ಇತ್ತೀಚಿನ ಸುದ್ದಿ

ಬಸ್ ನಿಲ್ದಾಣಗಳ ಪಾಲಿಗೆ ಸಂಜೀವಿನಿಯಾದ ಸಂಡೇ ಫಾರ್ ಸೋಷಿಯಲ್ ವರ್ಕ್

ಮಸ್ಕಿ : ರಾಯಚೂರು ಜಿಲ್ಲೆಯ ಸಾಮಾಜಿಕ ಸೇವಾ ಸಂಸ್ಥೆ ಆಗಿರುವ ಮಸ್ಕಿಯ ಅಭಿನಂದನ್ ಸಂಸ್ಥೆಯ ಸ್ವಚ್ಛತಾ ಅಭಿಯಾನವಾದ ಸಂಡೇ ಫಾರ್ ಸೋಷಿಯಲ್ ವರ್ಕ್ ಮೂಲಕ ಸ್ವಚ್ಛ ಭಾರತದ ನಿರ್ಮಾಣದತ್ತ ಹೆಜ್ಜೆಯನ್ನು ಹಾಕುತ್ತಿದೆ. ಈಗಾಗಲೇ ಒಂದು ವಾರವನ್ನೂ ಬಿಡದೇ 188 ಸೇವಾ ವಾರಗಳನ್ನು ಪೂರೈಸಿದ ಈ ಅಭಿಯಾನ 188 ನೇ ವಾರದ ಸೇವಾ ಕಾರ್ಯದಲ್ಲಿ ಲಿಂಗಸಗೂರು ತಾಲೂಕಿನ ಕುಮಾರಖೇಡ ಗ್ರಾಮದ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಬಣ್ಣವನ್ನು ಹಚ್ಚುವ ಮೂಲಕ ಬಸ್ ನಿಲ್ದಾಣಕ್ಕೆ ಹೊಸ ರೂಪವನ್ನು ನೀಡಲಾಗಿದೆ.

ಈ ವೇಳೆ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ ರವರು ಮಾತನಾಡಿ,

ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸನ್ನು ನಮ್ಮ ಗುರಿಯನ್ನಾಗಿ ಇಟ್ಟುಕೊಂಡು ಈ ಅಭಿಯಾನವನ್ನು ಆರಂಭಿಸಿದ್ದೇವೆ, ಈ ಅಭಿಯಾನದ ಮೂಲಕ ಈಗಾಗಲೇ ಹಲವಾರು ಶಾಲಾ ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳು, ದೇವಾಲಯಗಳು, ಚರ್ಚ್-ಮಸೀದಿಗಳು, ಉದ್ಯಾನವನಗಳು, ಬಸ್ ನಿಲ್ದಾಣಗಳು, ಸೇತುವೆಗಳು, ಸರ್ಕಾರಿ ಕಚೇರಿಗಳು ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಬಣ್ಣವನ್ನು ಹಚ್ಚಿ ಹೊಸ ರೂಪವನ್ನು ನೀಡಲಾಗಿದೆ. ನಮ್ಮ ತಂಡದ ಮುಖ್ಯ ಉದ್ದೇಶ ಸ್ವಚ್ಛ ಭಾರತದ ನಿರ್ಮಾಣವಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ನಿಮ್ಮ ಊರಿನಲ್ಲಿ ಯಾವುದೇ ಸರ್ಕಾರಿ ಶಾಲೆಗಳು ಹಾಗೂ ಸಾರ್ವಜನಿಕ ಸ್ಥಳದ ಸ್ವಚ್ಛತೆಗಾಗಿ ನಮ್ಮನ್ನು ಸಂಪರ್ಕಿಸಿ ಬನ್ನಿ ಗಾಂಧೀಜಿ ಕಂಡ ಕನಸನ್ನು ಸಾಕಾರಾಗೊಳಿಸೋಣ ಎಂದು ಕರೆ ನೀಡಿದರು.

ಈ ಸೇವಾ ಕಾರ್ಯದಲ್ಲಿ ಅಭಿನಂದನ್ ಸಂಸ್ಥೆಯ ಪದಾಧಿಕಾರಿಗಳಾದ ಶೃತಿ ಹಂಪರಗುಂದಿ, ಜಾಫರಮಿಯಾ, ಮಂಜುನಾಥ್ ಜೋಗಿನ್, ಮಲ್ಲಿಕಾರ್ಜುನ ಬಡಿಗೇರ್, ಕಾರ್ತಿಕ್ ಜೋಗಿನ್, ಕಿಶೋರ್, ಪ್ರಜ್ವಲ್ ಹಾದಿಮನಿ, ಯಂಕೋಬ ಮತ್ತಿರರು ಪಾಲ್ಗೊಂಡಿದ್ದರು.

ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button