ಇತ್ತೀಚಿನ ಸುದ್ದಿ

ವಿದ್ಯಾರ್ಥಿಗಳು ತಂದೆ ತಾಯಿ ಮತ್ತು ಕಲಿಸಿದ ಗುರುಗಳಿಗೆ ವಿಧೇಯತೆ ಇರಲಿ:ಡಾ.ಮಲ್ಲಪ್ಪ ಯರಗೋಳ ತಹಶಿಲ್ದಾರ

ಮಸ್ಕಿ : ತಾಲ್ಲೂಕು ಹಾಲಾಪೂರ ಗ್ರಾಮದಲ್ಲಿರುವ ಜನನಿ ಪದವಿ ಪೂರ್ವ ಕಾಲೇಜು ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೂಡುಗೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಸಾನಿದ್ಯವನ್ನು ಜಂಗಮರಹಳ್ಳಿ ಪರಮಪೂಜ್ಯ ಶ್ರೀ ದಂಡಗುಂಡಪ್ಪ ತಾತ ವಹಿಸಿದ್ದರು, ಉದ್ಘಾಟನೆಯನ್ನು ತಹಶಿಲ್ದಾರರಾದ ಡಾ.ಮಲ್ಲಪ್ಪ ಯರಗೋಳ ನೆರವೇರಿಸಿ ನಂತರ ಮಾತನಾಡುತ್ತಾ ವಿದ್ಯಾರ್ಥಿಗಳು ಯಾವಾಗಲೂ ತಂದೆ ತಾಯಿ ಮತ್ತು ಕಲಿಸಿದ ಗುರುಹಿರಿಯರಿಗೆ ವಿಧಯತೆ ಇರಲಿ, ನಿರಂತರ ಅಭ್ಯಾಸ ಮತ್ತು ಸತತ ಪ್ರಯತ್ನ ಇದ್ದರೆ ಜೀವನದಲ್ಲಿ ಎನನ್ನು ಬೇಕಾದರೂ ಸಾಧಿಸಬಹುದು
ಅದಕ್ಕೆ ಸಮಾಜದಲ್ಲಿ ಅನೇಕ ಉದಾಹರಣೆ ಇವೆ, ಎಲ್ಲರೂ ಆದರ್ಶ ಮತ್ತು ಮೌಲ್ಯಯುತ ಜೀವನಕ್ಕೆ ಮಹತ್ವ ಕೊಡಬೇಕು ಎಂದು ಹೇಳಿದರು.

ಈ ವೇಳೆ, ಪಂಪಾಪತಿ ಹೂಗಾರ,ಶಿಕ್ಷಕರಾದ
ಮಂಜುನಾಥ ಹಾಲಾಪೂರ, ಕಾಲೇಜ್ ಪ್ರಾಚಾರ್ಯರಾದ ನಾಗೇಶ ಜಂಗಮರಹಳ್ಳಿ, ಸಿ ಆರ್ ಪಿ ಪ್ರಶಾಂತಗೌಡ ಪಾಟೀಲ್, ಅರವಿಂದ ಪಾಟೀಲ್, ಹನುಮಂತರಾವ್ ದೇಸಾಯಿ, ರವೀಂದ್ರಕುಮಾರ,ಡಾ. ವಿರುಪನಗೌಡ, ನಾಗಮ್ಮ ಚಿನ್ನಪ್ಪ, ಶ್ರೀಕಾಂತಮ್ಮ ನಾಗೇಶ,ಪತ್ರಕರ್ತರಾದ ಗ್ಯಾನಪ್ಪ,ಹನುಮಂತಪ್ಪ, ಸಿದ್ದಾರ್ಥ,ಮರಿಸ್ವಾಮಿ,ವಿರೇಶ,ಸಿದ್ದಪ್ಪ ,ಶ್ರೀದರ,ಅಮರೇಶ,ಹುಸೇನಭಾಷ ಇನ್ನಿತರರು ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button