ಇತ್ತೀಚಿನ ಸುದ್ದಿ
ರಾಯಚೂರು : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ; ಅಂಗಡಿಗಳು ಭಸ್ಮ

ರಾಯಚೂರು: ನಗರದ ಟಿಪ್ಪುಸುಲ್ತಾನ್ ರಸ್ತೆಯ ಮೋತಿ ಮಸೀದಿಯ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಆಟೋ ಮೊಬೈಲ್ಸ್ ಶಾಪ್ ಸೇರಿ 5 ಅಂಗಡಿಗಳು ಬೆಂಕಿಗಾಹುತಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಎಂ.ಡಿ ವಾಜಿದ್, ಎಂ.ಡಿ ಜಬ್ಬಾರ್ ಹಾಗೂ ಎಂಡಿ ಗೌಸ್ ಅವರಿಗೆ ಸೇರಿದ ಆಟೋ ಮೊಬೈಲ್ ಶಾಪ್ ಗೆ ಬೆಂಕಿ ತಗುಲಿದೆ.
ಬೆಂಕಿಗೆ ಸಾವಿರಾರು ರೂಪಾಯಿ ವಸ್ತುಗಳು ಸುಟ್ಟು ಕರಕಲಾಗಿದೆ. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿ ಆಸ್ತಿಪಾಸ್ತಿ ರಕ್ಷಣೆ ಮಾಡಿದ್ದಾರೆ ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರವಿಂದ್ರ ಘಾಟ್ಗೆ, ಮಹಾಂತೇಶ್, ಶ್ರೀನಿವಾಸ್ ಡಿ.ಕೆ, ಸುಧಾಕರ್,ಮೆಹಬೂಬ್, ಮಹಮ್ಮದ್ ಸಮೀರ್ ,ಶಿವಕುಮಾರ ನೇತೃತ್ವದ ಅಗ್ನಿಶಾಮಕ ದಳದ ತಂಡ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ವರದಿ : ವಿಶ್ವನಾಥ್ ಸಾಹುಕಾರ್ tv8kannada ರಾಯಚೂರು