ಇತ್ತೀಚಿನ ಸುದ್ದಿ

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಮರದಿಯಲ್ಲಿ ನೂತನ ಎಸ್ ಡಿ ಎಂ ಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.

ದೇವದುರ್ಗ : ತಾಲೂಕಿನ ಜಾಲಹಳ್ಳಿ ಸಮೀಪದ ಸೋಮನಮರಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಪರಮಣ್ಣ ತಂದೆ ನರಸಯ್ಯ ಹಾಗು ಉಪಾಧ್ಯಕ್ಷರಾಗಿ ನಾಗಮ್ಮ ಗಂಡ ಸೋಮಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವೀಕ್ಷಕರಾಗಿ ಆಗಮಿಸಿದ್ದ ಗ್ರಾಮ ಪಂಚಾಯತಿ ಸಿಬ್ಬಂದಿ ಶಿವಕುಮಾರ ,ಗ್ರಾಮ ಪಂಚಾಯತಿ ಸದಸ್ಯರಾದ ಸಾಬಣ್ಣ ಬುಂಕಲದೊಡ್ಡಿ , ಸನ್ನಬಾವಸಾಬ್ ತಂದೆ ಹುಸೇನ್ ಸಾಬ್ ಹಾಗು ಶಾಲೆಯ ಮುಖ್ಯ ಗುರುಗಳು ಶಿವಪುತ್ರಪ್ಪ ತಿಳಿಸಿದರು .
ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಮಾಡುವ ಉದ್ದೇಶದಿಂದ ಸೋಮವಾರ ಬೆಳಿಗ್ಗೆ ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಶಾಲಾ ಮುಖ್ಯೋಪಾಧ್ಯಾಯರು ಆಯ್ಕೆ ವಿಧಾನ , ಜಾತಿವಾರು ಸದಸ್ಯರ ಆಯ್ಕೆ,ಮತ್ತು ಮುಖ್ಯವಾಗಿ ಎಸ್ ಡಿ ಎಂ ಸಿ ಉದ್ದೇಶಗಳು ಮತ್ತು ಜವಾಬ್ದಾರಿಗಳನ್ನು ತಿಳಿಸಿದರು.
ಪಾಲಕರು ಚರ್ಚಿಸಿ ಸೂಚಕರು ಮತ್ತು ಅನುಮೋದಕರ ಅನುಮತಿ ಮೇರೆಗೆ ಜಾತಿವಾರು ಸದಸ್ಯರ ಆಯ್ಕೆ ಮಾಡುತ್ತ ಎಲ್ಲಾ ವರ್ಗದ ಸದಸ್ಯರ ಆಯ್ಕೆಮಾಡಿದರು ನಂತರ ಆಯ್ಕೆಯಾದ ಹದಿನೆಂಟು ಸದಸ್ಯರನ್ನು ಒಂದು ಕೊಠಡಿಯಲ್ಲಿ ಸೇರಿಸಿ ತಾವೇ ಚರ್ಚಿಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಅವಿರೋಧವಾಗಿ ಮಾಡಿಕೊಂಡು ತಿಳಿಸಿದರು . ನಂತರ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರ ಹೆಸರನ್ನು ಘೋಷಿಸಿ ಶಾಲಾ ವತಿಯಿಂದ ಸಾಂಕೇತಿಕವಾಗಿ ಅಭಿನಂದಿಸಿ ಸನ್ಮಾನಿಸಿದರು .

ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರಾದ . ಸಿದ್ದಪ್ಪ ಸುಂಡಿ , ಸಾಬಣ್ಣ ಬಂಕಾಲದೊಡ್ಡಿ, ಸಣ್ಣಬಸಾಬ್, ಗ್ರಾಮದ ಮುಖಂಡರಾದ
ಸಿದ್ದಣ್ಣ ದೇವರಮನಿ, ಬಸವರಾಜ್ ಯಾದವ್, ಯಂಕಣ್ಣ ಯಾದವ್, ಬಸವರಾಜ ಸ್ವಾಮಿ, ಜೋಸೆಫ್ ಬಡಿಗೇರ್,ನಾಗರಾಜ ಮಾಲಿ ಪಾಟೀಲ್, ನಿಂಗಪ್ಪ ನಾಯಕ, ಹುಸೇನ್ ಭಾಷಾ ಮಾಜಿ sdmc ಅಧ್ಯಕ್ಷರು, ಹನುಮಂತ ಮ್ಯಾಗಳಮನಿ, ಹನುಮಂತ ಯಲಾಗಟ್ಟ, ಬಸವರಾಜ ದಳಪತಿ,ನಬಿಸಾಬ್ ಹನುಮಂತ ಬಿಂಗಿ,
ಶಿಕ್ಷಣ ಪ್ರೇಮಿಗಳು, ಪೋಷಕರು ಗ್ರಾಮ ಪಂಚಾಯತಿ ಸದಸ್ಯರು . ಶಾಲಾ ಸಿಬ್ಬಂದಿಗಳು , ಬಿಸಿ ಊಟದ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button