ವಿಶ್ವದ ಟಾಪ್ 10 ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿ ಬಿಡುಗಡೆ: ವಿಶ್ವನಾಯಕನ ʼವಿಶ್ವಗುರು ಭಾರತʼ ಎಲ್ಲಿ?

ಫೋರ್ಬ ಸಂಸ್ಥೆ ವಿಶ್ವದ ಟಾಪ್ 10 ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತ ಸ್ಥಾನ ಪಡೆದುಕೊಂಡಿಲ್ಲ. ಈ ಪಟ್ಟಿಯಲ್ಲಿ ಯುಎಸ್‌ಎ ಅಗ್ರಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಚೀನಾ ಇದೆ ಹಾಗೂ ರಷ್ಯಾ ಮೂರನೇ ಸ್ಥಾನ ಪಡೆದುಕೊಂಡಿದೆ.
ನಾಯಕತ್ವ, ಆರ್ಥಿಕ ಪ್ರಭಾವ, ರಾಜಕೀಯ ಶಕ್ತಿ, ಉತ್ತಮ ಅಂತರರಾಷ್ಟ್ರೀಯ ಮೈತ್ರಿಗಳು ಮತ್ತು ಮಿಲಿಟರಿ ಶಕ್ತಿ ಸೇರಿದಂತೆ ಹಲವಾರು ನಿರ್ಣಾಯಕ ಅಂಶಗಳ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ನರೇಂದ್ರ ಮೋದಿಯವರ ಕಾಲನ್ನು ಎಳೆದಿದೆ.
ನರೇಂದ್ರ ಮೋದಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಳಸುತ್ತಿದ್ದ ʼವಿಶ್ವನಾಯಕ ಮೋದಿʼ, ʼವಿಶ್ವಗುರು ಮೋದಿʼ ಎಂಬ ಪದಗಳನ್ನೇ ಬಳಸಿರುವ ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ 10 ʼಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕಿಲ್ಲ ಸ್ಥಾನ. ಇದೇನಾ ವಿಶ್ವನಾಯಕನ ವಿಶ್ವಗುರು ಭಾರತ..?ʼ ಎಂದು ಬರೆದುಕೊಂಡು ಮೋದಿ ಅವರನ್ನು ಟ್ರೋಲ್ ಮಾಡಿದೆ.
ಫೋರ್ಬ್ಸ್ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಆರ್ಥಿಕವಾಗಿ ಶಕ್ತಿಶಾಲಿಯಾಗಿರುವ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ…
https://x.com/INCKarnataka/status/1887186622111793311?t=vF6VnB0PPISKuOgGZnNOrA&s=19
