ಇತ್ತೀಚಿನ ಸುದ್ದಿ
ಹೈ ಮಾಸ್ ಲೈಟ್ ಸ್ವಿಚ್ ಆಫ್!

ಕೊಟ್ಟೂರು:- ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಸರಕಾರಿ ಶಾಲೆಯ ಹತ್ತಿರ ಶಾಸಕರ ಅನುದಾನದಲ್ಲಿ 2024 ರ ಮಾರ್ಚ್ ತಿಂಗಳಿನಲ್ಲಿ ನಿರ್ಮಿಸಲಾಗಿರುವ ಹೈ ಮಾಸ್ ಲೈಟ್ ಕಂಬದಲ್ಲಿ ಇದುವರೆಗೂ ದೀಪ ಜೋಡಣೆಯಾಗಿಲ್ಲ. ಸಾರ್ವಜನಿಕರಿಗೆ ಉಪಯೋಗವಾಗಲೆಂದು ಲಕ್ಷಾಂತರ ರೂ. ಖರ್ಚು ಮಾಡಿ ಸ್ಥಾಪಿಸಿದ್ದ ಹೈಮಾಸ್ಟ್ ಕಂಬ ಬೆಳಕಿಲ್ಲದೇ ಅಧಿಕಾರಿಗಳು, ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಿರುಪಯುಕ್ತವಾಗಿ ನಿಂತಿದೆ.
ಹೀಗಾಗಿ ನಿತ್ಯ ಅಲ್ಲಿ ಓಡಾಡುವ ಸಾರ್ವಜನಿಕರು, ವಿದ್ಯಾರ್ಥಿಗಳು ದಿನಾಲೂ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಪತ್ರಿಕೆ ಸುದ್ಧಿ ಮೂಲಕವಾದರೂ ಸಂಬಂಧಪಟ್ಟವರು ಎಚ್ಚೆತ್ತುಗೊಳ್ಳಲಿ ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಿದ್ದಾರೆ.
