ಕ್ರೈಂ

ರಾಯಚೂರು |ಮುದುಗಲ್ | ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: ಕೆಲವರಿಗೆ ಗಾಯ

ಲಿಂಗಸುಗೂರು : ತಾಲ್ಲೂಕಿನ ಮುದಗಲ್ ಪಟ್ಟಣದ ಹೊರವಲಯದಲ್ಲಿ ಗುರುವಾರ ಸರ್ಕಾರಿ ಬಸ್‌ನ ಎಕ್ಸಲ್‌ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಚಿಕ್ಕ ಲಕ್ಕಿಹಾಳದಿಂದ ಲಿಂಗಸುಗೂರು ಕಡೆ ಹೊರಟ ಬಸ್ ಮುದಗಲ್- ಲಿಂಗಸುಗೂರು ರಸ್ತೆಯಲ್ಲಿ ಕರಿಗಾರ ಹೊಲದ ಹತ್ತಿರ ಉರುಳಿಬಿದ್ದಿದೆ.

ಘಟನೆಯಲ್ಲಿ 33 ಮಹಿಳೆಯರು, 6 ಜನ ಪುರುಷರು ಹಾಗೂ 30 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮುದಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವರದಿ : ಮುಸ್ತಾಫಾ tv8kannada ಲಿಂಗಸುಗೂರು

Related Articles

Leave a Reply

Your email address will not be published. Required fields are marked *

Back to top button