ಲೆಯ ತಿರುಕುವಲೈ ಎಂಬಲ್ಲಿನ ಶಿವನ ದೇವಸ್ಥಾನದಿಂದ ನಾಪತ್ತೆಯಾಗಿದ್ದ ಲಿಂಗವೇ ಇದು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.